ಬೆಂಗಳೂರು: ಟಗರು ಖ್ಯಾತಿಯ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಯಡಿಯೂರಪ್ಪ ಗುಮ್ಮಿದ್ದಾರೆ. ಏನಿದು ಸ್ಟೋರಿ ಅಂತ ಮುಂದೆ ಓದಿ. ಇಷ್ಟು ದಿನಗಳು ಬಿ.ಎಸ್ ಯಡಿಯೂರಪ್ಪ ಅವರಿದ್ದ ಮನೆಯೂ ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಿದ್ದು, ಕಾವೇರಿ ನಿವಾಸ ಯಡಿಯೂರಪ್ಪ ಅವರಿಗೆ ಸಿಕ್ಕಿದೆ.  ಈ ಹಿನ್ನೆಲೆಯಲ್ಲಿ ಕಳೆದ ಆರಕ್ಕೂ ಹೆಚ್ಚು ವರ್ಷಗಳಿಂದ 'ಕಾವೇರಿ' ನಿವಾಸದಲ್ಲಿ ವಾಸವಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗ  ಕಾವೇರಿ ಮನೆ  ತೊರೆಯಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. 


6ವರ್ಷಗಳಿಂದ ವಾಸವಿದ್ದ 'ಕಾವೇರಿ' ನಿವಾಸ ನನಗೆ ಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆಯಾಯಿತು. ಕಾನೂನಿನಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸಕ್ಕೆ ಹೋಗುವುದು ಪಕ್ಕಾ ಆಗಿದೆ. ಈಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಖಾಲಿ ಮಾಡಬೇಕಿದೆ.


ಇದರ ಬಗ್ಗೆ ಖುದ್ದು ಬಿಎಸ್ ವೈ ಮಾತನಾಡಿದ್ದು, ಎರಡ್ಮೂರು ದಿನಗಳಲ್ಲಿ ನಾನೇ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗ್ತೀನಿ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಬೇರೆ ನಿವಾಸ ಕೊಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲದೇ ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹ ಆದೇಶ ಹೊರಡಿಸಿದ್ದು, ಸಿದ್ದರಾಮಯ್ಯ ಅವರಿಗೆ ಬಿಎಸ್ ವೈ ಲಕ್ಕಿ ಮನೆಯಾಗಿದ್ದ ರೇಸ್ ವ್ಯೂ ಕಾಟೇಜ್ ನಂ-2 ನಿವಾಸವನ್ನು ಹಂಚಿಕೆ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 'ಕಾವೇರಿ' ನಿವಾಸದಲ್ಲಿದ್ದರು. ನಂತರ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಯಾವುದೇ ಶಾಸನಬದ್ಧ ಹುದ್ದೆ ಇಲ್ಲದೇ ಇದ್ದರೂ ಸಹ ಅವರು ಕಾವೇರಿ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು.


ಆದರೆ  ಇದೀಗ ಕಾವೇರಿಗೆ ಯಡಿಯೂರಪ್ಪ ಅವರು ಪ್ರವೇಶ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಆರುವರೆ ವರ್ಷದಿಂದ ಇದ್ದ ಸಿದ್ದರಾಮಯ್ಯ ಅವರು ಸರ್ಕಾರ ಹಂಚಿಕೆ ಮಾಡಿದ ರೇಸ್ ವ್ಯೂ ಕಾಟೇಜ್ ಮನೆಗೆ ಶಿಫ್ಟ್ ಆಗಬೇಕಾದ ಅನಿವಾರ್ಯತೆ ಎದುರಾಗಿದೆ.  ನನಗೆ ಕಾವೇರಿ ನಿವಾಸವೇ ಕೊಡಿ ಎಂದು  ವಿಪಕ್ಷ ನಾಯಕರಾದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೂ ಸಹ ಕಾವೇರಿ ನಿವಾಸ ಕೈತಪ್ಪಿದೆ.


మరింత సమాచారం తెలుసుకోండి: