ಬಾಲಿವುಡ್ ಖ್ಯಾತ ಮತ್ತು ಸ್ಟೈಲಿಷ್ ಸ್ಟಾರ್ ನಟ ಹೃತಿಕ್ ರೋಷನ್ ಅವರ ಹೊಸ ಚಿತ್ರ ವಾರ್. ಬಿಡುಗಡೆಯಾಗಿ ಕಳೆದೊಂದು ವಾರದಿಂದ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ಆಯಕ್ಷನ್ ಭರಿತ ಥ್ರಿಲ್ಲರ್ ಬಾಲಿವುಡ್ ಚಿತ್ರ 'ವಾರ್' ಬೆಳ್ಳಿತೆರೆಯಲ್ಲಿ ಭರ್ಜರಿ ಹವಾ ಎಬ್ಬಿಸುತ್ತಿದೆ.

ಚಿತ್ರ ಬಿಡುಗಡೆಯಾದ ದಿನದಿಂದ ಇದುವರೆಗೆ ಒಟ್ಟಾರೆ 228.50 ಕೋಟಿ ರೂಪಾಯಿಗಳನ್ನು ಈ ಚಿತ್ರ ಬಾಚಿಕೊಂಡಿದ್ದು ಈ ಕಲೆಕ್ಷನ್ ಫೋರ್ಸ್ ಈ ವೀಕೆಂಡ್ ನಲ್ಲಿ ಇನ್ನೂ ಹೆಚ್ಚಾಗುವ ನಿರೀಕ್ಷೆಯನ್ನು ಸಿನಿ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ. ವಾರ್ ಚಿತ್ರದ ಒಟ್ಟಾರೆ ಕಲೆಕ್ಷನ್ ಬುಧವಾರ 51.60 ಕೋಟಿ ರೂ., ಗುರುವಾರ 23.10 ಕೋಟಿ ರೂ., ಶುಕ್ರವಾರ 21.30 ಕೋಟಿ ರೂ., ಶನಿವಾರ 27.60 ಕೋಟಿ ರೂ., ಆದಿತ್ಯವಾರ 36.10 ಕೋಟಿ ರೂ., ಸೋಮವಾರ 20.60 ಕೋಟಿ ರೂ., ಮಂಗಳವಾರ 27.75 ಕೋಟಿ ರೂ., ಬುಧವಾರ 11.20 ಕೋಟಿ ರೂ., ಗುರುವಾರ 9.25 ಕೋಟಿ ರೂ., ಕಲೆಕ್ಷನ್ ದಾಖಲೆ ಬರೆದಿದೆ.


ಈ ಮೂಲಕ ಬಿಡುಗೆಯಾದ ವಾರದಲ್ಲೇ 200 ಕೋಟಿ ಸಂಗ್ರಹದ ದಾಖಲೆಯನ್ನೂ ಸಹ 'ವಾರ್' ತನ್ನದಾಗಿಸಿಕೊಂಡಿದೆ.ಇನ್ನು 2019ರ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಯನ್ನೂ ಸಹ ವಾರ್ ತನ್ನ ಹೆಸರಿಗೆ ಬರೆಸಿಕೊಂಡಿದೆ. ವಾರ್ ಕೇವಲ 9 ದಿನಗಳಲ್ಲಿ 238.35 ಕೋಟಿ ರೂ. ಸಂಗ್ರಹ ಮಾಡಿದ್ದರೆ, ಭಾರತ್ 9 ದಿನಗಳಲ್ಲಿ 180.05 ರೂ. ಸಂಗ್ರಹ ಮಾಡಿದೆ. ಇನ್ನು ಕಬೀರ್ ಸಿಂಗ್ ಒಂದು ವಾರದಲ್ಲಿ 134.42 ಕೋಟಿ ರೂ. ಸಂಗ್ರಹ ಮಾಡಿದ್ದರೆ, ಮಿಷನ್ ಮಂಗಲ್ 8 ದಿನದಲ್ಲಿ 128.16 ಕೋಟಿ ರೂ. ಬಾಚಿ ಕೊಂಡಿತ್ತು, ಪ್ರಭಾಸ್ ಅಭಿನಯದ ಸಾಹೋ (ಹಿಂದಿ ಅವತರಣಿಕೆ) 7 ದಿನಗಳಲ್ಲಿ 116.03 ಕೋಟಿ ರೂಪಾಯಿಗಳನ್ನು ಬಾಚಿ ಕೊಂಡಿತ್ತು. ವಾರ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ


మరింత సమాచారం తెలుసుకోండి: