ಟಾಲಿವುಡ್‌ನ ಜನಪ್ರಿಯ ಹಾಸ್ಯ ನಟ ವೇಣು ಮಾಧವ್ ಅವರು ಬುಧವಾರ ಮಧ್ಯಾಹ್ನ 12.20ಕ್ಕೆ ನಿಧನರಾಗಿದ್ದಾರೆ. ತೆಲುಗಿನ ಖ್ಯಾತ ಹಾಸ್ಯ ನಟ ವೇಣು ಮಾಧವ್ ನಿಧನರಾಗಿರುವುದು ಇಡೀ ಟಾಲಿವುಡ್ ಇಂಡಸ್ಟ್ರಿಗೆ ತುಂಬಲಾರದ ನಷ್ಟವಾಗಿದೆ. 
ವೇಣು ಮಾದವ್ ಅವರ ಸಾವಿಗೆ ಮುಖ್ಯ ಕಾರಣವೆಂದರೆ ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ 39 ವರ್ಷ ವಯಸ್ಸಾಗಿತ್ತು. ವೇಣು ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಚಿತ್ರರಂಗದ ಟಾಲಿವುಡನ ಜನಪ್ರಿಯ ಹಾಸ್ಯನಟ. ವೇಣು ಮಾಧವ್ (39) ನಿಧನರಾಗಿದ್ದಾರೆ. ಲಿವರ್ ಮತ್ತು ಕಿಡ್ನಿ ಸಮಸ್ಯೆಯಿಂದ ವೇಣು ಮಾಧವ್ ಬಳಲುತ್ತಿದ್ದ ಅವರನ್ನು ಸಿಕಿಂದ್ರಾಬಾದ್‌ನ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ವೇಣು ಮಾದವ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಕ್ಷೀಣಿಸಿದ ಕಾರಣ ಐಸಿಯುಗೆ ರವಾನಿಸಲಾಗಿತ್ತು. ಐ ಸಿ ಯು ನಲ್ಲಿ ಭಾರೀ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ನಿಧರನಾಗಿದ್ದಾರೆ. ಬುಧವಾರ ಮಧ್ಯಾಹ್ನ 12.20ಕ್ಕೆ ಕೊನೆಯುಸಿರೆಳೆದಿದ್ದಾಗಿ ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಕುಟುಂಬದವರ ದುಖ: ತೀವ್ರ ಜಾಸ್ತಿಯಾಗಿದೆ. 


ಆಂಧ್ರ ಪ್ರದೇಶದ ಸೂರ್ಯಪೇಟ್ ಜಿಲ್ಲೆಯ ಕೋದಾಡ್ ಎಂಬಲ್ಲಿ ಜನಿಸಿದ ವೇಣು ಮಾಧವ್, ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದರು. ಅಷ್ಟೇ ಅಲ್ಲ ಕೋದಾಡ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರವನ್ನೂ ಸಲ್ಲಿಸಿದ್ದರು. ತೆಲುಗಿನಲ್ಲಿ ಸುಮಾರು 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ಕೆಲವು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. 1996ರಲ್ಲಿ ಬಿಡುಗಡೆಯಾದ 'ಸಂಪ್ರದಾಯಂ' ಸಿನಿಮಾ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟರು. 2016ರಲ್ಲಿ ಡಾ.ಪರಮಾನಂದಯ್ಯನವರ ಸ್ಟೂಡೆಂಟ್ಸ್ ಗ್ಯಾಂಗ್ ಸಿನಿಮಾ ವೇಣು ಮಾಧವ್ ಅಭಿನಯದ ಕೊನೆಯ ಚಿತ್ರ.

ಇತ್ತೀಚೆಗೆ ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ವೇಣುಮಾಧವ್​​​, ಕಳೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕೋಡದ್ ಎಂಬ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಇದೀಗ ಇವರ ಅಭಿಮಾನಿಗಳು ಹಾಗೂ ಸಿನಿ ಪ್ರಪಂಚದಲ್ಲಿ ತುಂಬಲಾರದ ನಷ್ಟವಾಗಿದೆ. 


మరింత సమాచారం తెలుసుకోండి: