ಬಾಲಿವುಡ್ ನಲ್ಲಿ ಆಯುಷ್ಮಾನ್ ಚಿತ್ರ ತೆರೆ ಕಂಡಿರುವುದು ನಿಮಗೆಲ್ಲಾ ಗೋತ್ತೆ ಇದೆ. ಸದ್ಯಕ್ಕೆ ಈಗಿನ ವಿಶೇಷತೆ ಏನಪ್ಪಾ ಅಂದ್ರೆ ಬಾಲಿವುಡ್ ಬಾಕ್ಸಾಫೀಸ್​ನ ಹೊಸ ಸುಲ್ತಾನನಾಗಿ ಆಯುಷ್ಮಾನ್ ಖುರಾನ ಮೆರೆಯುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಮೂಲಕ ಬಿಟೌನ್​ನಲ್ಲಿ ಹೊಸ ಹಲ್​ಚಲ್ ಎಬ್ಬಿಸಿದ ನಟ ಇದೀಗ ಮತ್ತೊಂದು ಸೂಪರ್ ಹಿಟ್​ ಚಿತ್ರ ನೀಡಿದ್ದಾರೆ. ಕಳೆದ 20 ದಿನಗಳ ಹಿಂದೆ ತೆರೆಕಂಡಿದ್ದ 'ಡ್ರೀಮ್ ಗರ್ಲ್' ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮತ್ತೊಮ್ಮೆ ಆಯುಷ್ಮಾನ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ.


ಹಾಗೆಯೇ ಚಿತ್ರದ ಗಳಿಕೆಯ ನಾಗಾಲೋಟ ಮುಂದುವರೆದಿದ್ದು, ಮೂರೇ ವಾರದಲ್ಲಿ 'ಡ್ರೀಮ್ ಗರ್ಲ್' ಕಲೆಕ್ಷನ್ 100 ಕೋಟಿ ದಾಟಿದೆ. ಈ ಮೂಲಕ ನೂರು ಕೋಟಿ ಕ್ಲಬ್ ಸೇರಿದೆ. ಕೇವಲ 16 ದಿನಗಳಲ್ಲಿ ಚಿತ್ರದ ಒಟ್ಟು ಗಳಿಕೆ 120.50 ಕೋಟಿ ರೂಪಾಯಿಗಳು ದಾಟಿದ್ದು, ಭಾನುವಾರದ ಹೊತ್ತಿಗೆ 130 ಕೋಟಿ ಕಲೆಕ್ಷನ್ ದಾಟಲಿದೆ ಎಂದು ಅಂದಾಜಿಸಲಾಗಿದೆ.


ಇನ್ನು 'ಬಾಹುಬಲಿ' ಮೊದಲ ಭಾಗ ಹಿಂದಿಯಲ್ಲಿ ಒಟ್ಟಾರೆ 120 ಕೋಟಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ಕೇವಲ ಮೂರು ವಾರದೊಳಗೆ 'ಡ್ರೀಮ್ ಗರ್ಲ್' ಅಳಿಸಿ ಹಾಕಿದೆ. ಅಲ್ಲದೆ ಶೀಘ್ರದಲ್ಲೇ ಶಾರುಕ್ ಖಾನ್ ಅಭಿನಯದ 'ಜಬ್ ತಕ್ ಹೈ ಜಾನ್'(120.65 ಕೋಟಿ), ಸಲ್ಮಾನ್ ಖಾನ್​ರ 'ಟ್ಯೂಬ್ ಲೈಟ್'(121.25 ಕೋಟಿ), ಹೃತಿಕ್ ರೋಷನ್​ ಅವರ 'ಅಗ್ನಿಪತ್' (123.05 ಕೋಟಿ), ರಜನಿಕಾಂತ್​ರ 'ಕಬಾಲಿ' (126.58 ಕೋಟಿ), ಅಕ್ಷಯ್ ಕುಮಾರ್ ಅಭಿನಯದ 'ರುಸ್ತುಂ' (127.49 ಕೋಟಿ) ಮತ್ತು 'ಏರ್ ಲಿಫ್ಟ್' (129 ಕೋಟಿ) ಚಿತ್ರಗಳ ಕಲೆಕ್ಷನ್ ದಾಖಲೆಗಳನ್ನು ಆಯುಷ್ಮಾನ್ ಬದಿಗೊತ್ತಲಿದ್ದಾರೆ.


ಕಾಮಿಡಿ ಜಾನರ್​ನಲ್ಲಿ ಮೂಡಿ ಬಂದಿರುವ 'ಡ್ರೀಮ್ ಗರ್ಲ್'​ ಚಿತ್ರವನ್ನು ರಾಜ್ ಶಾಂದ್ಲಿಯಾ ನಿರ್ದೇಶನ ಮಾಡಿದ್ದು, ಆಯುಷ್ಮಾನ್ ಖುರಾನಗೆ ನಾಯಕಿಯಾಗಿ ನುಸ್ರುತ್ ಬರುಚಾ ಕಾಣಿಸಿಕೊಂಡಿದ್ದಾರೆ. 'ಡ್ರೀಮ್ ಗರ್ಲ್​' ಎಂಬ ಸ್ವಪ್ನ ಸುಂದರಿಯ ಅವತಾರದೊಂದಿಗೆ ಆಯುಷ್ಮಾನ್ ಇದೀಗ ಬಾಕ್ಸಾಫೀಸ್​ನಲ್ಲಿ ಕಿಂಗ್ ಆಗಿ ಮೆರೆಯುತ್ತಿದ್ದಾರೆ. ಪ್ರಸ್ತುತ ಆಯುಷ್ಮಾನ್ ಖುರಾನಾ ಸಿನಿಮಾ ಬಾಲಿವುಡ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಪ್ರಸ್ತುತ ಇದೀಗ120 ಕೋಟಿ ಗಳಿಸಿದ್ದು ದಾಖಲೆಯಾಗಿದೆ.


మరింత సమాచారం తెలుసుకోండి: