ಹಾವೇರಿ: ರಾಜ್ಯದಲ್ಲಿ ದಿನ ಕಳೆದಂತೆ ಉಪ ಚುನಾವಣಾ ಕದನ ರಂಗೇರುತ್ತಿದ್ದು, ಪ್ರಚಾರದಲ್ಲಿ ನಾಯಕರುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಮತದಾರ ಪ್ರಭುವಿನ ಒಲೈಕೆಯಲ್ಲಿ ಕಾರ್ಯನಿರತರಾಗಿದ್ದಾರೆ.  ಇದೀಗ ಬಿಜೆಪಿಯ ನಾಯಕರೊಬ್ಬರು ನಮ್ಮ ಬಿಜೆಪಿ ಪಕ್ಷಕ್ಕೆ ಯಾವ ಪಕ್ಷಗಳ ಬೆಂಬಲ ಬೇಕಿಲ್ಲ ಎಂದಿದ್ದಾರೆ. ಅದು ಯಾರು ಎಂಬ ಮಾಹಿತಿ ಇಲ್ಲಿದೆ ನೋಡಿ. 
 
ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ನಾವು ಎಲ್ಲ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಬಹುಮತದೊಂದಿಗೆ ಬಿಜೆಪಿ ಸರಕಾರ ಆಡಳಿತದಲ್ಲಿ ಇರುತ್ತದೆ. ನಮಗೆ ಬೇರೆ ಯಾವ ಪಕ್ಷದ ಬೆಂಬಲ ಪಡೆಯುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ನಮಗೆ ಯಾರ ಸಹಕಾರದ ಆವಶ್ಯಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಪ್ರತಿಪಕ್ಷದ ವಿರುದ್ಧ ಗುಡುಗಿದ್ದಾರೆ. 
 
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರಕ್ಕೆ ಬಹುಮತ ಬರದಿದ್ದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾಗಲಿದೆ ಎಂಬುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ಬಹುಮತ ಬಂದೇ ಬರುತ್ತದೆ. ಜೆಡಿಎಸ್‌ ಬೆಂಬಲ ಪಡೆಯುವ ವಿಚಾರ ಇಲ್ಲವೇ ಇಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿಗೆ ಬರುತ್ತೇನೆ ಎಂದು ಬಹಳಷ್ಟು ಜನ ಹೇಳಿದ್ದಾರೆ. ಆದರೆ ನಮಗೆ ಅದರ ಅಗತ್ಯವೇ ಇಲ್ಲ. ನಮಗೆ ಬಹುಮತವಿದೆ ಎಂದು ಹೇಳಿದ್ದೇವೆ. ಹೊಸದಾಗಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ನಾವು ಒಂದು ಪಕ್ಷ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು. 
 
ಉಪ ಚುನಾವಣೆ ನಡೆಯುತ್ತಿರುವ ಎಲ್ಲ 15ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ. ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುದಕ್ಕೆ ಮಾತ್ರ ಈಗ ಪೈಪೋಟಿ ಮಾಡುತ್ತಿದ್ದೇವೆ. ಮುಂದಿನ ಮೂರೂವರೆ ವರ್ಷಗಳ ಕಾಲ ಬಿಜೆಪಿ ಸರಕಾರ ಇರಬೇಕುಎಂಬುದು ಜನರ ಅಪೇಕ್ಷೆ ಇದೆ. ವಿಪಕ್ಷದವರುಏನು ಬೇಕಾದವರು ಹೇಳಬಹುದು. ಅವರಿಗೆ ಸ್ವಾತಂತ್ರ್ಯ ಇದೆ. ಆದರೆ ಮತದಾರರು ನಮ್ಮ ಜತೆ ಇದ್ದಾರೆ. ನಾಲ್ಕು ತಿಂಗಳುಗಳ ಆಡಳಿತದ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ನಾವೆ ಗೆಲ್ಲೋದು ಎಂದು ಯಡಿಯೂರಪ್ಪ ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.a

మరింత సమాచారం తెలుసుకోండి: