ಬೆಂಗಳೂರು: ಅಬಕಾರಿ ಯಿಂದಲೇ ಸರ್ಕಾರ ನಡೆಯುತ್ತಿದೆ ಅದೇ ಆದಾಯದ ಪ್ರಮುಖ ಮೂಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದರು, ಆದರೆ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮದ್ಯ ಮಾರಾಟ ವಾಗುತ್ತಾ ಎಂದು ಮದ್ಯ ಪ್ರಿಯರಲ್ಲಿ ಆತಂಕ ಉಂಟಾಗಿದೆ. ಆದರೆ ಆತಂಕ ಪಡಬೇಕಿಲ್ಲ. ಮದ್ಯ ಬ್ಯಾನ್ ಮಾಡುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. 


ನವಂಬರ್ 10ರಂದು  ಬೆಳಗ್ಗೆ 6 ಗಂಟೆಯಿಂದ ಮದ್ಯರಾತ್ರಿ 12ರ ವರೆಗೆ ಮಾತ್ರ ಮಾರಾಟ ನಿಷೇಧಿಸಲಾಗಿದೆ. ಅದು ಮುಸ್ಲಿಂ ಬಾಂಧವರ ಪವಿತ್ರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಎಂದು  ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರವರು ಆದೇಶ ಹೊರಡಿಸಿದ್ದಾರೆ. ಶಾಂತಿ‌ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯ ಮಾರಟ ನಿಷೇಧ ಮಾಡಿ ಆದೇಶ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಂಗಳವಾರ ಆದೇಶ ಹೊರಡಿಸಿದ್ದಾರೆ. 


ಬೆಂಗಳೂರು ನಗರದಾದ್ಯಂತ ನ.10ರಂದು ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಆಚರಿಸುವ ಪ್ರಯುಕ್ತ, ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ, ನಂತರ ಮೆರವಣಿಗೆ ಸಾಗಲಿದೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಬಾರ್, ವೈನ್ ಶಾಪ್, ಪಬ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟವನ್ನು ಮಾಡದಿರಲು ನಿಷೇದಾಜ್ಞೆ ಹೊರಡಿಸಲಾಗಿದೆ. 


ಈದ್ ಮಿಲಾದ್ ಹಬ್ಬದ ವಿಚಾರ ಒಂದಾದರೆ ಅತ್ತ ಕಡೆಯಿಂದ ಅಯೋಧ್ಯೆ ತೀರ್ಪು ಹೊರಬೀಳುವ ಸಾಧ್ಯತೆ ಗಳಿದ್ದು ರಾಷ್ಟ್ರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ತೀರ್ಪು ಹಿಂದುಗಳ ಪರವಾಗಿಯೇ ಬರಲಿದೆ , ಇಲ್ಲ ತೀರ್ಪು ಮುಸ್ಲಿಂ ಪರವಾಗಿಯೇ ಬರಲಿದೆ ಎಂದು ಕೆಲವರು ಈಗಾಗಲೇ ಚರ್ಚೆ ಪ್ರಾರಂಭಿಸಿ ದ್ದಾರೆ. ಯಾರ ಪರವೇ ಬಂದರೂ ಸಹ ಅದನ್ನು ಸ್ವಾಗತಿಸಿ ಮಾನವೀಯತೆ ಮೆರೆಯೋಣ, ನಾವೆಲ್ಲರು ಒಂದೇ ಎಂಬುದು ಸಾಬೀತು ಪಡಿಸೋಣ ಎಂಬುದು ತಜ್ಞರ ಅಭಿಪ್ರಾಯ ವಾಗಿದೆ.


మరింత సమాచారం తెలుసుకోండి: