ಟಾಲಿವುಡ್ ನಾ ಡ್ಯಾನ್ಸಿಂಗ್ ಸ್ಟಾರ್, ಮಲ್ಟಿ ಆಕ್ಟಿಂಗ್ ಸ್ಟಾರ್ ಸಮಂತಾ ತನ್ನದೇ ಆಕ್ಟಿಂಗ್ ಮೂಲಕ ಭಾರೀ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಕ್ಕಿನೇನಿ ನಾಗಚೈತನ್ಯ ಅವರೊಂದಿಗೆ ಯಾರಿಗೂ ಗೊತ್ತಿಲ್ಲದೆ, ಸದ್ದಿಲ್ಲದೆ ಡೇಟಿಂಗ್ ಮಾಡಿದ ಈ ಜೋಡಿ ಲವ್ ಫೇರ್ಸ್ ಆಗಿ ಕೊನೆಗೂ ಮದುವೆಯಾದರೂ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ಸಹ ಸಿನಿಮಾ ಮಾಡುತ್ತಲೇ ಇದ್ದಾರೆ. ಇದೀಗ ಸಮಂತಾ ಅವರು ಚಿತ್ರವೊಂದಕ್ಕೆ ಗುಡ್ ಬೈ ಹೇಳಿದ್ದು, ಬಹುತೇಕರಿಗೆ ಶಾಕ್ ಆಗಿದೆ. 


ಮದುವೆಯಾದ ನಂತರ ಸಮಂತಾ ಅಭಿನಯಿಸಿದ ರಂಗಸ್ಥಲಂ, ಮಜಿಲಿ, ಓ ಬೇಬಿ, ಸೂಪರ್​ ಡಿಲಕ್ಸ್​ ಸಿನಿಮಾಗಳು ಹಿಟ್ ಆದ ಸಿನಿಮಾಗಳು. ಇವುಗಳೊಂದಿಗೆ ಸಮಂತಾ ತಮಿಳು ಸಿನಿಮಾ 96ನ ತೆಲುಗು ರಿಮೇಲ್​ನಲ್ಲೂ ಅಭಿನಯಿಸುತ್ತಿದ್ದರು. ಆದರೆ ಈಗ ಈ ಬ್ಯೂಟಿ ರಿಮೇಕ್​ ಚಿತ್ರಕ್ಕೆ ಗುಡ್​ ಬೈ ಹೇಳಿದ್ದಾರೆ. ನಟಿ ಸಮಂತಾ ವಿವಾಹದ ನಂತರವೂ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಸಕ್ಸಸ್​ಫುಲ್​ ನಟಿ. ಅವರಿಗೆ ವಿವಾಹವಾದ ನಂತರವೂ ಅಭಿಮಾನಿಗಳ ಸಂಖ್ಯೆಯಲ್ಲಿ ಯಾವುದೇ ಕೊರತೆಯಾಗಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಪುಲ್ ಮಿಂಚಿಂಗ್  ಆಗಿದ್ದಾರೆ.


ಸಮಂತಾ ತಮಿಳು ಸಿನಿಮಾ '96'ನ ತೆಲುಗು ರಿಮೇಲ್​ನಲ್ಲೂ ಅಭಿನಯಿಸುತ್ತಿದ್ದರು. ಆದರೆ ಈಗ ಈ ಬ್ಯೂಟಿ ಚಿತ್ರಕ್ಕೆ ಗುಡ್​ ಬೈ ಹೇಳಿದ್ದಾರೆ. ಸಮಂತಾ ಗುಡ್​ ಬೈ ಹೇಳಿದರು ಎಂದ ಕೂಡಲೇ ಶಾಕ್​ ಆಗುವ ಅಗತ್ಯವಿಲ್ಲ. '96' ತಮಿಳು ಸಿನಿಮಾದ ತೆಲುಗು ರಿಮೇಕ್​ನ ಚಿತ್ರೀಕರಣಕ್ಕೆ ತೆರೆ ಎಳೆಯಲಾಗಿದೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ವಿಷಯವನ್ನು ಸಮಂತಾ ತಮ್ಮ ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಈ ಸಿನಿಮಾ ವಿಶೇಷವಾದದ್ದು, ಎಂದಿನಂತೆ ಈ ಪಾತ್ರವೂ ನನಗೆ ಸವಾಲಾಗಿತ್ತು. ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆ ಎಂದು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ತಮಿಳಿನಲ್ಲಿ ವಿಜಯ್​ ಸೇತುಪತಿ ಹಾಗೂ ತ್ರಿಶಾ ಅಭಿನಯಿಸಿದ್ದ ಪಾತ್ರಗಳಲ್ಲಿ ಸಮಂತಾ ಹಾಗೂ ಶರ್ವಾನಂದ ತೆಲುಗಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ನಿರ್ದೇಶನ ಮಾಡಿದ್ದ ನಿರ್ದೇಶಕ ಪ್ರೇಮ್​ಕುಮಾರ್​ ಅವರೇ ತೆಲುಗಿನಲ್ಲೂ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ಚಿತ್ರ ಶೀಘ್ರವಾಗಿ ತೆರೆಗೆ ಅಪ್ಪಳಿಸಲಿದೆಯಂತೆ.


మరింత సమాచారం తెలుసుకోండి: