ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇತ್ತೀಚಿನ ದಿನಮಾನಗಳಲ್ಲಿ ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆ ಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈ ರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅಭಿನಯಿಸಿ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ ಬಿಗ್ ಬಾಸ್ ಸೀಸನ್ ೭ರ ನಿರೂಪಕ ನಾಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಕೋಟಿಗೊಬ್ಬ 3 ಚಿತ್ರವು ಸೆಟ್ಟೇರುತ್ತಿದೆ. ಇದರ ಬೆನ್ನಲ್ಲೇ ಸುದೀಪ್ ಅವರು ಸಲ್ಮಾನ್ ರ ದಬಾಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. 


ಇಲ್ಲಿಯವರೆಗೂ ಪರಭಾಷೆಯ ಚಿತ್ರಗಳ ಡಬ್ಬಿಂಗ್ ವಿರೋಧಿಸಿದ್ದ ಸ್ಯಾಂಡಲ್ ವುಡ್ ಇದೀಗ ಎಲ್ಲಾ ಚಿತ್ರಗಳನ್ನೂ ಓ.ಕೆ ಎನ್ನುತ್ತಿದೆ. ತಮಿಳು, ಮಲಯಾಳಂ, ತೆಲುಗು  ಚಿತ್ರಗಳು ಸಾಲು ಸಾಲಾಗಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ. ವಿಚಿತ್ರವೆಂದರೆ ಡಬ್ಬಿಂಗ್ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಈವರೆಗೆ ಮಣೆ ಹಾಕಿಲ್ಲವೆಂದೇ ಹೇಳಬಹುದು. ಆದರೆ ಬಾಲಿವುಡ್‌ನ ಸುಲ್ತಾನ್ ಸಲ್ಮಾನ್‌ ಖಾನ್ ಅಭಿನಯದ ಭಾರೀ ವೆಚ್ಚದ ಚಿತ್ರ ದಬಾಂಗ್ ಕನ್ನಡಕ್ಕೆ ಡಬ್ ಆಗುತ್ತಿರುವುದು ಕನ್ನಡ ಚಿತ್ರರಂಗ ದಲ್ಲಿ ಭಾರೀ ಹವಾ ಹೆಬ್ಬಿಸಿದೆ. ಕನ್ನಡದ ದಬಾಂಗ್ 3ನ ವಿಶೇಷವೇನೆಂದರೆ ಸ್ವತಃ ಸಲ್ಮಾನ್‌ಖಾನ್ ತನ್ನ ಪಾತ್ರಕ್ಕೆ ತಾನೇ ಕಂಠದಾನ ನೀಡುವ ಸಾಧ್ಯತೆಯಿದೆ.


ಅಂದಹಾಗೆ ಸಲ್ಮಾನ್‌ಗೆ ತಾನಾಗಿಯೇ ಕನ್ನಡದಲ್ಲಿ ಕಂಠದಾನ ನೀಡುವುದಕ್ಕೆ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿರುವ ಕಿಚ್ಚ ಸುದೀಪ್ ನೆರವಾಗುತ್ತಿದ್ದಾರೆ.  ದಬಾಂಗ್ ಸರಣಿಯ ಚಿತ್ರಗಳಲ್ಲಿ ಸಲ್ಮಾನ್ ಅವರ ಜನಪ್ರಿಯ ಪಾತ್ರವಾದ ಚುಲ್‌ಬುಲ್ ಪಾಂಡೆಯ ಪಂಚಿಂಗ್ ಡೈಲಾಗ್‌ಗಳು ಕನ್ನಡ ಪ್ರೇಕ್ಷಕರನ್ನು ಮೋಡಿ ಮಾಡಲಿದೆಯೆಂದು ಚಿತ್ರತಂಡ ಭರವಸೆಯಿಟ್ಟು ಕೊಂಡಿದೆ.ಕನ್ನಡದಲ್ಲಿ ಡಬ್ ಆಗುತ್ತಿರುವುದು ಮೊದಲ ಬಾಲಿವುಡ್ ಚಿತ್ರವೆಂಬ ಹೆಗ್ಗಳಿಕೆಯನ್ನು ಕೂಡಾ ದಬಾಂಗ್ 3 ಹೊಂದಿದೆ. 
 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದಬಾಂಗ್ 3 ಚಿತ್ರದಲ್ಲಿ ವಿಲನ್ ಆಗಿ ಘರ್ಜಿಸಲು ರೆಡಿ ಯಾಗಿದ್ದು, ಸಲ್ಲು ಕಿಚ್ಚನ ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮವನ್ನು ತಂದಿದೆ. ಈಗಾಗಲೇ ಚಿತ್ರ ತಂಡದಿಂದ ಪೋಸ್ಟರ್ ವೊಂದು ಬಿಡುಗಡೆಯಾಗಿದ್ದು ಸಖತ್ ವೈರಲ್ ಆಗಿದೆ. ಆದ್ದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.


మరింత సమాచారం తెలుసుకోండి: