ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಪಿಸಿದ್ದ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿ ಆದೇಶ ಹೋರಡಿಸಿತ್ತು. ಇದರಿಂದ ಪ್ರತಿಪಕ್ಷಗಳು ತೀವ್ರ ಕಿಡಿಕಾರಿದ್ದವು, ಟಿಪ್ಪು ಜಯಂತಿ ಆಚರಿಸಲೇ  ಬೇಕೆಂದು ಪಟ್ಟು ಹಿಡಿದಿದ್ದವು. ಇದೀಗ ಇದರ ಬಗ್ಗೆ ಹೈಕೋರ್ಟ ತನ್ನ ಅಭಿಪ್ರಾಯ ತಿಳಿಸಿದೆ. ಇದೇನೆಂದು  ನೀವೆ ಓದಿ. 


ಟಿಪ್ಪು ಜಯಂತಿ ವಿಚಾರದಲ್ಲಿ ನಾವು ಮಧ್ಯ ಪ್ರವೇಶ ಮಾಡಲ್ಲ, ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿ ನೀವು ಯೋಚನೆ ಮಾಡಿ ನಿರ್ಧಾರ ಮಾಡಿ ಎಂದು ರಾಜ್ಯ ಹೈಕೋರ್ಟ್ ಬುಧವಾರ ಹೇಳಿದೆ. ಮುಂದುವರೆದು ಸರ್ಕಾರದ ವತಿಯಿಂದ ಜಯಂತಿ ಆಚರಣೆ ಇಲ್ಲ. ಬೇಕಾದರೆ ಖಾಸಗಿಯಾಗಿ ಆಚರಿಸಿಕೊಳ್ಳಬಹುದು ಎಂದು ಹೇಳಿ ಜನವರಿ 3ಕ್ಕೆ ವಿಚಾರಣೆ ಮುಂದಕ್ಕೆ ಹಾಕಿದೆ.


ಈ ಮೂಲಕ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ನೀತಿಯಂತೆ ತೀರ್ಪು ಬಂದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. 


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ 2015ರಲ್ಲಿ ಟಿಪ್ಪು ಜಯಂತಿ ಆಚರಣೆ ಆರಂಭವಾಗಿತ್ತು. ಸರ್ಕಾರದ ವತಿಯಿಂದ ಆಚರಣೆ ಮಾಡಿ ವಿಧಾನಸೌಧದಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಾದ ನಂತರ ದೋಸ್ತಿ ಸರ್ಕಾರದ ಸಂದರ್ಭದಲ್ಲಿಯೂ ಟಿಪ್ಪು ಜಯಂತಿಗೆ ಯಾವುದೇ ಅಡಚಣೆ ಉಂಟಾಗಿರಲಿಲ್ಲ. ಆದರೆ ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಭಾಗವಹಿಸಿರಲಿಲ್ಲ. ನಂತರ ಬದಲಾದ ರಾಜಕೀಯ ವಾತಾವರಣದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಟಿಪ್ಪು ಜಯಂತಿಗೆ ನಿಷೇಧ ಹೇರಿತ್ತು. ಈ ಕುರಿತು ನ್ಯಾಯಾಲಯದಲ್ಲಿಯೂ ಅರ್ಜಿ ಸಲ್ಲಿಕೆಯಾಗಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿಲಾಗಿದೆ. 


ಈ ತೀರ್ಪಿನಿಂದ ಪ್ರತಿ ಪಕ್ಷವು ಏನು ಪ್ರತಿಕ್ರಿಯಿಸುತ್ತದೆ, ಮತ್ತೇ ಪ್ರತಿಭಟನೆ ಶುರು ಮಾಡುತ್ತಾ, ವಿರೋಧ ಪಕ್ಷದ ನಾಯಕ ಏನ್ ಹೇಳ್ತಾರೆ ಎಂಬುದು ಮಾತ್ರ ಕುತೂಹಲಕಾರಿ ಯಾಗಿದೆ. ಸರ್ಕಾರ ಮಾತ್ರ ನಿಷೇಧಿಸಿ ದ್ದೇವೆ, ಪುನಹ ಆಚರಣೆಗೆ ತರಲು ಸಾದ್ಯವೇ ಇಲ್ಲವೆಂದು ದೃಢವಾಗಿ ನಿರ್ಧರಿಸಿದಂತೆ ಕಂಡು ಬರುತ್ತಿದೆ. 


మరింత సమాచారం తెలుసుకోండి: