ಬೆಳಗಾವಿ: ಈ ನಾಯಕರಿಕೆ ಇದೀಗ ಪ್ರವಾಹ ಸಂತಸ್ತ್ರರ ಕುರಿತು ಕನಿಕರ ಬಂದಂತಿದೆ. ಪ್ರವಾಹದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಕಡೆಗೆ ತಿರುಗಿಯೂ ನೋಡದ ಇವರು ಇದೀಗ ಬೆಳಕಿನ ಹಬ್ಬ ದೀಪಾವಳಿಯನ್ನು ಉತ್ತರ ಕರ್ನಾಟಕದ ಜನತೆಯ ಜೊತೆಗೆ ಆಚರಿಸಲಿದ್ದಾರಂತೆ. ಅದ್ಯಾರು , ಏನಿದು ಸ್ಟೋರಿ ಅಂತ ಮುಂದೆ ಓದಿ.


 ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ 12 ಜಿಲ್ಲೆಗಳಲ್ಲಿ ಪ್ರವಾಹ, ಮಳೆಯಿಂದ ಜನರು ಮನೆ, ಜಮೀನು, ಕುಟುಂಬಸ್ಥರನ್ನು ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಈ ವರ್ಷ ದೀಪಾವಳಿ ಆಚರಿಸುವ ಸ್ಥಿತಿ ಜನರಲ್ಲಿ ಇಲ್ಲ. ಬದು ಕು ಏನಾಗಿದೆ. ಸರ್ಕಾರ ಯಾವ ರೀತಿ ಪರಿಹಾರ ಕೊಟ್ಟಿದೆ ಎಂದು ನೋಡಿ ಸಂತ್ರಸ್ತರ ಜತೆ ಹಬ್ಬ ಆಚರಿಸಲು ಬಂದಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. 


 ಬೆಳಗಾವಿ ಜಿಲ್ಲೆ ಬಗ್ಗೆ ಹೆಚ್ಚಿನ ಮಮತೆ ಇದೆ. ಕೃಷಿ ಸಂಪದ್ಭರಿತವಾದ ಜಿಲ್ಲೆ. ಈ ವರ್ಷದ ಪ್ರವಾಹ ಅನಾಹುತದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. 2014 ರಿಂದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಭಾನು ವಾರ ಚಿಕ್ಕೋಡಿ, ಅಥಣಿ, ಕಾಗವಾಡ ಭಾಗಕ್ಕೆ ಹೋಗಿ ಜನರ ಸಮಸ್ಯೆ ಆಲಿಸುವುದರ ಜತೆಗೆ ಅವರೊಂದಿಗೆ ದೀಪಾವಳಿ ಆಚರಿಸುತ್ತೇನೆ ಎಂದಿದ್ದಾರೆ. 


ಪ್ರಸ್ತುತ ವರ್ಷ ಸಂಭವಿಸಿದ ಪ್ರವಾಹ ಅನಾಹುತದಿಂದ ಜನರಿಗೆ ಹೊಸ ಜೀವನ ಕಟ್ಟಿಕೊಳ್ಳಲು 2 ರಿಂದ 3 ವರ್ಷವಾದರೂ ಬೇಕು. 2.86 ಲಕ್ಷ ಹೆಕ್ಟೇರ್‌‌ ಕೃಷಿ ಜಮೀನು ಬೆಳೆ ಹಾನಿ ಆಗಿದೆ. 40 ಸಾವಿರ ಕುಟುಂಬ ಮನೆ ಕಳೆದುಕೊಂಡಿದೆ. ರಾಮದುರ್ಗ, ಬೆಳಗಾವಿ ನಗರ ನೇಕಾರರ ಬದುಕು ಹಾಳಾಗಿದೆ. ಪರಿಹಾರಕ್ಕಾಗಿ ಸರ್ಕಾರ ಜಿಲ್ಲಾಧಿಕಾರಿ ಖಾತೆಗೆ 800 ಕೋಟಿ ರೂ ನೀಡಲಾಗಿದ್ದು, ಈಗಾಗಲೇ ಪರಿಹಾರ ಕಾರ್ಯಕ್ಕೆ ಕೆಲವು ಹಣವನ್ನು ವೆಚ್ಚ ಮಾಡಿದ್ದಾರೆ. ನಾನೇ ಮುಂಖ್ಯಮಂತ್ರಿಯಾಗಿದ್ದರೂ ಒಂದೆರೆಡು ತಿಂಗಳಲ್ಲಿ ಪುನಃ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರಕ್ಕೆ ಸಮಯ ಕೊಡಬೇಕು ಎಂದು ತಿಳಿಸಿದ್ದಾರೆ. 


మరింత సమాచారం తెలుసుకోండి: