ಕಳೆದೆರಡು ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಮಹಾರಾಷ್ಟ್ರದಲ್ಲಿ ನಿರೀಕ್ಷಿಸಿದ ಮಟ್ಟಕ್ಕೆ ಗೆಲ್ಲದಿದ್ದರು ಸಹ ಶಿವಸೇನೆ ಯೊಂದಿಗೆ ಸೇರಿ ಬಹುಮತ ಪಡೆದು ಸರ್ಕಾರ ರಚಿಸಲು ರೆಡಿ ಯಾಗಿದೆ. ಆದರೆ ಹರಿಯಾಣ 40ಕ್ಷೇತ್ರ ಗೆದಿದ್ದು, ಬಹುಮತಕ್ಕೆ ಇನ್ನು 6 ಸೀಟುಗಳು ಬೇಕಿತ್ತು. ಇದೀಗ ಬಿಜೆಪಿಯೇ ಸರ್ಕಾರ ರಚಿಸಲು ಸಜ್ಜಾಗಿದೆ. ಅದು ರಾಜಕೀಯ ಚಾಣಕ್ಯ ಎಂದೇ ಕರೆಯಿಸಿಕೊಳ್ಳುತ್ತಿರುವ ಅಮಿತ್ ಶಾ ಅವರಿಂದ. ಅದು ಹೇಗೆ, ಅಮಿತ್ ಶಾ ಏನ್ ಮಾಡಿದ್ರು ಅಂತ ಇಲ್ನೋಡಿ. 


ರಾಜಕೀಯ ಚಾಣಕ್ಯ ಅಮಿತ್ ಶಾ  ಬಿಜೆಪಿ ಸರ್ಕಾರವನ್ನು ರಚಿಸಲೇಬೇಕೆಂದು ಹರಿಯಾಣದ ಮತ್ತೊಂದು ಪಕ್ಷ ಜೆಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಸಿಎಂ, ಜೆಜೆಪಿಗೆ ಡಿಸಿಎಂ ಸ್ಥಾನವಾಗಿ ಹಂಚಿಕೆಯಾಗಿದೆ.  40ಸ್ಥಾನಗಳನ್ನು ಗಳಿಸಿದ್ದ ಆಡಳಿತಾರೂಢ ಬಿಜೆಪಿ ಹರಿಯಾಣ ವಿಧಾನಸಭೆಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದ್ರೆ, ಸರಳ ಬಹುಮತಕ್ಕೆ 6 ಸ್ಥಾನಗಳ ಕೊರತೆ ಅನುಭವಿಸುತ್ತಿತ್ತು. 


ಆದ್ದರಿಂದ, ವಿಧಾನಸಭೆ ಅತಂತ್ರವಾಗುವ ಭೀತಿ ಎದುರಾಗಿತ್ತು. ಹರಿಯಾಣದಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಪಕ್ಕಾ ಆಗಿದೆ. ಸಾಲು ಸಾಲು ಸಭೆಗಳ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ, ಜೆಜೆಪಿಯ ದುಷ್ಯಂತ್​ ಚೌಟೇಲಾಗೆ ಡಿಸಿಎಂ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ಮೈತ್ರಿಯಾಗಿ ಸರ್ಕಾರ ರಚಿಸಲಿವೆ.


40ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನೂ 6ಸ್ಥಾನಗಳ ಅವಶ್ಯಕತೆ ಇತ್ತು. ಈ ನಡುವೆ ಗೋಪಾಲ್​ ಕಾಂಡಾ ನೆತೃತ್ವದ ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ರು. ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಬಿಜೆಪಿ ದುಷ್ಯಂತ್​ ಚೌಟೇಲ ನೇತೃತ್ವದ ಜೆಜೆಪಿ ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸಲಿದೆ. ಕಟ್ಟರ್​ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ. ಇನ್ನುಳಿದಂತೆ ಚೌಟೇಲಗೆ ಡಿಸಿಎಂ ಸ್ಥಾನ ಪಕ್ಕಾ ಆಗಿದೆ. ಈಮೂಲಕ ಹರಿಯಾಣ ರಾಜ್ಯದಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೇರಿಂದತಾಗುತ್ತದೆ. ಇದರಿಂದ ಅಮಿತ್ ಶಾ ಪವರ್ ಮತ್ತಷ್ಟು ಹೆಚ್ಚಾದಂತಾಗಿದೆ. ಏಕೆಂದರೆ ರಾಷ್ಟ್ರವನ್ನೇ ಕೇಸರಿಮಯವಾಗಿಸಲು ಹೊರಟಿರುವುದು ಏನಾಗುತ್ತದೆಂದು ಕಾದುನೋಡಬೇಕಾಗಿದೆ.




మరింత సమాచారం తెలుసుకోండి: