ಬೆಂಗಳೂರು: ಸ್ಯಾಂಡಲ್ ವುಡ್ ಸಿನಿ ಇತಿಹಾಸದಲ್ಲೇ ದಾಖಲೆ ಬರೆದ ದುರ್ಯೋಧನನ ಅಭಿಮಾನಿಗಳು ಪ್ರಸ್ತುತ ಸಮಾಜ ಸೇವೆಯಲ್ಲಿ ಕಾರ್ಯ ನಿರತರಾಗಿದ್ದಾರೆ. ಅರೇ, ಯಾರಪ್ಪಾ ಈ ದುರ್ಯೋಧನ, ಅವರ ಅಭಿಮಾನಿಗಳಾರು ಎಂದು ಆಶ್ಚರ್ಯವಾಯ್ತಾ. ಅದನ್ನು ನಾವು ಹೇಳ್ತೀವಿ ಕೇಳಿ. 


ಇತ್ತೀಚೆಗಷ್ಟೇ ತೆರೆಕಂಡ ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅದ್ಭುತವಾಗಿ ನಟಿಸಿ ಖ್ಯಾತಿ ಗಳಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಖತ್ ಸೌಂಡ್ ಮಾಡಿದ್ದರು. ಇದೀಗ ಅವರ ಅಮಾನಿಗಳು ಸಮಾಜ ಮುಖಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಅದು ಹೇಗೆಂದರೆ ಸರ್ಕಾರಿ ಶಾಲೆಯನ್ನು ದತ್ತು ಪಡೆಯುವ ಮೂಲಕ ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅವರ ಅಭಿಮಾನಿಗಳು ಸದ್ದಿಲ್ಲದಂತೆ ಸಮಾಜ ಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಅವರ ಸಾಮಾಜಿಕ ಸೇವೆ ಎಲ್ಲೆಡೆ ಈಗ ಪ್ರಶಂಸೆ ವ್ಯಕ್ತವಾಗಿದೆ.
ಇತ್ತೀಚೆಗೆ ದರ್ಶನ್​ ಅಭಿಮಾನಿಗಳ ಸಂಘ 'ಡಿಬಾಸ್ ಕಂಪನಿ ​' ಹಾಸನ ಜಿಲ್ಲೆಯ ಸಕಲೇಶಪುರದ ಕುಗ್ರಾಮವಾದ ರಾಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ತೆಗೆದುಕೊಂಡಿದ್ದಾರೆ.


ಈ ಮೂಲಕ ಇನ್ನೇರಡು ವರ್ಷ ಶಾಲೆಗೆ ಬೇಕಾದ ಮೂಲ ಸೌಕರ್ಯ, ಪಿಠೋಪಕರಣ, ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳನ್ನು ಪೂರೈಸುವ ಭರವಸೆ ನೀಡಿದ್ದು, ಈಗಾಗಲೇ ಈ ಪಟ್ಟಿಯನ್ನು ಪಡೆದು ಶೀಘ್ರದಲ್ಲಿಯೇ ಶಾಲೆಗೆ ಸೌಕರ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದ್ದಾರೆ.  ಈ ಕೆಲಸ ಪ್ರಸ್ತುತ  ಎಲ್ಲಾ ಕಡೆಯಲ್ಲೂ ಪ್ರಶಂಸೆಗೆ ಒಳಗಾಗಿದ್ದು, ಇದರಿಂದ ರಾಮೇನಹಳ್ಳಿಯ ಜನ ಹಾಗೂ ಶಾಲೆಯ ಸಿಬ್ಬಂದಿಗಳಲ್ಲಿ ಸಂತಸ ಮೂಡಿದೆ. ಇವರ ಈ ಕಾರ್ಯ ಈಗ ಶಿಕ್ಷಣ ಸಚಿವರ ಗಮನಕ್ಕೂ ಬಂದಿದ್ದು, ಅವರ ಕೆಲಸಕ್ಕೆ ಶಹಬ್ಬಾಸ್​ ಗಿರಿ ಹೇಳಿದ್ದಾರೆ. ಅವರ ಈ ಕೆಲಸಕ್ಕೆ ಹೃದಯತುಂಬಿ ಧನ್ಯವಾದಗಳನ್ನು ಹೇಳಿದ್ದಾರೆ.


ದರ್ಶನ್​​ ಅಭಿಮಾನಿಗಳು  ಕೇವಲ ನಾಯಕರ ಆರಾಧನೆಯಲ್ಲಿ ತೊಡಗದೆ ಈ ರೀತಿಯ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಎಲ್ಲರಿಗೂ  ಆದರ್ಶಪ್ರಾಯವಾಗಿದ್ದಾರೆ. ಕನ್ನಡ ಸಿನಿಮಾದಲ್ಲಿಯೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್​ ಹೊಂದಿದ್ದಾರೆ. ಈಗಾಗಲೇ ದರ್ಶನ್​ ಹೆಸರಿನಲ್ಲಿ ಅನೇಕ ಸಮಾಜಿಕ ಕಾರ್ಯದಲ್ಲಿ ಅವರು ನಿರತರವಾಗಿದ್ದು, ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ರಾಮೇನಹಳ್ಳಿ ಗ್ರಾಮಸ್ಥರು ಕೂಡ ಆಶಿಸಿದ್ದಾರೆ.


మరింత సమాచారం తెలుసుకోండి: