ಬೆಂಗಳೂರು: ಅನರ್ಹರು ಸಹ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ತೀರ್ಪು ನೀಡುತ್ತಿದ್ದಂತೆಯೇ  ಟಿಕೆಟ್ ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಇಲ್ಲಿಯವರೆಗೂ ಸುಪ್ರೀಂ ತೀರ್ಪು ಬರಲಿ ನೋಡೋಣ ಎಂದು ಹೇಳುತ್ತಿ ದ್ದರು ಆದರೆ ಇದೀಗ ಕೊನೆಗೂ ಅಸಮಾಧಾನ ಭುಗಿಲೆದಿದ್ದು, ಯಾರಿಗೆ ಟಿಕೆಟ್ ನೀಡಬೇಕು, ಅಸಮಾದಾನಿತರನ್ನು ಹೇಗೆ ಸಮಾದಾನ ಪಡಿಸಬೇಕು ಎಂಬುದೇ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 


ಅನರ್ಹರಿಗೆ ಬಹುತೇಕ ಟಿಕೆಟ್ ಫಿಕ್ಸ್ ಆದರೂ ಸಹ ತಂತ್ರಗಳಲ್ಲಿ ಬಂಡಾಯ ಸಮಸ್ಯೆ ಕಾಡುತ್ತಿದೆ. ಹುಣಸೂರು, ರಾಣೆಬೆನ್ನೂರು, ಅಥಣಿಯಲ್ಲಿ ಅಭ್ಯರ್ಥಿ ಗಳ ಆಯ್ಕೆ ಕಗ್ಗಂಟಾಗಿದೆ. ಹೊಸಕೋಟೆ, ಗೋಕಾಕ್, ಕಾಗವಾಡದಲ್ಲಿ ಬಂಡಾಯದ ಬೇನೆ ಆರಂಭವಾದರೆ ಶಿವಾಜಿ ನಗರದಲ್ಲಿ ಅನರ್ಹ ಶಾಸಕನ ಸೇರ್ಪಡೆಗೆ ಶುರುವಾಗಿದೆ ಸಮಸ್ಯೆ ಎದುರಾಗಿದೆ. ಒಟ್ಟಿನಲ್ಲಿ ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಆಯ್ಕೆಯಾಗುತ್ತಾ ಅನ್ನೋ ಕುತೂಹಲ ಹುಟ್ಟಿದೆ.


ಯಾರಾರಿಗೆ ಯಾವ ಕ್ಷೇತ್ರದಲ್ಲಿ ಪೈಪೋಟಿ

* ಹೊಸಕೋಟೆ- ಶರತ್ ಬಚ್ಚೇಗೌಡ ಬಂಡಾಯ

* ಶಿವಾಜಿನಗರ ಬೇಗ್ ಸೇರ್ಪಡೆ ಟೆನ್ಶನ್
* ಹುಣಸೂರು – ವಿಶ್ವನಾಥ್, ಯೋಗೇಶ್ವರ್, ಹರೀಶ್ ಗೌಡ ನಡುವೆ ರೇಸ್
* ಅಥಣಿ– ಮಹೇಶ್ ಕುಮಟಹಳ್ಳಿ, ಲಕ್ಷ್ಮಣ ಸವದಿ ನಡುವೆ ರೇಸ್
* ರಾಣೆಬೆನ್ನೂರು- ಶಂಕರ್, ಕಾಂತರಾಜು
* ಗೋಕಾಕ್- ಅಶೋಕ್ ಪೂಜಾರಿ ಬಂಡಾಯ
* ಕಾಗವಾಡ- ರಾಜುಕಾಗೆ ಕಾಂಗ್ರೆಸ್ ಗೆ ಜಂಪ್



ಇತ್ತ ಶಿವಾಜಿನಗರದ ಅನರ್ಹ ಶಾಸಕ ರೋಷನ್ ಬೇಗ್ ಅವರಿಗೆ ಬಿಜೆಪಿ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಬೇಗ್ ಗೆ ಬಿಜೆಪಿ ಕೈ ಕೊಟ್ಟಿದೆ. ಐಎಂಎ ಕೇಸ್‍ನಲ್ಲಿ ಬೇಗ್ ಹೆಸರು ತಳುಕು ಹಾಕಿಲಕೊಂಡಿದ್ದರ ಪರಿಣಾಮ ದಿಂದ ಬೇಗ್ ಸೇರ್ಪಡೆಗೆ ಕೊನೆ ಕ್ಷಣದಲ್ಲಿ ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ರಚಿಸಲು ಅನರ್ಹರೇ ಕಾರಣವಾಗಿದ್ದು, ಇದೀಗ ಅವರಿಗೆ ಟಿಕೆಟ್ ಸಿಗಲು ಪರದಾಡುತ್ತಿರುವುದು ಯಡಿಯೂರಪ್ಪನವರಿಗೆ ಮುಂದೇನು ಮಾಡಬೇಕೆಂದೇ ತೋಚ ದಂತಾಗಿದೆ.



మరింత సమాచారం తెలుసుకోండి: