ಮಂಡ್ಯ: ಉಪಚುನಾವಣೆ ನಡೆಯುವುದು ಡಿಸೆಂಬರ್ 5. ಫಲಿತಾಂಶ 9ಕ್ಕೆ. 10ನೇ ತಾರೀಕಿನಂದು ಬಿಜೆಪಿ ಪಕ್ಷವು ನಮ್ಮ ಮನೆ ಬಾಗಿಲಿಗೆ ಬಂದು ನಮ್ಮನ್ನು ದೋಸ್ತಿ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ವಿರುದ್ದ ಮಾಜಿ ಸಚಿವ ಮಾತನಾಡಿದ್ದು, ಇದೀಗ ರಾಜಕೀಯ ವಲಯದಲ್ಲಿ ಬಿಜೆಪಿಗರ ನಿದ್ದೆ ಗೆಡಸಿದೆ. ಈ ಮಾತು ಹೇಳಿದ್ದು ಯಾರು? ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ. 
 
ಪ್ರಸ್ತುತ ನಡೆಯುತ್ತಿರುವ ಉಪಚುನಾವಣೆ ಬಳಿಕ ರಾಜ್ಯದಲ್ಲಿ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಮನೆ ಬಾಗಿಲು ತಟ್ಟುತ್ತದೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿಕೆ ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ. 
 
ಉಪಚುನಾವನೆಯ ಬಳಿಕ ಸರಕಾರ ಉಳಿಯಬೇಕಾದರೆ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕಾಗುತ್ತದೆ. ಆದರೆ ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆಲ್ಲುತ್ತದೆ. ಹೀಗಾದಲ್ಲಿ ಸರಕಾರ ಉಳಿಸಿಕೊಳ್ಳಲು ಜೆಡಿಎಸ್ ಮನೆಬಾಗಿಲಿಗೆ ಬಿಜೆಪಿ ಬರಲೇ ಬೇಕಾಗುತ್ತದೆ ಎಂದರು. ನೂರಕ್ಕೆ ನೂರರಷ್ಟು ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು. ಇದೇ ವೇಳೆ ಬಿಜೆಪಿಯ ಆಂತರಿಕ ಭಿನ್ನಮತದ ಬಗ್ಗೆ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವುದೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ದೇಶವಾಗಿದೆ ಎಂದರು. 
 
 ಮಾಜಿ ಮುಖ್ಯಮಂತ್ರಿ ಎಚ್.ಡಿಕುಮಾರಸ್ವಾಮಿ, ಉಪಚುನಾವಣೆಯ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಅಸ್ತಿರತೆ ಉಂಟಾದರೆ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸರಕಾರ ಕಾಪಾಡುತ್ತೇನೆ. ಆದರೆ ಯಾವ ಸರಕಾರ ಎಂದು ಹೇಳುವುದಿಲ್ಲ ಎಂದಿದ್ದು ಅವರ ನಿಗೂಢಮಾತು ಕುತೂಹಲ ಕೆರಳಿಸಿದೆ. ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ಬಹುಮತ ಕೊರತೆಯಿಂದಾಗಿ ಬಿಜೆಪಿ ಸರಕಾರ ಪತನವಾಗುವ ಸಾಧ್ಯತೆ ಇದೆ. ಒಂದು ವೇಳೆ ಇಂತಹ ಪರಿಸ್ಥಿತಿ ಬಂದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ಚುನಾವಣೆ ಎದುರಿಸುವ ಪರಿಸ್ಥಿತಿಯಲ್ಲಿ ರಾಜ್ಯದ ಜನರು ಇರದ ಕಾರಣ ಸರಕಾರವನ್ನು ಕಾಪಾಡುತ್ತೇನೆ ಎಂದಿದ್ದರೂ ಯಾವ ಸರಕಾರವನ್ನು ಕಾಪಾಡಬೇಕು ಎಂಬುವುದನ್ನು ಡಿಸೆಂಬರ್ 9 ರ ಬಳಿಕ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ. ಈ ಮಾತು ಇದೀಗ ಭಾರೀ ಕುತೂಹಲ ಮೂಡಿಸಿದೆ.

మరింత సమాచారం తెలుసుకోండి: