ಬಿಗ್ ಬಾಸ್, ಕನ್ನಡದಲ್ಲಿ ಭಾನುವಾರವಷ್ಟೇ ಪ್ರಾರಂಭವಾದ ಈ ರಿಯಾಲಿಟಿ ಶೋ ನ ನಿರೂಪಕ ಮತ್ತು ಖ್ಯಾತ ಚಿತ್ರನಟ ಸುದೀಪ್ ಅವರ ಹಳೇ ಲವ್ ಸ್ಟೋರಿ ಇಲ್ಲಿದೆ ನೋಡಿ.  ಪ್ರೇಮಕಾವ್ಯದ ನಾಯಕನ ಪ್ರೇಮಕಥೆಗಳು ಒಂದೆರಡಲ್ಲ. ಇವನ ಕಥೆ ಹೇಳ್ತಾ ಹೇಳ್ತಾ ಕಿಚ್ಚ ಸುದೀಪ್​, ತಮ್ಮ ಹಳೇ ಲವ್​ ಸ್ಟೋರಿನ ಹೆಂಡ್ತಿಗೆ ಹೇಳೋಕ್ಕೋಗಿ ತಡ್ಬಡಾಯಿಸಿದ್ದಾರೆ.


ಡಾರ್ಲಿಂಗ್​ ಡಾರ್ಲಿಂಗ್​ ಕಮ್​ ಕಮ್​ ಡಾರ್ಲಿಂಗ್​ ಅಂತ ಕುಣಿದ ಕೃಷ್ಣ. ನಿರ್ದೇಶಿಸಿ ನಟಿಸಿರೋ ಸಿನಿಮಾ  ವಿಭಿನ್ನ ಟೈಟಲ್​ ಅಷ್ಟೆ ಅಲ್ಲ, ಅಷ್ಟೆ ಸೊಗಸಾದ ಕಥೆಯನ್ನ ಈ ಚಿತ್ರದಲ್ಲಿ ಕೃಷ್ಣ ಹೇಳೋಕ್ಕೆ ಬರ್ತಿದ್ದಾರೆ. ಕಿಚ್ಚ ಸುದೀಪ್​​ ವಾಯ್ಸ್​​ ಓವರ್​ ಹಿನ್ನಲೆಯಲ್ಲೆ ಮೂಡಿ ಬಂದಿರೋ ಲವ್​ ಮಾಕ್​ಟೇಲ್ ಟ್ರೈಲರ್​ ಸೂಪರ್​ ಆಗಿದೆ. ಬಿಡುಗಡೆಗೂ ಮುನ್ನವೇ ಲವ್ ಮಾಕ್ ಟೇಲ್ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದೆ. ಕೃಷ್ಣ ಟಾಕೀಸ್ ಬ್ಯಾನರ್​​ನಲ್ಲಿ ನಿರ್ಮಾಣವಾಗಿರೋಲವ್​ ಮಾಕ್​ಟೇಲ್ ಚಿತ್ರದಲ್ಲಿ ಮಿಲನಾ ನಾಗರಾಜ್​, ಡಾರ್ಲಿಂಗ್​ ಕೃಷ್ಣಗೆ ನಾಯಕಿಯಾಗಿ ಜೊತೆಯಾಗಿದ್ದಾರೆ.ಹೈಸ್ಕೂಲ್​ನಿಂದ ಮದುವೆವರೆಗೂ ಯುವಕನೊಬ್ಬನ ಲೈಫ್​ನಲ್ಲಿ ಬಂದೋಗುವ ಲವ್​​ ಸ್ಟೋರಿಗಳನ್ನ ಕೊಂಚ ತಮಾಷೆಯಾಗಿ ಚಿತ್ರದಲ್ಲಿ ಹೇಳಲಾಗ್ತಿದೆ. ಒನ್ಸ್​ ಅಗೇನ್​ ಡಾರ್ಲಿಂಗ್​​ ಕೃಷ್ಣ ಲವರ್​ ಬಾಯ್​ ಆಗಿದ್ದಾರೆ. 


ಬಹಳ ಸಮಯ ತಗೊಂಡು ಬಹಳ ಒಳ್ಳೆಯ ಕಥೆ ಹೆಣೆದು, ತಾವೇ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮೊದಲ ನೋಟದಲ್ಲೇ ಲವ್​ ಮಾಕ್​ ಟೇಲ್​ ಸಿನಿಮಾ ಟ್ರೈಲರ್​ ಗಮನ ಸೆಳೀತಿದೆ. ಕಿಚ್ಚ ಸುದೀಪ್​ ವಾಯ್ಸ್​​ ಈ ಕಲೆಗಾರನ ಲವ್​ ಸ್ಟೋರಿಗೆ ಮತ್ತಷ್ಟು ಶಕ್ತಿ ತಂದಿದೆ. ಇದರಿಂದ ಕಿಚ್ಚನ ಅಭಿಮಾನಿಗಳು ಸಹ ಸಖತ್ ಖುಷಿಯಾಗಿದ್ದಾರೆ. ಇನ್ನು ಚಿತ್ರದ ಟ್ರೈಲರ್​ ಲಾಸ್ಟ್​ ಪಂಚ್​ ಅಂತು ಸಖತ್​ ಮಜವಾಗಿದೆ. ಹಳೇ ಲವ್​ಸ್ಟೋರಿನ ಹೆಂಡ್ತಿಗೆ ಹೇಳೊಕ್ಕೆ ನಾಯಕ ಭಯ ಪಡೋದು ನೋಡಿ, ಕಿಚ್ಚ ಹುಮ್ಮಸ್ಸಿನಲ್ಲಿ ಮೈ ಮರೆತು ಏನೋ ಹೇಳಿ ಆಮೇಲೆ ತಡಬಡಾಯಿಸಿದ್ದಾರೆ.ಲವ್​ ಮಾಕ್​ಟೇಲ್​ ಸಿನಿಮಾ ಟ್ರೈಲರ್​​ನಲ್ಲಿ ಹೊಸತನ ಕಾಣಿಸ್ತಿದೆ. ಟ್ರೈಲರ್​ನಲ್ಲಿರೋ ಕೊನೆ ಪಂಚ್​ ಅದಕ್ಕೆ ಬೆಸ್ಟ್ ಎಕ್ಸಾಂಪಲ್. ಸದ್ಯ ಶೂಟಿಂಗ್​ ಮುಗಿಸಿ, ಟ್ರೈಲರ್​ ಲಾಂಚ್​ ಮಾಡಿರೋ ಟೀಂ, ಶೀಘ್ರದಲ್ಲೇ ತೆರೆ ಕಾಣಲಿದೆ.


మరింత సమాచారం తెలుసుకోండి: