ಅಂತರ್  ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆದ ಚಿತ್ರವೊಂದು ಈ ವಾರ ತೆರೆಗೆ ಅಪ್ಪಳಿಸಲಿದೆ. ಇ ಚಿತ್ರ ನೋಡಲು ಮಕ್ಕಳು ಸೇರಿದಂತೆ ನೀವೆಲ್ಲರು ಸಜ್ಜಾಗಿರಿ. ಅದ್ಯಾವ ಚಿತ್ರ ಎಂದು ತಿಳಿಯಲು ಮುಂದೆ ಓದಿ. ಆ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರ ಬೇರಾವುದೂ ಅಲ್ಲ, ಜ್ಞಾನಂ ಚಿತ್ರ. ಇಬ್ಬರು ಮಕ್ಕಳ ನಡುವೆ ನಡೆಯುವ ಸಿನಿಮಾವೇ ಜ್ಞಾನಂ. ಬುದ್ದಿಮಾಂದ್ಯ ಹಾಗೂ ಸಾಮಾನ್ಯ ಹುಡುಗನ ನಡುವಿನ ಕಥೆ ಚಿತ್ರದಲ್ಲಿದ್ದು. ಒಂದೇ ದಿನ ಹುಟ್ಟುವ ಇಬ್ಬರು ಮಕ್ಕಳ ನಡುವೆ ಇರುವ ವ್ಯತ್ಯಾಸವನ್ನೇ ಇಟ್ಟುಕೊಂಡು ಕಥೆ ರಚಿಸಿದ್ದಾರೆ ನಿರ್ದೇಶಕ ವರದರಾಜ್ ವೆಂಕಟ್ ಸ್ವಾಮಿ. 


ಚಾಲೆಂಜಿಂಗ್ ಅಂಡ್ ವೆರಿ ಟಫ್ ಸಬ್ಜೆಕ್ಟ್ ಕೈಗೆತ್ತಿ ಕೊಂಡಿರೋ ವರದ ರಾಜ್ ವೆಂಕಟ್​​ ಸ್ವಾಮಿ ಮೊದಲ ಪ್ರಯತ್ನಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಯುಎಸ್, ಬ್ರೆಝಿಲ್, ಕೋಲ್ಕತ್ತಾ ಫಿಲ್ಮಂ ಫೆಸ್ಟ್​ನಲ್ಲಿ ಪ್ರದರ್ಶನ ಕಂಡಿರುವ ಜ್ಞಾನಂ ಚಿತ್ರ ಬೆಸ್ಟ್ ಫಿಲ್ಮಂ ಅವಾರ್ಡ್ ಪಡೆದುಕೊಂಡಿದೆ. ಸುಮಾರು ಹನ್ನೊಂದು ಅಂತರಾಷ್ಟೀಯ ಪ್ರಶಸ್ತಿಗಳನ್ನು ರಿಲೀಸ್​​ಗೂ ಮೊದಲೇ ತನ್ನ ಮಡಿಲಿಗೆ ಹಾಕಿಕೊಂಡಿರುವುದು ಅದರ ವಿಶೇಷತೆ ಯಾಗಿದೆ. ಧ್ಯಾನ್ ಹಾಗೂ ಲೋಹಿತ್ ಇಬ್ಬರು ಮಕ್ಕಳು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಶೈಲಶ್ರೀ ಸುದರ್ಶನ್, ಪ್ರಣಯ ಮೂರ್ತಿ, ರಾಧಿಕಾ ಶೆಟ್ಟಿ, ಆಶಾ ಸುಜಯ್, ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ರೋಹಿತ್ ಸಂಗೀತ, ಸಂತೋಷ್ ದಯಾಳನ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ವೇಣು ಭಾರಧ್ವಾಜ್, ರಾಜು ಭಾರಧ್ವಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಈ ಶುಭ ಶುಕ್ರವಾರ ಈ ಜ್ಞಾನಂ ಚಿತ್ರ ತೆರೆಗೆ ಬರ್ತಿದೆ.


ಸಮಾಜಕ್ಕೆ ಉತ್ತಮ ಮೆಸೇಜ್ ನೀಡುವ ಕಂಟೆಂಟ್ ಚಿತ್ರದಲ್ಲಿದೆ ಎನ್ನಲಾಗಿದೆ. ಆದ್ದರಿಂದಲೇ 12 ಕ್ಕೂ ಹೆಚ್ಚು ಇಂಟರ್ ನ್ಯಾಷನಲ್ ಅವಾರ್ಡ್ ಗಳನ್ನು ಪಡೆದಿರುವುದು. ಯಾವ ಮಟ್ಟಕ್ಕೆ ಪ್ರೇಕ್ಷಕ ಜ್ಞಾನಂ ಪ್ರೋತ್ಸಾಹಿಸುತ್ತಾನೆ ಅನ್ನೋದನ್ನು ಈ ವಾರ ಜ್ಞಾನಂ ಚಿತ್ರ ಬಿಡುಗಡೆ ಯಾಗುವ ತನಕ ಕಾದು ನೋಡ ಬೇಕು.


మరింత సమాచారం తెలుసుకోండి: