ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ನಡೆದ ಉಪ ಚುನಾವಣೆ ಮತ್ತು ಅದರ ಫಲಿತಾಂಶ ರಾಜಕೀಯದಲ್ಲಿ ಹತ್ತು ಹಲವು ಬದಲಾವಣೆಯನ್ನು ತಂದಿವೆ. ಬಿಜೆಪಿ 12 ಕ್ಷೇತ್ರ ಗೆಲ್ಲಲು ಪ್ರಮುಖ ಕಾರಣವಾದವರಲ್ಲಿ ಒಬ್ಬರಾಗಿದ್ದ ಯಡಿಯೂರಪ್ಪ ನವರ ಮಗ ವಿಜಯೇಂದ್ರ ಇದೀಗ ಬಿಜೆಪಿಯಲ್ಲಿ ದೊಡ್ಡ ಹುದ್ದೆಯ ಮೇಲೆ ಅವರ ಕಣ್ಣು ಬಿದ್ದಿದೆ ಎಂಬ ಕುತೂಹಲಕಾರಿ ಮಾಹಿತಿ ಸಿಕ್ಕಿದೆ. ಅದೇನೆಂದು  ನಾವ್ ಹೇಳ್ತೀವಿ ನೋಡಿ.
 
ಇತ್ತೀಚೆಗಷ್ಟೇ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿದ್ದ ಕೆಆರ್ ಪೇಟೆಯಲ್ಲಿ ಬಿಜೆಪಿ ಮೊತ್ತಮೊದಲ ಬಾರಿಗೆ ಗೆಲುವು ಸಾಧಿಸಿತ್ತು. ವಿಜಯೇಂದ್ರ ಅವರೇ ಈ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರು. ಯಡಿಯೂರಪ್ಪ ಅವರ ಜನ್ಮಭೂಮಿಯಾಗಿದ್ದರೂ ಬಿಜೆಪಿಗೆ ನೆಲಯೇ ಇಲ್ಲದ ಕ್ಷೇತ್ರವಿದು. ಇಂಥ ನಾಡಿನಲ್ಲಿ ಊರೂರು ಸುತ್ತಿ ವಿಜಯೇಂದ್ರ ಪಕ್ಷ ಸಂಘಟನೆ ಮಾಡಿದರು. ಜೆಡಿಎಸ್ ವಿರೋಧಿ ಮತಗಳು ಬಿಜೆಪಿಯತ್ತ ಹೆಚ್ಚು ಹರಿದುಬರುವಂತೆ ಅವರು ನಿಗಾ ವಹಿಸಿದರು. ಅದರ ಪರಿಣಾಮವಾಗಿ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆದ್ದು ಬೀಗಿದರು. 
 
ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದ ಬಳಿಕ ಯಡಿಯೂರಪ್ಪ ಅವರ ಖದರ್ ಬದಲಾಗಿದೆ. ಕೆಆರ್ ಪೇಟೆ ದಿಗ್ವಿಜಯದ ಗರಿ ಇಟ್ಟುಕೊಂಡು ವಿಜಯೇಂದ್ರ ಅವರು ಪಕ್ಷದೊಳಗೆ ಹೊಸ ಬೆಲೆ ಕಂಡುಕೊಂಡಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ವಿಜಯೇಂದ್ರ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ಧಾರೆ. ಕೆಆರ್ ಪೇಟೆಯಲ್ಲಿ ಅಸಾಧ್ಯದ ಗೆಲುವನ್ನು ಸಾಧ್ಯವಾಗಿಸಿದ ಸಾಧನೆಯನ್ನು ಮನದಟ್ಟು ಮಾಡಿದ್ದಾರೆ. ಪಕ್ಷ ಸಂಘಟನೆಗೆ ತಮಗೆ ಇನ್ನೂ ದೊಡ್ಡ ಅವಕಾಶ ನೀಡಬೇಕೆಂದು ಅವರು ಅಮಿತ್ ಶಾ ಅವರನ್ನು ಮನವಿ ಕೂಡ ಮಾಡಿದ್ದಾರೆ. 
 
ಪರೋಕ್ಷವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನೂತನ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ಮಹೇಶ್ ಟೆಂಗಿನಕಾಯಿ ಅವರಿಗೆ ಆ ಸ್ಥಾನ ನೀಡಿದ್ದರು. ಈಗ ಉಪಸಮರದಲ್ಲಿ ಯಡಿಯೂರಪ್ಪ ಅವರ ಬಲ ಗಮನಾರ್ಹ ರೀತಿಯಲ್ಲಿ ಹೆಚ್ಚಳವಾಗಿದೆ. ಈಗ ಅವರ ಮಾತನ್ನು ಮೋದಿ ಮತ್ತು ಅಮಿತ್ ಶಾ ಕೂಡ ಆಸಕ್ತಿಯಿಂದ ಕೇಳುತ್ತಾರೆ. ಬಿ.ವೈ.ವಿಜಯೇಂದ್ರ ಅವರಿಗೆ ಉನ್ನತ ಸ್ಥಾನ ಸಿಗುವುದು ಬಹುತೇಕಖಚಿತ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

మరింత సమాచారం తెలుసుకోండి: