ಮುಂಬೈ: ಚುನಾವಣಾ ಫಲಿತಾಂಶ ಪ್ರಕಟವಾಗಿ ಒಂದು ತಿಂಗಳು ಕಳೆದರು ಸಹ ಸರ್ಕಾರ ರಚಿಸಿದ ಮಹಾರಾಷ್ಟ್ರದ ಮಹಾ ಡ್ರಾಮದಲ್ಲಿ ರಾತ್ರೋರಾತ್ರಿ ಪಡ್ನವಿಸ್ ಸಿಎಂ, ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಸರ್ಕಾರ ಮೂರೇ ದಿನದಲ್ಲಿ ಮಗುಚಿ ಬಿತ್ತು. ಕಾರಣ ನೀಡಿದ್ದ ಭರವಸೆ ಈಡೇರಿಸಲಿಲ್ಲ ಎಂಬುದು. ಪ್ರಧಾನಿ ನಿಜಕ್ಕೂ ಸಚಿವೆ ಸ್ಥಾನ ಆಫರ್ ನೀಡಿದ್ದರಾ ಇಲ್ಲವಾ ಎಂಬುದು ಅವರ ಬಾಯಲ್ಲೇ ಕೇಳಿ. 
 
ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ಚರ್ಚೆಯಾಗುತ್ತಿದ್ದ ಬೆನ್ನಲ್ಲೇ, ಶರದ್​ ಪವಾರ್​ ಮಗಳು ಸುಪ್ರಿಯಾ ಸುಳೆ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುಪ್ರಿಯಾ ಸುಳೆ, ನನ್ನ ಮೇಲೆ ಅಷ್ಟು ದೊಡ್ಡ ನಂಬಿಕೆಯಿಟ್ಟು ಕ್ಯಾಬಿನೆಟ್​ ಸ್ಥಾನ ನೀಡುವುದಾಗಿ ಹೇಳಿದ್ದು ಪ್ರಧಾನಿ ನರೇಂದ್ರ ಮೋದಿಯವರ ಉದಾತ್ತತೆ. ಇದಕ್ಕಾಗಿ ನಾನವರಿಗೆ ಸದಾ ಕೃತಜ್ಞಳಾಗಿರುತ್ತೇನೆ. ಮೋದಿಯವರು ಈ ಸ್ಥಾನವನ್ನು ನೀಡಲು ಮುಂದಾದರೂ ನನ್ನ ತಂದೆ ಶರದ್​ ಪವಾರ್ ಅವರು ವಿನಯದಿಂದಲೇ ಅದನ್ನು ತಿರಸ್ಕರಿಸಿದರು ಎಂದು ಹೇಳಿದರು.  ಈ ರಾಜ್ಯಕ್ಕೆ ನಾನೇನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ. ನಾನೋರ್ವ ಸಂಸದಳಾಗಿ ನನ್ನ ಕೆಲಸದಲ್ಲಿ ಸಂತೃಪ್ತಿ ಹೊಂದಿದ್ದೇನೆ. ಇದನ್ನೇ ಮುಂದುವರಿಸುತ್ತೇನೆ ಎಂದು ಸುಪ್ರಿಯಾ ತಿಳಿಸಿದರು. ಉದ್ಧವ್​ ಠಾಕ್ರೆಯವರು ತಮ್ಮ ಪಕ್ಷ ಶಿವಸೇನೆಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಈಗ ಹೊತ್ತಿರುವ ಮಹಾರಾಷ್ಟ್ರದ ನಾಯಕತ್ವವನ್ನೂ ಅಷ್ಟೇ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಸುಪ್ರಿಯಾ ಸುಳೆ ವಿಶ್ವಾಸ ವ್ಯಕ್ತಪಡಿಸಿದರು.
 
ಎನ್​ಸಿಪಿ-ಬಿಜೆಪಿ ಒಟ್ಟಾಗಿ ಕೆಲಸ ಮಾಡೋಣವೆಂದು ಪ್ರಧಾನಿ ನರೇಂದ್ರ ಮೋದಿ ನನ್ನ ಬಳಿ ಹೇಳಿದ್ದರು. ಆದರೆ ನಾನದನ್ನು ನಿರಾಕರಿಸಿದ್ದೆ. ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇದೆ. ಅದು ಹಾಗೇ ಮುಂದುವರಿಯಲಿ. ಆದರೆ ಬಿಜೆಪಿ-ಎನ್​ಸಿಪಿ ಮೈತ್ರಿ ಸಾಧ್ಯವಿಲ್ಲ ಎಂದು ನರೇಂದ್ರ ಮೋದಿಯವರಿಗೆ ಹೇಳಿದ್ದೆ ಎಂದು ಇಂದು ಬೆಳಗ್ಗೆ ಶರದ್​ ಪವಾರ್​ ಸಂದರ್ಶನವೊಂದರಲ್ಲಿ ತಿಳಿಸಿದ್ದು ಭಾರೀ ದೊಡ್ಡ ಸುದ್ದಿಯಾಗಿತ್ತು. ಇದೀಗ ಶರದ್ ಮಗಳು ಸುಪ್ರಿಯಾ ಆಫರ್ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.

మరింత సమాచారం తెలుసుకోండి: