ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಸರ್ಕಾರ 12 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸರ್ಕಾರ ಏನೋ ಸೇಫ್ ಆಗಿದೆ. ಆದರೆ ಅನರ್ಹ ಶಾಸಕರೀಗ  ಅರ್ಹರಾಗಿದ್ದಾರೆ. ಇವರಿಗೂ ಡಿಸಿಎಂ ಪಟ್ಟ ನೀಡಬೇಕೆಂಬುದೇ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ತಲೆನೋವಾಗಿ ಪರಿಣಮಿಸಿದೆ. 
 
ಬೆಳಗಾವಿ ಸಾಹುಕಾರ ರಮೇಶ್‌ ಜಾರಕಿಹೊಳಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಇಲ್ಲದಿದ್ದರೆ, ಉಳಿದವರನ್ನೂ ಉಪ ಮುಖ್ಯಮಂತ್ರಿ ಪಟ್ಟದಿಂದ ಕೈಬಿಡಬೇಕು ಎಂಬ ನೂತನ ಶಾಸಕರ ಷರತ್ತು. ಇನ್ನೊಂದೆಡೆ, ಡಿಸಿಎಂ ಹುದ್ದೆಯ ಆಕಾಂಕ್ಷಿ ಸಚಿವ ಶ್ರೀ ರಾಮುಲು ಸರಕಾರಿ ಕಾರ್ಯಕ್ರಮ ಗಳಿಂದ ದೂರ ಉಳಿಯುತ್ತಿರುವುದು ಈ ಘಟನೆಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
 
ಗುರುವಾರ ಸಂಪುಟ ಸಭೆಗೆ ಗೈರು ಹಾಜರಾಗಿದ್ದ ಶ್ರೀರಾಮುಲು, ಶುಕ್ರವಾರ ನಡೆದ ಹಿರಿಯ ಅಧಿಕಾರಿಗಳ ಮಟ್ಟದ ಸಭೆಯಲ್ಲೂ ಭಾಗವಹಿಸಿರಲಿಲ್ಲ.. ಹೀಗಾಗಿ ಯಡಿಯೂರಪ್ಪ ಉಪ ಮುಖ್ಯಮಂತ್ರಿ ಎಂಬ ಪಟ್ಟದ ಬಿಕ್ಕಟ್ಟು ಬಗೆಹರಿಸಲಾಗದೆ ಇಕ್ಕಟ್ಟಿಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ ವಲಸಿಗ ಶಾಸಕರನ್ನು ಸಚಿವರನ್ನಾಗಿ ಮಾಡುವ ಜತೆಗೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ಎಚ್‌. ವಿಶ್ವನಾಥ್‌ ಹಾಗೂ ಎಂ ಟಿ ಬಿ ನಾಗರಾಜ್‌ ಅವರನ್ನು ಸಚಿವರನ್ನಾಗಿ ಮಾಡಬೇಕಿದೆ. ಆದರೆ ರಮೇಶ್‌ ಜಾರಕಿ ಹೊಳಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡ ಬೇಕೆಂಬ ವಲಸಿಗರ ಪಟ್ಟು ಮೂಲ ಬಿಜೆಪಿ ನಾಯಕ ಸಮುದಾಯದ ಹಿರಿಯ ನಾಯಕ ಬಿ. ಶ್ರೀರಾಮುಲು ಅವರ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗಿದೆ.
 
ಪ್ರಾದೇಶಿಕವಾರು ಡಿಸಿಎಂಗೆ ಹೆಚ್ಚಿನ ಕೂಗು ಸಹ ಕೇಲಿಬರುತ್ತಿದೆ. 
ಡಿಸಿಎಂ ಹುದ್ದೆಯೇ ಸಮಸ್ಯೆಯಾ ಗುತ್ತಿರುವುದರಿಂದ ಈ ಹುದ್ದೆಯೇ ಬೇಡ. ಮುಖ್ಯಮಂತ್ರಿಗಳೇ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ. ಹೀಗಿರುವಾಗ ಮೂರ್‍ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸುವ ಅಗತ್ಯವಿಲ್ಲ ಎಂಬ ವಾದವೂ ಪಕ್ಷದಲ್ಲಿ ಬಲವಾಗಿದೆ.
 
ಜಾತಿ ಅಥವಾ ಪ್ರಾದೇಶಿಕ ಆಧಾರದಲ್ಲಿ ಆಂಧ್ರ ಪ್ರದೇಶ ಮಾದರಿಯಲ್ಲಿ ಐವರನ್ನು ಉಪ ಮುಖ್ಯಮಂತ್ರಿಯ ನ್ನಾಗಿಸಿ, ಒಂದೊಂದು ಪ್ರಾದೇಶಿಕ ವಿಭಾಗವನ್ನು ಒಬ್ಬೊಬ್ಬರಿಗೆ ಹಂಚಿಕೆ ಮಾಡಬೇಕಂಬ ಮಾತುಗಳು ಕೇಳಿಬರುತ್ತಿವೆ.
 
 
 

మరింత సమాచారం తెలుసుకోండి: