ಮೈಸೂರು: ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಚಾಪನ್ನು ಹೊಂದಿದ್ದ ಶಾಸಕ ತನ್ವೀರ್ ಸೇಠ್ ಮೇಲೆ ಸೋಮವಾರ ಹಲ್ಲೆ ಯಾಗಿದ್ದು, ಹಲ್ಲೆ ಮಾಡಿದ ಆರೋಪಿಯು ವಿಚಿತ್ರ ಕಾರಣ ಕೊಟ್ಟಿದ್ದಾನೆ. ಉದ್ಯೋಗ ಕೊಡಿಸಲು ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಶಾಸಕ ತನ್ವೀರ್​ ಸೇಠ್​ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾಗಿ ಆರೋಪಿ ಫರಾನ್​ ಪಾಷಾ ಹೇಳಿದ್ದಾನೆಂದು ತಿಳಿದು ಬಂದಿದೆ. 
 
ಶಾಸಕ ತನ್ವೀರ್​ ಸೇಠ್​ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಆರೋಪದಲ್ಲಿ ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರು ಗೌಸಿಯಾನಗರದ ಮುಕ್ಬುಲ್​ ಎಂಬುವರ ಪುತ್ರ ಫರಾನ್​ ಪಾಷಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದು, ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದಾಗಿ ತಿಳಿದಿದೆ. ಫರಾನ್​ 18 ನೇ ವಯಸ್ಸಿನಿಂದ ಎಸ್​ಡಿಪಿಐ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ಕಳೆದ 8 ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ. ವಿಧಾನಸಭೆಯ 2 ಚುನಾವಣೆಗಳಲ್ಲಿ ತನ್ವೀರ್​ ಸೇಠ್​ ಪರ ಕೆಲಸ ಮಾಡಿದ್ದ ಎಂಬ ಮಾಹಿತಿ ಲಭಿಸಿರುವುದಾಗಿ ಪೊಲೀಸ್​ ಮೂಲಗಳು ಹೇಳಿವೆ.
 
ಸಾಂಸ್ಕೃತಿಕ ನಗರಿ ಮೈಸೂರಿನ ಬನ್ನಿಮಂಟಪ ಆವರಣದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಸಂಬಂಧಿಕರೊಬ್ಬರ ಬೀಗರ ಔತಣಕೂಟದಲ್ಲಿ ತನ್ವೀರ್​ ಸೇಠ್​ ಪಾಲ್ಗೊಂಡಿದ್ದರು. ಔತಣಕೂಟದಲ್ಲಿ ಆಯೋಜನೆಗೊಂಡಿದ್ದ ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದರು. ಆಗ ಫರಾನ್​ ಪಾಷಾ ತನ್ವೀರ್​ ಸೇಠ್​ ಮೇಲೆ ಮಾರಕಾಸ್ತ್ರದೊಂದಿಗೆ ಹಠಾತ್ತನೆ ಹಲ್ಲೆ ಮಾಡಿದ ಎನ್ನಲಾಗಿದೆ.
 
ಹಲ್ಲೆಯಲ್ಲಿ ತನ್ವೀರ್​ ಸೇಠ್​ ಅವರ ಕತ್ತಿನ ಬಲಭಾಗದಲ್ಲಿ ಗಂಭೀರ ಗಾಯವಾಗಿದ್ದು, ಹೃದಯಕ್ಕೆ ಸಂಪರ್ಕಿಸುವ 2 ನರಗಳು ತುಂಡಾಗಿವೆ. ಅಲ್ಲದೆ, ಬೆನ್ನುಮೂಳೆಗೂ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ. 5 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಹೃದಯಕ್ಕೆ ಸಂಪರ್ಕಿಸುವ 2 ನರಗಳನ್ನು ಮರುಜೋಡಣೆ ಮಾಡಿದ್ದಾರೆ. ಪರಾರಿಯಾಗಲು ಯತ್ನಿಸಿದ್ದ ಫರಾನ್​ನನ್ನು ಸ್ಥಳದಲ್ಲಿದ್ದವರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ನರಸಿಂಹರಾಜ ಪೊಲೀಸ್​ ಠಾಣೆ ಯಲ್ಲಿ ದೂರು ದಾಖ ಲಾಗಿದ್ದು, ಫರಾನ್​ನನ್ನು ವಿಚಾರಣೆಗೆ ಒಳಪಡಿಸಿರುವು ದಾಗಿ ತಿಳಿಸಿ ದ್ದಾರೆ. ಪ್ರಕರಣದ ಹಿಂದೆ ಮತ್ತಾರದೋ ಕೈವಾಡಯಿದೆ ಎಂದು ಸಹ ತಿಳಿದು ಬಂದಿದೆ.

మరింత సమాచారం తెలుసుకోండి: