ರಾಜ್ಯ ಮೀರಿ ರಾಷ್ಟ ಮಟ್ಟದಲ್ಲಿ ಕೇಳಿಬರುತ್ತಿರುವ ಡಿ. ಕೆ. ಶಿವಕುಮಾರ್ ಅಕ್ರಮ ಹಣ ಪ್ರಕರಣ ದಿನ ಕಳೆದಂತೆ ಕಾವೇರುತ್ತಿದೆ. ಡಿ. ಕೆ. ಶಿ ಇನ್ನು ತಿಹಾರಿ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಆದರೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದರ ಜೊತೆಗೆಯೇ ಒಂದು ಬಿಗ್ ರಿಲೀಫ್ ಕೂಡ ಸಿಕ್ಕಿದೆ. ಏದೆಲ್ಲವು ಏನಂತ ನಾವ್ ಹೇಳ್ತೀವಿ ನೋಡಿ. 


ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನಿಗಾಗಿ ಸತತ ಅರ್ಜಿ ಸಲ್ಲಿಸಲಾಗುತ್ತಿದೆ. ಆದರೆ ಇಲ್ಲಿ ತನಕ ಅವರಿಗೆ ಜಾಮೀನು ದೊರಕಿಲ್ಲ. ಈನಡುವೆ 84ವರ್ಷದ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ಗೆ ತಡೆಕೋರಿ, ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಿಕೆಶಿ ತಾಯಿ ಹಾಗೂ ಪತ್ನಿಗೆ, ಇದೀಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಇಡಿ ಸಮನ್ಸ್ ಪ್ರಶ್ನಿಸಿದ್ದ ಅರ್ಜಿಯನ್ನು ಅಕ್ಟೋಬರ್ 24ಕ್ಕೆ ದೆಹಲಿ ಹೈಕೋರ್ಟ್ ಮುಂದೂಡಿದೆ. ಈಗಾಗಲೇ ಎರಡು ಬಾರಿ ಹಾಜರಾಗಿದ್ದ ಡಿಕೆ ಶಿವಕುಮಾರ್ ಅವರ ತಾಯಿ, ಮತ್ತೊಮ್ಮೆ ಇಡಿ ಅಧಿಕಾರಿಗಳು ಜಾರಿ ಮಾಡಿದ್ದ ಸಮನ್ಸ್ ಗೆ ತಡೆಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂತಹ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, 84 ವರ್ಷದ ಡಿಕೆ ಶಿವಕುಮಾರ್ ಅವರ ತಾಯಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿದರು.

ಈ ವೇಳೆ ಇಡಿ ಪರ ವಕೀಲ, ಅಮಿತ್ ಮಹಾಜನ್, ಇಡಿ ನೀಡಿರುವ ಸಮನ್ಸ್ ಈಗ ಊರ್ಜಿತದಲ್ಲಿ ಇಲ್ಲ. ಹೀಗಾಗಿ ದೀಪಾವಳಿಯ ನಂತ್ರ ಈ ಅರ್ಜಿಯ ವಿಚಾರಣೆ ನಡೆಸುವಂತೆ ನ್ಯಾಯ ಪೀಠಕ್ಕೆ ಮನವಿ ಮಾಡಿಕೊಂಡಿದ್ದರು. ಈ ರೀತಿ ನೀಡಿದ ಹೇಳಿಕೆಯ  ಹಿನ್ನಲೆಯಲ್ಲಿ ದೆಹಲಿಯ ಹೈಕೋರ್ಟ್, ಡಿಕೆ ಶಿವಕುಮಾರ್ ಪತ್ನಿ ಹಾಗೂ ತಾಯಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ.ತಾತ್ಕಾಲಿಕವಾಗಿ ಡಿಕೆ ಶಿವಕುಮಾರ್ ಅವರ ಪತ್ನಿ, 84 ವರ್ಷದ ತಾಯಿ ಗೌರಮ್ಮಗೆ ರಿಲೀಫ್ ಸಿಕ್ಕಿದೆ.


మరింత సమాచారం తెలుసుకోండి: