ಬೆಂಗಳೂರು: ಇತ್ತೀಚೆಗೆ  ನವರಸ ನಾಯಕ ನಟ ಜಗ್ಗೇಶ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಟ್ವೀಟ್ ಕುರಿತು ಬೇಸರ ವ್ಯಕ್ತ ಪಡಿಸಿದ್ದರು. ಇದರ ಕುರಿತು ಇದೀಗ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ನಾನು ಕಲೆ, ಕನ್ನಡ ವಿಚಾರ ಬಂದಾಗ ಸುಮ್ಮನೆ ಕೂರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.


ಜಗ್ಗೇಶ್ ನಿನ್ನೆ ಈ ಸಂಬಂಧವಾಗಿ ಮಾಧ್ಯಮದ ಜೊತೆ ಮಾತನಾಡಿರುವ ಅವರು, ನಾನು ಮೋದಿ ಅವರ ವಿರುದ್ಧ ಟ್ವಿಟ್​​ಮಾಡಲಿಲ್ಲ, ನಮ್ಮ ಅಭಿಪ್ರಾಯವನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಅಷ್ಟೇ. ನನ್ನ ಪ್ರಯತ್ನಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ ಎಂದರು. ಇನ್ನು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ನಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲಾಗಿದೆ. ಸರಿಯಾಗಿ ಸಂವಹನ ಮಾಡಲು ಸಾಧ್ಯವಾಗದೇ ಇದ್ದಾಗ ಈ ರೀತಿ ಆಗುತ್ತದೆ ಎಂದು ಅವರು ಇದೀಗ ತಿಳಿಸಿದರು. ಅದು ಅಲ್ಲದೇ ಮೋದಿ ಅವರನ್ನು ಪ್ರಧಾನಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು. ನಾನು ಮೋದಿಯವರ ವಿರುದ್ಧ ತಿರುಗಿ ಬಿದ್ದಿಲ್ಲ, ಆ ರೀತಿ ಆಗುವುದು ಇಲ್ಲ ಎಂದು ಸ್ಯಾಂಡಲ್​ವುಡ್​ ನವರಸ ನಾಯಕ ಜಗ್ಗೇಶ್ ಅವರ ಇದೀಗ ತಿಳಿಸಿದರು. 


ಅಕ್ಟೋಬರ್​ 19ರಂದು ಪ್ರಧಾನಿ ಮೋದಿ ಅವರು ಚೇಂಜ್ ವಿಥಿನ್ ಸಂವಾದ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್​ಗಳನ್ನು ಭೇಟಿಯಾಗಿದ್ದರು. ಭಾರತೀಯ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಅಲ್ಲ, ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು, ತಂತ್ರಜ್ಞರಿಗೆ ಆಹ್ವಾನ ಇರಲಿಲ್ಲ. ಚಿತ್ರರಂಗ ಅಂದರೆ ಬರೀ ಖಾನ್​ಗಳಲ್ಲ ಅಂತ ಜಗ್ಗೇಶ್ ಅವರು ಟ್ವಿಟ್​​ಗೆ ಮಾಡಿದ್ದರು. ನವರಸ ನಾಯಕ ಜಗ್ಗೇಶ್ ಅವರು ಕನ್ನಡದ ಪರವಾಗಿ ಇಂದು ಮತ್ತು ಹಿಂದೆ ಯೂ ಕನ್ನಡಿಗ ನಾಗಿ, ಕನ್ನಡದ ಪರ ಹೋರಾಟಗಳಲ್ಲಿ ಪಾಲ್ಗೊಂಡು ಕನ್ನಡಾಭಿಮಾನ ಮೆರೆದಿದ್ದಾರೆ. ನೆಲ ಜಲ ಭಾಷೆಯ ವಿಚಾರದಲ್ಲಿ ಕನ್ನಡಿಗರಿಗೆ ಸಹಕಾರಿಯಾಗಿದ್ದಾರೆ. ಇದೀಗ ಟ್ವೀಟ್ ಬಗ್ಗೆ ಅವರೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. 


మరింత సమాచారం తెలుసుకోండి: