ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಇಂದು ತಮ್ಮ ಶಾಸಕ ಸ್ಥಾನದ ಕ್ಷೇತ್ರ ಬಾದಾಮಿ ಗೆ ತೆರಳಿ ಗ್ರೌಂಡ್ ರಿಪೋರ್ಟ್ ಅಧ್ಯಯನ ಮಾಡಿದ್ದಾರೆ.  ಉತ್ತರ ಕರ್ನಾಟಕದಲ್ಲಿ ಪ್ರವಾಹವಾದ ಸ್ಥಳದಲ್ಲಿ ಬಾದಾಮಿಯಿಂದ ಒಂದಾಗಿದ್ದು,  ನೆರೆ ಸಂತ್ರಸ್ತರ ಅಹವಾಲು ಆಲಿಸಿ, ಅಧಿಕಾರಿಗಳಿಗೆ ರೀ ಸರ್ವೆ ಮಾಡಲು ಸೂಚನೆ ನೀಡಿದರು.


ಕಳೆದೆರಡು ತಿಂಗಳುಗಳಿಂದ ಬಿಟ್ಟು ಬಿಡದೆ ಕಾಡುತ್ತಿರುವ ಮಳೆ ಮತ್ತು ಪ್ರವಾಹದಿಂದಾಗಿ ರಸ್ತೆ ಸಂಚಾರ ಇಲ್ಲದೇ ಕಾರಣ ಸಿದ್ದರಾಮಯ್ಯ ಅವರು ಬೆಳಗಾವಿ ಮೂಲಕ ಬಾದಮಿ ತಾಲೂಕಿನ ಕರ್ಲಕೊಪ್ಪ ಗ್ಯಾಮದಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನರೆ ಸಂತ್ರಸ್ತರು ಬಿದ್ದ ಮನೆ ಸರ್ವೆಯಲ್ಲಿ ಲೋಪ ಹಾಗೂ ತಾತ್ಕಾಲಿಕ ಪರಿಹಾರದಲ್ಲಿ ದೋಷದ ಬಗ್ಗೆ ಸಿದ್ದರಾಮಯ್ಯ ಅವರ ಮುಂದೆ ಅಳಲು ತೋಡಿಕೊಂಡರು. ಇದೇ ವೇಳೆಯಲ್ಲಿ ಸ್ಥಳೀಯ ತಹಸೀಲ್ದಾರ ಅವರನ್ನು ಕರೆದು ಬರೀ ಕೇಳ ಬೇಡಯ್ಯ. ಏನು ಹೇಳುತ್ತಾರೆ ಅದನ್ನು ಬರೆದುಕೊ ? ಸರ್ವೆ ಆದ ಮೇಲೂ ಮನೆ ಬಿದ್ದಿವೆ. ಹೀಗಾಗಿ ಮೊದಲು ರೀ ಸರ್ವೆ ಆಗಬೇಕು. ಒಂದೇ ಮನೆಯಲ್ಲಿ ಅಣ್ಣ ತಮ್ಮ ಇದ್ದರೆ ಪರಿಹಾರ ಹಂಚಿ. ಒಬ್ಬರಿಗೆ ಪರಿಹಾರ ಕೊಟ್ಟರೆ ಮನೆಯಲ್ಲಿ ಉಳಿದವರು ಏನು ನಾಮ ಹಾಕಿಕೊಳ್ಳಬೇಕಾ? ಇಬ್ಬರಿಗೂ ಹಣ ಕೊಡಿ ಎಂದರು.


ಅಲ್ಲದೇ ಬಿದ್ದ ಮನೆಯಲ್ಲಿ ಎರಡು ಹಂತದ ಪರಿಹಾರ ಬಗ್ಗೆ ಮಾತನಾಡಿ, ಶೇ. 25 ಕ್ಕಿಂತ ಕಡಿಮೆ ಬಿದ್ದಿದ್ದರೆ 50 ಸಾವಿರ ರೂ. ಕೊಡಿ, ಶೇ. 25 ಕ್ಕಿಂತ ಹೆಚ್ಚು ಹಾನಿ ಆಗಿದ್ದರೆ ಎಲ್ಲ ಮನೆಗಳಿಗೂ ಐದು ಲಕ್ಷ ರೂ. ಪರಿಹಾರ ಕೊಡಬೇಕು. ಇದೆಲ್ಲದಕ್ಕೂ ಅಸೆಂಬ್ಲಿಯಲ್ಲಿ ಸರ್ಕಾರ ಒಪ್ಪಿದೆ. ಆ ಪ್ರಕಾರವೇ ಸರ್ವೆ ಮಾಡಿ, ಈಗಲೇ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಪಡಿತರ ಚೀಟಿ ಆಧರಿಸಿ ಆಹಾರ ಸಾಮಾಗ್ರಿಗಳನ್ನು ವಿತರಿಸ ಬೇಕು ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಟಗರು ಗುಟುರಿಗೆ ಅಧಿಕಾರಿಗಳೆಲ್ಲಾ ಮೌನಕ್ಕೆ ಶರಣಾದಂತೆ ಕಂಡು ಬಂದಿತು.


మరింత సమాచారం తెలుసుకోండి: