ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ ಸವರ್ಣ ದೀರ್ಘ ಸಂಧಿ. ಈ ಚಿತ್ರದಲ್ಲಿ ನೀವು ಈ ಮೇಲಿನ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದಾಗಿದೆ. ಕನ್ನಡದ ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರೋ ಚಿತ್ರವೇ ಸವರ್ಣದೀರ್ಘ ಸಂಧಿ.  ಸವರ್ಣ ದೀರ್ಘ ಸಂಧಿ ಚಿತ್ರ ಶೀರ್ಷಿಕೆ ಕೇಳಿದಾಕ್ಷಣವೇ ಯಾರಿಗೇ ಆದರೂ ಈ ಚಿತ್ರದ ಕಥೆಯೇನು ಎಂಬ ಆಸಕ್ತಿ ಹುಟ್ಟಿಕೊಳ್ಳೋದು ಸಾಮಾನ್ಯ. ಅಷ್ಟಕ್ಕೂ ಸವರ್ಣದೀರ್ಘ ಸಂಧಿ ಎಂಬುದು ವ್ಯಾಕರಣದ್ದೊಂದು ಸಂಧಿಯ ಹೆಸರು.


ಆದರೆ ನಿರ್ದೇಶಕರು ಇದು ಓರ್ವ ಗ್ಯಾಂಗ್ ಸ್ಟಾರ್  ಕಥೆಯಾಧಾರಿತ ಚಿತ್ರವೆಂಬ ಬಗ್ಗೆ ಕೆಲ ಮಾಹಿತಿ ಬಿಚ್ಚಿಡುತ್ತಾರೆ. ಹಾಗಾದರೆ ವ್ಯಾಕರಣದ ಸಂಧಿಗೂ ಹೊಡೆದಾಟ ಬಡಿದಾಟದ ಗ್ಯಾಂಗ್‌ಸ್ಟರ್‌ಗೂ ಎತ್ತಣಿಂದೆತ್ತಣ ಸಂಬಂಧವೆಂಬ ಕುತೂಹಲ ಯಾರನ್ನಾದರೂ ಕಾಡದಿರೋದಿಲ್ಲ. ಇದಕ್ಕೆ ಸಿಗೋ ಉತ್ತರದಲ್ಲಿಯೇ ಇಡೀ ಕಥೆಯ ಅಸಲೀ ಸತ್ವ ಅಡಿಗಿರಲಿದೆ. ಸಾಮಾನ್ಯವಾಗಿ ರೌಡಿಸಂ ಅಂದರೆ ಅಲ್ಲಿರುವವರಿಗೆ ಭಾಷಾ ಜ್ಞಾನವೇ ಸರಿಯಾಗಿರೋದಿಲ್ಲ ಎಂಬಂಥಾ ಭಾವನೆ ಇದೆ. ಅಂಥಾದ್ದರಲ್ಲಿ ಅಂಥಾ ರೌಡಿಸಂಗೂ ವ್ಯಾಕರಣಕ್ಕೂ ಸಂಬಂಧ ಕಲ್ಪಿಸೋದು ಸಾಧ್ಯವೇ? ಆದರೆ ಇಲ್ಲಿನ ಕಥೆ ಅದಕ್ಕೆ ಪೂರಕವಾಗಿದೆ.


ಇಲ್ಲಿನ ರೌಡಿಸಂ ನಾಯಕ ಮಾಮೂಲಿ ರೌಡಿಗಳಂತಲ್ಲ. ಆತ ಎಂಥವರೂ ಅಚ್ಚರಿಗೀಡಾಗುವಂತೆ ವ್ಯಾಕರಣದಲ್ಲಿ ಪಂಟರ್ ಆಗಿರುತ್ತಾನೆ. ಆತ ಎತ್ತಾಕಿಕೊಂಡು ಬಂದು ಕೂಡಿ ಹಾಕಿಕೊಂಡವರಿಗೆಲ್ಲ ವ್ಯಾಕರಣ ಸಂಬಂಧಿತ ಪ್ರಶ್ನೆಗಳನ್ನೆಸೆಯುತ್ತಾನೆ. ಸರಿಯಾದ ಉತ್ತರ ಸಿಗದಿದ್ದರೆ ಗೂಸಾ ಗ್ಯಾರೆಂಟಿ! ಈ ಒನ್ ಲೈನ್ ಸ್ಟೋರಿಯೇ ಇಷ್ಟು ಮಜವಾಗಿರುವಾಗ ಇಡೀ ಚಿತ್ರ ಅದೆಷ್ಟು ಮಜಭರಿತವಾಗಿ ಮೂಡಿ ಬಂದಿದೆ ಅನ್ನೋದು ಯಾರಿಗಾದರೂ ಅರ್ಥವಾಗುತ್ತದೆ. 
ಅಷ್ಟಕ್ಕೂ ಇದರ ನಿರ್ದೇಶಕ ಕಂ ಹೀರೋ ವೀರೇಂದ್ರ ಶೆಟ್ಟಿ ಕೂಡಾ ನಗಿಸೋದರಲ್ಲಿ ಪಂಟರ್. ಆ ಬಲದಿಂದಲೇ ಅವರು ಚಾಲಿಪೋಲಿಲು ಚಿತ್ರವನ್ನು ನಿರ್ದೇಶನ ಮಾಡಿ ದಾಖಲೆಯನ್ನೇ ಬರೆದಿದ್ದರು. ಆ ಚಿತ್ರ ತುಳು ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲಾಗುವಂಥಾ ಒಂದಷ್ಟು ದಾಖಲೆಗಳ ರೂವಾರಿಯಾಗಿತ್ತು. ಲೂಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್ ಕುಮಾರ್, ಮನೋಮೂರ್ತಿ ಮತ್ತು ವೀರೇಂದ್ರ ಶೆಟ್ಟಿ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿರುವುದು.


మరింత సమాచారం తెలుసుకోండి: