ನಿರ್ಮಾಣ: ಮುಕೇಶ್ ಹೆಗ್ಡೆ
ನಿರ್ದೇಶನ: ಅರ್ಜುನ್ ಲೂಯಿಸ್, ಅಕ್ಷಿತ್ ಶೆಟ್ಟಿ
ತಾರಾಗಣ: ಪ್ರಣವ್ ಹೆಗ್ಡೆ, ಅಹಲ್ಯಾ ಸುರೇಶ್, ಪ್ರಕಾಶ್ ತುಮಿನಾಡ್, ರಾಧಿಕಾ ರಾವ್ ಇತರರು. 
ರೇಟಿಂಗ್: *


ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ ಲುಂಗಿ. ಕಳೆದ ಶುಕ್ರವಾರವಷ್ಟೇ ತೆರೆಕಂಡಿದೆ. ಪಕ್ಕಾ ಹಳ್ಳಿ ಸೊಗಡಿನ ಈ ಚಿತ್ರ ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದೆ. ಆಧುನಿಕ ಯುವಕರ ಸ್ವಂತ ಬಿಸಿನೆಸ್ ಬಯಕೆಯಂತೆ ಲುಂಗಿ ಚಿತ್ರದ ನಟ ಎಂಜಿನಿಯರಿಂಗ್ ಓದಿರುವ ರಕ್ಷಿತ್ ಶೆಟ್ಟಿಗೆ (ಪ್ರಣವ್ ಹೆಗ್ಡೆ) ಬಯಕೆಯಾಗಿರುತ್ತದೆ. ಯಾವುದೋ ಒಂದು ಕಂಪನಿಯ ಮೂಲೆಯಲ್ಲಿ ಕಂಪ್ಯೂಟರನ್ನು ಟಿಕ್ಕು ಟಿಕ್ಕು ಎನ್ನುವ ಹಾಗೆ ಒತ್ತುವುದು ಇಷ್ಟವಿರಲಿಲ್ಲ. ಆದರೆ, ಅವನ ಅಪ್ಪನಿಗೆ ಮಗ ಒಂದೊಳ್ಳೆ ನೌಕರಿಗೆ ಸೇರಿದರೆ ಸಾಕು ಎಂಬ ಅಭಿಲಾಷೆ ಇರುತ್ತದೆ. 


ನವಿರು ಪ್ರೇಮದ ಕಥೆ ಕೂಡ ಚಿತ್ರದ ಭಾಗವಾಗಿ ಮೂಡಿಬಂದಿದೆ. ರಕ್ಷಿತ್ ಮತ್ತು ಪಕ್ಕದ ಮನೆಯ ಲೋಲಿಟಾ (ಅಹಲ್ಯಾ ಸುರೇಶ್) ನಡುವಿನ ಚಿಗುರು ಪ್ರೇಮವು ಮುಖ್ಯ ಕಥೆಯ ನಡುವೆ ಹದವಾಗಿ ಹರಿಯುತ್ತ ಇರುತ್ತದೆ. ಸಿನಿಮಾದ ಮೊದಲಾರ್ಧವನ್ನು ತುಂಬಿಕೊಂಡಿರುವುದು ರಕ್ಷಿತ್‌ನ ಕಾಲೇಜು ಜೀವನ, ಅಲ್ಲಿನ ತರಲೆಗಳ ಚಿತ್ರಣ ಹಾಗೂ ತಾನಾಗಿಯೇ ಏನಾದರೂ ಮಾಡಬೇಕು ಎಂಬ ಬಯಕೆ ಚಿಗುರೊಡೆಯುವ ಕ್ಷಣಗಳು. ತನ್ನದೇ ಆದಂತಹ ಹೊಸತೊಂದನ್ನು ಮಾಡಬೇಕೆಂಬುದೇ  ಅವನ ಬಯಕೆ. ನಿಜಕ್ಕೂ, ಲುಂಗಿಯ ಕಥೆ ಪ್ರಾರಂಭವಾಗುವುದೇ ದ್ವಿತೀಯಾರ್ಧದಲ್ಲಿ. 


ಎಲ್ಲಾ ಚಿತ್ರಗಳಂತೆ ನಾಯಕನಟನ ಬಗ್ಗೆ ಅತಿಯಾದ ಬಿಲ್ಡಪ್, ಡೈಲಾಗ್ಸ್, ಗಳಿಲ್ಲ, ವಾಸ್ತವದ ಪ್ರೇಮಕಥೆಯಿದೆ, ಆಡಂಬರ ಕೂಡ ಇಲ್ಲದ ಸಿನಿಮಾ ಲುಂಗಿ. ಮಂಗಳೂರು ಭಾಗದ ಕನ್ನಡವನ್ನು ಬಹುತೇಕ ಯಥಾವತ್ತಾಗಿ ಬಳಸಿಕೊಂಡಿದ್ದು, ಆ ಶೈಲಿಯ ಕನ್ನಡದ ಸೊಗಡಿಗೆ ಎಲ್ಲಿಯೂ ಧಕ್ಕೆ ಬಾರದ ಹಾಗೆ ನೋಡಿಕೊಂಡಿದ್ದು ಚಿತ್ರದ ಪ್ಲಸ್‌ ಪಾಯಿಂಟ್‌ಗಳಲ್ಲಿ ಸೇರಿವೆ. ಪ್ರಸಾದ್ ಶೆಟ್ಟಿ ಸಂಗೀತ, ರಿಜೊ ಪಿ ಜಾನ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ. ಒಟ್ಟಾರೆ ಚಿತ್ರ ಒಂದು ರೀತಿಯಲ್ಲಿ ಒ ಕೆ ಎನ್ನಬಹುದು. ಕರಾವಳಿ ಭಾಗದ ಜನರಿಗೆ ತುಂಬಾ ಇಷ್ಟವಾಗಲಿದೆ.


మరింత సమాచారం తెలుసుకోండి: