ಮಂಗಳೂರು: ಕಳೆದ ಎರಡು ವಾರಗಳಿಂದ ರಾಷ್ಟ್ರದ್ಯಂತ ಪೌರತ್ವದ ಬಿಸಿತಟ್ಟಿದ್ದು ಮಂಗಳೂರಿನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಗೋಲಿಬಾರ್ ನಡೆದ ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಆದ್ರೆ, ಗಲಾಟೆ ಹಿಂದಿನ ದಿನ ಪೊಲೀಸ್ ಅಧಿಕಾರಿಗಳು ಆರ್‌ಎಸ್‌ಎಸ್‌ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮನೆಯಲ್ಲಿ ಇದ್ದರು ಎಂದು ಮಾಜಿ ಸಿಎಂ ಗಂಭೀರ ಆರೋಪ ಮಾಡಿದ್ದಾರೆ. ಯಾರವರು? ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿದೆ ನೋಡಿ. 
 
 ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಬೆಳಗ್ಗೆ ಮಂಗಳೂರಿಗೆ ತೆರಳಿ, ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಯಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಗಂಭೀರ ಆರೋಪವನ್ನು ಮಾಡಿದ್ದಾರೆ. ನಗರದಲ್ಲಿ ಪೊಲೀಸರ ಗೋಲಿಬಾರ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈಗಿರುವ ಸರ್ಕಾರವೇನು ಗೃಹ ಸಚಿವರ ಆದೇಶದ ಮೇಲೆ ನಡೀತಿದೆಯೋ? ಇಲ್ಲ ಕಲ್ಲಡ್ಕ ಪ್ರಭಾಕರ್ ಭಟ್ ಸೂಚನೆ ಮೇಲೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ? ಗಲಾಟೆ ನಡೆಯುವ ಹಿಂದಿನ ದಿನ ಕಲ್ಲಡ್ಕ ಪ್ರಭಾಕರ್ ಮನೆಯಲ್ಲಿ ಅಧಿಕಾರಿಗಳು ಇದ್ದರು. ಇದರ ಬಗ್ಗೆ ತನಿಖೆ ಮಾಡ್ತೀರಾ ಎಂದು ಪ್ರಶ್ನಿಸಿ ಏಕವಚನದಲ್ಲೇ ಕಲ್ಲಡ್ಕ ಪ್ರಭಾಕರ್ ವಿರುದ್ಧ ಗುಡುಗಿದ್ದಾರೆ. ಇದೀಗ ರಾಜ್ಯದ್ಯಂತ ಈ ವಿಚಾರ ಚರ್ಚೆಗೆ ಕಾರಣವಾಗಿದೆ. 
 
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾನ ಮಾರ್ಯಾದೆ ಇದ್ದರೆ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ, ಅವರನ್ನ ಜೈಲಿಗೆ ಕಳುಹಿಸಲಿ. ಇವರ ಯೋಗ್ಯತೆಗೆ ಇದೊಂದು ಸರ್ಕಾರನಾ? ಸತ್ತವರ ಮೇಲೂ ಎಫ್‍ಐಆರ್ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಮಿಷನರ್ ಹೇಳ್ತಾನೆ 7 ಸಾವಿರ ಜನ ಮಾಬ್ ಇತ್ತು ಅಂತ. ಅದಕ್ಕೆ ಬೀದಿ ಬೀದಿಯಲ್ಲಿ ಸಿಕ್ಕವರಿಗೆ ಹೊಡೆದ್ರೆ ಹೇಗೆ? ಐಎಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ್ರೆ, ಗಣಪತಿ ಆತ್ಮಹತ್ಯೆ ಆದಾಗ ಗೃಹ ಮಂತ್ರಿ ಜವಾಬ್ದಾರಿ ಅಂದರು. ಈಗ ಎರಡು ಸಾವಾಗಿದೆ ಇದರ ಜವಾಬ್ದಾರಿ ಯಾರು? 15 ಜನರಿಗೆ ಪ್ರಮಾಣ ವಚನ ಬೋಧನೆ ಮಾಡ್ತಿದ್ದಾರೆ. 20-25 ಲಕ್ಷ ಖರ್ಚು ಮಾಡಿ ಪ್ರಮಾಣ ವಚನ ಮಾಡಿದ್ದಾರೆ ಎಂದು ಸಿಎಂ ವಿರುದ್ದ ಗುಡುಗಿದ್ದಾರೆ. 
 

మరింత సమాచారం తెలుసుకోండి: