ಬೆಂಗಳೂರು: ಸದಾ ಕಾಲ ಕಚ್ಚಾಡುತಿದ್ದ ಈಶ್ವರಪ್ಪ ಸಿದ್ದರಾಮಯ್ಯ , ಇದೀಗ ನಾವಿಬ್ಬರು ಬುದ್ದಿವಂತರು ಎಂದಿದ್ದಾರೆ.  ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ ಮಾತನಾಡಿದ್ದಾರೆ. 
 
ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಬಾಂಧವ್ಯ ತುಂಬಾ ಚೆನ್ನಾಗಿದೆ. ನಾವು ಪಕ್ಷದ ವಿಚಾರದಲ್ಲಿ ಎಷ್ಟೇ ಹೊಡೆದಾಡಬಹುದು. ಆದರೆ, ಸ್ನೇಹದ ವಿಚಾರದಲ್ಲಿ ಮಾತ್ರ ನಮ್ಮನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಕೆ.ಎಸ್ ಈಶ್ವರಪ್ಪ ಅವರು ಹೇಳಿದರು. ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಅವರನ್ನು ಭೇಟಿಯಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾವು ಹೊಡೆದಾಡುವುದು ನೋಡಿ ಜೀವನ ಪರ್ಯಂತ ನಾವು ಮಾತೇ ಆಡುವುದಿಲ್ಲ ಅಂದುಕೊಳ್ತಾರೆ. ಆದರೆ, ಹಾಗಂದುಕೊಳ್ಳುವವರು ದಡ್ಡರು, ನಾವಿಬ್ಬರು ಬುದ್ಧಿವಂತರು ಎಂದು ತಮ್ಮ ಆತ್ಮೀಯತೆಯ ಬಗ್ಗೆ ತಿಳಿಸಿದರು. 
 
ಅಂತೆಯೇ ಮಾತನಾಡಿ, ನಾವಿಬ್ಬರೂ ವಿಧಾನ ಪರಿಷತ್​ನಲ್ಲಿ ಜೋರಾಗಿಯೇ ಜಗಳ ಆಡಿದ್ದೇವೆ. ಆದರೆ, ನಾವು ಅವರು ಯಾವತ್ತೂ ಸ್ನೇಹದ ವಿಚಾರದಲ್ಲಿ ದೂರವಾಗಿಲ್ಲ ಎಂದ ಅವರು, ನನ್ನ ಕತ್ತು ಸೀಳಿದರೂ ನಾನು ಬಿಜೆಪಿ ಪಕ್ಷ ಬಿಡಲ್ಲ. ನನ್ನ ಪಕ್ಷದ ವಿಚಾರಕ್ಕೆ ಬಂದರೆ ನಾನು ಸುಮ್ಮನಿರುವುದಿಲ್ಲ. ಹಾಗಂತ ನಾನೂ ಬೇರೆ ಪಕ್ಷದ ವಿಚಾರಕ್ಕೆ ಹೋಗುವುದಿಲ್ಲ ಎಂದು ಪಕ್ಷದ ನಿಷ್ಟೆಯ ಬಗ್ಗೆ ತಿಳಿಸಿದರು. 
 
ಸಿದ್ದರಾಮಯ್ಯ ನನ್ನ ಜಗಳ ನೋಡಿ ಎಷ್ಟೋ ಸಲ ಸದನವನ್ನು ಮುಂದೂಡಿದರು. ಆದರೆ, ಸದನ ಮುಗಿದ ಬಳಿಕ ನಾವಿಬ್ಬರೂ ಒಟ್ಟಿಗೆ ಮಾತನಾಡುತ್ತಿದ್ದೇವು. ನಾನು ಡಿಸಿಎಂ ಆದ ವೇಳೆಯಲ್ಲಿ ಮಾಜಿ ಸಿಎಂ ನೋಟ್ ಕಳಿಸುತ್ತಿದ್ದರು, ಓಕೆ ಎಂದು ಸನ್ನೆ ಮಾಡುತ್ತಿದ್ದರು. ನಾನು ಅದಕ್ಕೆ ಸಹಿ ಹಾಕುತ್ತಿದ್ದೆ ಎಂದರು.
 
ಇನ್ನು ಸಿದ್ದರಾಮಯ್ಯ ಅವರು ಸಿಎಂಯಾದ ಸಂದರ್ಭದಲ್ಲಿವೂ ನಾನು ಏನಾದರೂ ಕೆಲಸ ಕಳಿಸುತ್ತಿದ್ದೆ, ಅವರು ಕಣ್ಣಲ್ಲೇ ಓಕೆ ಎಂದು ಸಹಿ ಹಾಕುತ್ತಿದ್ದರು. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೂ ನಾನು ಹೀಗೆ ಇದ್ದೇನೆ. ಆದರೆ, ದೇವೇಗೌಡರ ಹತ್ತಿರ ಜಾಸ್ತಿ ಹೋಗುವುದಿಲ್ಲ. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂದು ಬಿಜೆಪಿ ಸಚಿವ ಕೆ.ಎಸ್​ ಈಶ್ವರಪ್ಪ ತಿಳಿಸಿದ್ದಾರೆ.

మరింత సమాచారం తెలుసుకోండి: