ಬೆಂಗಳೂರು: ರಾಜ್ಯದಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತಿದ್ದರೂ ಸಹ ಕಣ್ಣಿದ್ದು ಕುರುಡಾದಂತಿದೆ ಎಸಿಬಿ ಮತ್ತು ಲೋಕಾಯುಕ್ತ. ಹೌದು, ಆಶ್ಚರ್ಯ ವಾದರೂ ಸಹ ನಂಬಲೇ ಬೇಕಾದ ವಿಷಯವಿದು. ಏಕೆಂದರೆ ಲೋಕಾಯುಕ್ತ ಸ್ಟ್ರಾಂಗೂ ಎಸಿಬಿ ದುರ್ಬಲ ಎಂದು ವಾದಿಸುತ್ತಿದ್ದ ಯಡಿಯೂರಪ್ಪ ನವರೇ ಇದೀಗ ಎಸಿಬಿ ಮುಚ್ಚವ  ಪ್ರಯತ್ನ ಮಾಡುತ್ತಿಲ್ಲ. ನೇರವಾಗಿ ಲೋಕಾಯುಕ್ತ ವೇ ದುರ್ಬಲವಾಗಿದೆಯಾ? ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಕಾಡುತ್ತಿದೆ. 


ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ಸೃಜಿಸಿದಾಗ ದೊಡ್ಡ ಚರ್ಚೆಯೇ ನಡೆದಿತ್ತು. ಬ್ರಷ್ಟರ ಹೆಡಿಮುರಿ ಕಟ್ಟುತ್ತಿದ್ದ ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸಲೆಂದು ಎಸಿಬಿ ರಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.ಆಗ  ಲೋಕಾಯುಕ್ತ ಸಂಸ್ಥೆ ಬಗ್ಗೆ ಭಾರಿ ಕಾಳಜಿ ತೋರಿಸಿದ್ದ ಬಿಜೆಪಿ ನಾಯಕರು ಕೂಡಲೇ ಎಸಿಬಿ ರದ್ದು ಮಾಡಬೇಕು. ಇದು ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸುವ ಹುನ್ನಾರ. ನಾವು ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದಿದ್ದರು ಸಿಎಂ ಯಡಿಯೂರಪ್ಪ. ಅದೇ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದು ಸೆಂಚುರಿ ಬಾರಿಸಿ ಮೇಲಾಗಿದೆ. ಆದರೆ ಇನ್ನೂ ಎಸಿಬಿ ರದ್ದು ಮಾಡಿಲ್ಲ. ಸಿಎಂ ಯಡಿಯೂರಪ್ಪ ಸರ್ಕಾರವೂ ಹಿಂದಿನ ಸಿದ್ದರಾಮಯ್ಯ ನಿಲುವಿಗೇ ಒಪ್ಪಿಕೊಂಡಂತಾಗಿದೆ. ಸಾಮಾಜಿಕ ಕಾರ್ಯಕರ್ತ ಹೆಚ್.ಎಂ ವೆಂಕಟೇಶ್ ಎಸಿಬಿ ರದ್ದುಗೊಳಿಸುವ ವಿಚಾರವಾಗಿ ಸಿಎಂ ಯಡಿಯೂರಪ್ಪ ಹಾಗೂ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಲಿಖಿತ ಉತ್ತರ ನೀಡಿರುವ ಸರ್ಕಾರ, ಲೋಕಾಯುಕ್ತ ಸಂಸ್ಥೆ ಕರ್ನಾಟಕ ಲೋಕಾಯುಕ್ತ ಕಾಯಿದೆ 1984ಯೊಳಗೆ, ಭ್ರಷ್ಟಾಚಾರ ತಡೆ ಅಧಿನಿಯಮ 1988 ಯೊಳಗೆ ಕಾರ್ಯನಿರ್ವಹಸುತ್ತವೆ.ಇವೆರಡೂ ಪ್ರತ್ಯೇಕ ಕಾಯಿದೆಗಳಾಗಿವೆ. ಲೋಕಾಯುಕ್ತ ಹಾಗೂ ಎಸಿಬಿ ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿವೆ ಎಂದು ವಿವರಣೆ ಕೊಡಲಾಗಿದೆ.

ಪ್ರಸ್ತುತ ಲೋಕಾಯುಕ್ತ ಸಂಸ್ಥೆ ಮೊದಲಿನ ಖದರ್ ಮತ್ತು ಧೈರ್ಯ ಹೊಂದಿಲ್ಲ. ಆದರು ಹೆಸರು ಕೇಳುತ್ತಿದ್ದಂತೆ ಬೆವರುತ್ತಿದ್ದ ಭ್ರಷ್ಟರು ನಿಶ್ಚಿಂತೆಯಿಂದ ತಮ್ಮ ದಂಧೆ ಮುಂದುವರೆಸಿದ್ದಾರೆ. ಅಲ್ಲದೇ ಎಸಿಬಿಗೂ ಕೂಡ ಭ್ರಷ್ಟಾಚಾರ ಪ್ರಕರಣಗಳ ಕುರಿತು ಬಂದ ದೂರುಗಳೂ ಕಡಿಮೆ ಆಗಿದೆ. ಅಳುವ ಸರ್ಕಾರಗಳಿಗೆ ಲೋಕಾಯುಕ್ತ ಬಲವರ್ದನೆ ಮಾಡೋದು ಇಷ್ಟ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತು ಆಗಿದೆ.


మరింత సమాచారం తెలుసుకోండి: