ಕಿಸ್, ಸ್ಯಾಂಡಲ್ ವುಡ್ ನಲ್ಲಿ ಎಲ್ಲೆಲ್ಲಿಯೂ ಈಗ ಕಿಸ್ ಹವಾ. ಹೌದು, ಇತ್ತೀಚೆಗಷ್ಟೇ ತೆರೆ ಕಂಡ ಈ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಕೆಜಿಎಫ್ ನಾಯಕ ರಾಕಿಂಗ್ ಸ್ಟಾರ್ ಯಶ್ ಕಿಸ್ ಚಿತ್ರ ವೀಕ್ಷಿಸಿದ್ದು, ಏನಂದ್ರ ಗೊತ್ತಾ. ಇತ್ತೀಚೆ ಗಷ್ಟೇ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಕೂಡ ಸಿನಿಮಾ ನೋಡಿ ಸಂತೋಷ ವ್ಯಕ್ತಪಡಿಸಿದರು. ಇದೀಗ ರಾಕಿಭಾಯ್​ ಕಿಸ್​ ಟೀಮ್​ ಜೊತೆ ಕೂತು ಸಿನಿಮಾ ನೋಡಿದರು. ರಾಕಿಂಗ್​ ಸ್ಟಾರ್ ಕೂಡ ಕಿಸ್​ ಟೀಮ್​ಗೆ ಸಾಥ್​ ಕೊಡುತ್ತಿದ್ದಾರೆ.

ಆತ್ಮೀಯ ಗೆಳೆಯ ಎ.ಪಿ. ಅರ್ಜುನ್​ ನಿರ್ಮಿಸಿ, ನಿರ್ದೇಶಿಸಿರೋ​ ಚಿತ್ರದ ಬೆನ್ನಿಗೆ ನಿಂತಿದ್ದಾರೆ. ಮಂಗಳವಾರ ನಗರದ ರಾಜ್​ಕುಮಾರ್ ರಸ್ತೆ ಬಳಿ ಇರುವ ಓರಾಯನ್​ ಮಾಲ್​ನಲ್ಲಿ ಬೆಳಿಗ್ಗೆ 10.30ರ ಶೋ ಗೆ ಸಿನಿಪ್ರಿಯರ ಜೊತೆ ಕೂತು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಯಶ್ ಚಿತ್ರ ಕಂಪ್ಲೀಟ್ ಫ್ಯಾಮಿಲಿ ಎಂಟರ್​ಟೈನರ್​ ಈ ಚಿತ್ರಕ್ಕೆ ಕಿಸ್​ ಟೈಟಲ್​ ಬದಲು ನೀನೇ ಮೊದಲು ನೀನೇ ಕೊನೆ ಅಂತ ಇಟ್ಟಿದರೆ ಇನ್ನೂ ಹೆಚ್ಚು ಫ್ಯಾಮಿಲಿ ಆಡಿಯನ್ಸ್​  ಬರುತ್ತಿದ್ದರು ಎಂದು ತಿಳಿಸಿದ್ದಾರೆ. 


ಇನ್ನು ಕಿಸ್ ಸಿನಿಮಾ ನೋಡಿ ರಾಕಿಂಗ್​ ಸ್ಟಾರ್ ತಮ್ಮ ಡೆಬ್ಯೂ ಎಂಟ್ರಿ ಮತ್ತು ಮೊದಲಸಲಾ ಚಿತ್ರದ ಕೆಲವು ದೃಶ್ಯಗಳನ್ನು ನೆನಪಿಸಿಕೊಂಡರು. ಹಾಗೇ ನಾಯಕ ವಿರಾಟ್ ಡಾನ್ಸ್​​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ನಟಿ ಶ್ರೀಲೀಲಾ ಖಂಡಿತಾ ಇಂಡಿಯನ್​ ಸಿನಿ ಇಂಡಸ್ಟ್ರಿಯನ್ನು ಒನ್​ ರೌಂಡ್ ಹಾಕುತ್ತಾರೆ ಅನ್ನೋದನ್ನು ರಿಪೀಟ್ ಮಾಡಿದರು. ಅಂದ್ಹಾಗೇ ರಾಕಿಂಗ್​ ಸ್ಟಾರ್ ಜೊತೆ ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ನಾಯಕ ವಿರಾಟ್ ಕೂಡ ಸಿನಿಮಾ ನೋಡಿದರು. ಯಶ್​ ಸಿನಿಮಾ ನೋಡಿ ಬೆನ್ನು ತಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಒಟ್ಟಾರಲ್ಲಿ ಕಿಸ್​ ಯೂತ್​ ಅಂಡ್ ಫ್ಯಾಮಿಲಿ ಆಡಿಯನ್ಸ್​ ಮನಗೆದ್ದಿದ್ದು, ಸಕ್ಸಸ್​ಫುಲ್ಲಾಗಿ 25ನೇ ದಿನದತ್ತ ಮುನುಗುತ್ತಿದೆ. ಯಶಸ್ಸಿನತ್ತ ಚಿತ್ರ ಸಾಗುತ್ತಿದ್ದು ಚಿತ್ರತಂಡ ಫುಲ್ ಖುಷ್ ಆಗಿದೆ.


మరింత సమాచారం తెలుసుకోండి: