ಮೈಸೂರು: ಪ್ರಸ್ತುತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿ ಆದಾಗ ನಾನು ಮೈಸೂರಿಗೆ ಬಂದಿದ್ದೆ, ಅವರೇ ಮುಖ್ಯಮಂತ್ರಿ ಆಗಲಿ ಎಂದು ಅವರ ಬೆನ್ನ ಹಿಂದೆ ನಿಂತಿದ್ದೆ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ. 


ರಾಜಕೀಯ ವಿದ್ಯಮಾನಗಳ ಜೊತೆಗೆ ತಮ್ಮ ಪ್ರಯಾಣದ ಬಗ್ಗೆಯೂ ಮಾತನಾಡಿದರು.  ನಾನು ರೈಲಿನಲ್ಲಿ ಬಂದೆ. ಮೈಸೂರಿಗೆ ರಸ್ತೆಯಲ್ಲಿ ಬಂದಿದರೆ ಇಷ್ಟೋತ್ತಿಗೆ ಬರೋಕೆ ಆಗುತ್ತಿರಲಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ನಗರದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯ ಮೈಸೂರಿನ ಹಲವು ನಾಯಕರು ಪೋನ್ ಮಾಡಿದರು. ಜೆಡಿಎಸ್ ಆರು ಶಾಸಕರು ಬಂದು ಭೇಟಿ ಮಾಡಬೇಕು ಅಂತ ಕಾಯುತ್ತಿದ್ದರು. ಇದೆಲ್ಲ ನನ್ನ ಪುಣ್ಯ ಎಂದು ಅವರು ತಿಳಿಸಿದರು. ಅವರು ಈಗಲೂ ನನ್ನನ್ನೇ ಮೆಚ್ಚಿ ಕೊಂಡಿದ್ದಾರೆ ಎಂದರು. 


ಇನ್ನು ನನ್ನ ಎರಡು ಮಕ್ಕಳಿಗೆ ಶಾಲೆಯಲ್ಲಿ ನಿಮ್ಮಪ್ಪ ಜೈಲಿಗೆ ಹೋದಾ ಅಂತ ಕೇಳುತ್ತಾರೆ ಅನ್ನೋ ಬೇಜಾರಿದೆ. ಅದೊಂದು ಬಿಟ್ಟರೇ ನಾ…ಯಾವತ್ತು ಶಕ್ತಿ ಕಳೆದುಕೊಳ್ಳಲಿಲ್ಲ. ನನ್ನ ಪತ್ನಿ, ದೊಡ್ಡ ಮಗಳು ಧೈರ್ಯವಾಗಿದ್ದಾರೆ. ನನ್ನ ತಮ್ಮನ ಬಗ್ಗೆ ನಿಮಗೆ ಗೊತ್ತಿದೆ. ಜೈಲಲ್ಲಿ ಏನಾಯ್ತು ಅಂತ ಇನ್ನೊಮ್ಮೆ ಹೇಳುತ್ತೇನೆ ಎಂದು ಮೈಸೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.


ಪ್ರಸ್ತುತ ರಾಜಕಾರಣದ ಚಕ್ರ ಹೇಗೆ ತಿರುಗಿಸಬೇಕು ಎಂದು ಗೊತ್ತಿದೆ. ಸಮಯ ಬಂದಾಗ ಆ ಚಕ್ರ ತಿರುಗಿಸೋಣ ಬಿಡಿ. ಸಿದ್ದರಾಮಯ್ಯನವರ ಸರ್ಕಾರ ಬರೋಕೆ ನಾನು ಕಾರಣ ಅಲ್ಲ ಆದರೆ ಅವರ ಬೆನ್ನ ಹಿಂದೆ ನಾನು ನಿಂತಿದ್ದೆ. ಮೈಸೂರಿಗೆ ಬಂದು ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳಿದ್ದೆ. ಅದಕ್ಕೆ ನನ್ನ ಜೊತೆ ನೀವೆಲ್ಲ ಇದ್ರಿ ಎಂದು ಮೈಸೂರಿನಲ್ಲಿ ಕಾಂಗ್ರೆಸ್​ ಮುಖಂಡ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ತಮ್ಮ ಜೈಲಿನ ಇತಿಹಾಸದಲ್ಲಿ ಮಕ್ಕಳು ನಮಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎನ್ನುವ ಹಾಗೆ ಮಾಡಿಬಿಟ್ಟರು, ಬಿಜೆಪಿಗೆ ಸೇರಲು ಆಫರ್ ಕೊಟ್ಟಿದ್ದರು ಎಂದು ಮತ್ತೊಮ್ಮೆ ಪುನರ್ ಉಚ್ಚರಿಸಿದರು.


మరింత సమాచారం తెలుసుకోండి: