ವಿಜಯಪುರ: ಮೂರು ಡಿಸಿಎಂ ಹುದ್ದೆ ಸೃಷ್ಠಿಸಿ ಎಲ್ಲರನ್ನು ಆಶ್ಚರ್ಯವಾಗುವಂತೆ  ಮಾಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ. ಇದೀಗ ಈ ಮಾತಿಗೆ ಬಿಜೆಪಿ ಪ್ರಮುಖ ನಾಯಕರಿಂದಲೇ ಆಕ್ಷೇಪ ಎದುರಾಗಿದೆ. ಹೌದು, ಅವರೇ ಸ್ವತಹ ಅವರ ಬಾಯಿಂದ 3 ಡಿಸಿಎಂ ಹುದ್ದೆ ಗಳನ್ನು ಬಿಟ್ಟುಬಿಡಿ ಎಂದಿದ್ದಾರೆ. ಹಾಗಾದ ರೆ ಈ ಮಾತನ್ನು ಹೇಳಿದ್ದು ಯಾರು ಗೊತ್ತಾ!? 
 
ಸ್ವ ಪಕ್ಷದ ನಾಯಕರನ್ನು ಟೀಕಿಸಿ ಪಕ್ಷದ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಪಕ್ಷಕ್ಕೆ ಸಲಹೆಯೊಂದನ್ನು ನೀಡಿ ಕೆಲವ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ.
 
ಗುರುವಾರ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್,  ರಾಜ್ಯ ಸರ್ಕಾರದಲ್ಲಿ ಇರುವ ಮೂರು ಡಿಸಿಎಂ ಸ್ಥಾನಗಳನ್ನು ಕೈಬಿಡುವುದು ಒಳ್ಳೆಯದು ಎಂದು ಪರೋಕ್ಷವಾಗಿ ರಾಜ್ಯ ನಾಯಕರಿಗೆ ಹಾಗೂ ಹೈಕಮಾಂಡ್‌ಗೆ ಸಲಹೆ ನೀಡಿದರು. ಉಪ ಮುಖ್ಯಮಂತ್ರಿ ಸಂವಿಧಾನತ್ಮಕವಾದ ಹುದ್ದೆ ಅಲ್ಲ. ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಸಾಕು. ಉಪ ಮುಖ್ಯಮಂತ್ರಿ ಹುದ್ದೆಗಳ ಅವಶ್ಯಕತೆ ಇಲ್ಲ. ಹೀಗಾಗಿ ಉಳಿದವರು ಮಂತ್ರಿಗಳಾಗಿರಲಿ ಎಂದು ಹೇಳಿದರು.
 
ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಮಂತ್ರಿ ಸ್ಥಾನ ಕಲ್ಪಿಸಿದರೆ ಅದನ್ನು ಸಮರ್ಥವಾಗಿ ನಿಭಾಯಿಸು ತ್ತೇನೆ. ಕೊಟ್ಟರೆ ನೋಡೋಣ. ಗೂಟದ ಕಾರು ಹಾಗೂ ಅಂಗರಕ್ಷಕರಿಗಾಗಿ ಮಂತ್ರಿ ಪದವಿ ಬೇಡ. ಅಭಿವೃದ್ಧಿಗಾಗಿ ಕೊಡಲಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. 
 
ಬಿಜೆಪಿ ರಾಷ್ಟ್ರೀಯ ನಾಯಕರು ಜಾರ್ಖಂಡ್ ಚುನಾವಣೆಯಲ್ಲಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆಗೆ ಎರಡು ವಾರ ಕಾಯಬೇಕು ಎಂದು ತಿಳಿಸಿ ದ್ದಾರೆ. ಆದರೆ ರಾಜ್ಯದಲ್ಲಿ ಈಗಾಗಲೇ ಸಂಪುಟ ವಿಸ್ತರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳ ಲಾಗಿದ್ದು, ಯಾರಿಗೆ ಯಾವ ಖಾತೆ ಎಂದು ಸಹ ಲೆಕ್ಕಾಚಾರ ಮಾಡುತ್ತಿದ್ದಾರೆ.  ಇತ್ತೀಚೆಗಷ್ಟೇ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ನೆರೆ ಪರಿಹಾರ ವಿಚಾರಕ್ಕೆ ರಾಜ್ಯ ಬಿಜೆಪಿ ಸಂಸದರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರು. ಬಳಿಕ ಅವರಿಗೆ ಪಕ್ಷದಿಂದ ಶೋಕಾಸ್ ನೋಟಿಸ್ ಸಹ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
 

మరింత సమాచారం తెలుసుకోండి: