ಕೋಲಾರ: ದೋಸ್ತಿ ಸರ್ಕಾರದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಇದೀಗ ಆದಾಯ ತೆರಿಗೆ ಇಲಾಖೆಯ ಭಯ ಕಾಡುತ್ತಿದೆ ಅಂತೆ. ಈಗೆಂದು ಸ್ವತಹ ರಮೇಶ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಏನಿದು ಸ್ಟೋರಿ ನೀವೆ ಒಮ್ಮೆ ಓದಿಬಿಡಿ. 


ಐಟಿ ಭಯದಿಂದ ಅಕ್ರಮ ಆಸ್ತಿ ಮಾಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ನಾನು ಯಾವ ಕಚೇರಿಯಿಂದಲೂ ಹಣ ಪಡೆಯುವುದಿಲ್ಲ. ಐಟಿ ಭಯವಿರುವುದ ರಿಂದ ಹಣ, ಆಸ್ತಿ ಸಂಪಾದಿಸಿ ಕೂಡಿಟ್ಟಿಲ್ಲ. ನನ್ನ ಮಾತಿಗೆ ಗೌರವ ಕೊಡುವ ಅನೇಕರಿದ್ದಾರೆ. ಅವರಿಂದಲೂ ಕೈಲಾದ ನೆರವು ಒದಗಿಸುತ್ತೇನೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಾಗಿ ಶಾಸಕ ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ. 


ಇಂದು ಕೋಲಾರದಲ್ಲಿ ಜಿಲ್ಲಾ ನಂದವರಿಕ ಟ್ರಸ್ಟ್ ವತಿಯಿಂದ ನಗರದ ಗಲ್‌ಪೇಟೆಯಲ್ಲಿ ವೆಂಕಟಲಕ್ಷ್ಮಮ್ಮ ಮತ್ತು ಎಂ. ಸುಬ್ಬರಾವ್ ಸ್ಮರಣಾರ್ಥ ನಿರ್ಮಿಸಿರುವ ನಂದವರೀಕ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ನಾನು ಕೂಡ ಬಡ ಕುಟುಂಬದಿಂದ ಬಂದವನು. ಹಿರಿಯರ ಪುಣ್ಯದಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ನಂದವರಿಕ ಎನ್ನಲು ಗರ್ವ ಪಡುತ್ತೇನೆ ಎಂದಿದ್ದಾರೆ. ನಂದವರಿಕ ಟ್ರಸ್ಟ್‌ನಿಂದ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗಳ ಕುರಿತು ಅಂದಾಜುಪಟ್ಟಿ ನೀಡಿದರೆ ಅವಗತ್ಯವಿರುವ ಎಲ್ಲ ರೀತಿಯ ನೆರವು ಕಲ್ಪಿಸುತ್ತೇನೆ. ಟ್ರಸ್ಟ್‌ನಿಂದ ನಡೆಸಲು ಉದ್ದೇಶಿಸಿರುವ ಯೋಜನೆಗಳಿಗೆ ನೆರವು ನೀಡಲು ಬದ್ಧ, ಚೈತನ್ಯ ಮತ್ತು ಮನಸ್ಸುಳ್ಳ ಎಂ.ಎಸ್. ನಾಗಭೂಷಣರಾವ್ ಭವನಕ್ಕೆ ನಿವೇಶನವನ್ನು ದಾನವಾಗಿ ನೀಡಿರುವುದು ಅವರ ಉದಾರ ಗುಣಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ. ಟ್ರಸ್ಟ್‌ನ ಉಪಾಧ್ಯಕ್ಷ ಡಿ.ಎಸ್. ಶಂಕರನಾರಾಯಣ ಮಾತನಾಡಿ, ಹಲವು ವರ್ಷಗಳ ಹಿಂದೆಯೇ ದಾನವಾಗಿ ಪಡೆದ ನಿವೇಶನದಲ್ಲಿ ದಾನಿಗಳ ನೆರವಿನಿಂದ ಭವನ ನಿರ್ಮಿಸಲಾಗಿದೆ. ಇದಕ್ಕೆ ನೇರ ವಾಗಿ, ತೆರೆಮರೆಯಲ್ಲಿ ನಿಂತು ಸಹಾಯ ಮಾಡಿದವರು ಅನೇಕರಿದ್ದಾರೆ. ಕೊಟ್ಟ ಒಂದೊಂದು ರುಪಾಯಿ ಕೂಡ ಪೋಲು ಆಗದಂತೆ ಬಳಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


ಸ್ಪೀಕರ್ ರಮೇಶ್ ಕುಮಾರ್ ನಾನು ಕೂಡಿಸಿಟ್ಟಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಭಯವೆಂದು ತಿಳಿಸಿದ್ದಾರೆ. ಇದಕ್ಕೆಲ್ಲಾ ಅವರಿಗೆ ಸಿಕ್ಕಿರುವ ಮುನ್ಸೂಚನೆ ಮಾಹಿತಿಯಾ ಎಂಬುದು ಇದೀಗ ಕುತೂಹಲಕಾರಿಯಾಗಿದೆ.


మరింత సమాచారం తెలుసుకోండి: