ರಾಂಚಿ: ಕುತೂಹಲ ಕೆರಳಿಸಿದ್ದ ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಕಮಲ ಅರಳಲೇ ಇಲ್ಲ. ಮತದಾರ ಪ್ರಭು ಕೈ ಹಿಡಿದಿದ್ದಾರೆ. ಹೌದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಪ್ಲಾನ್ ಪಕ್ಕಾ ಪ್ಲಾಫ್ ಆಗಿದೆ. ಹಾಗಾದರೆ ಜಾರ್ಖಂಡ್ ಮುಂದಿನ ಮುಖ್ಯಮಂತ್ರಿ ಯಾರು ಗೊತ್ತಾ. 
 
ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಹಾಗೂ ಆರ್ ಜೆಡಿ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದು, ಆಡಳಿತಾರೂಢ ಬಿಜೆಪಿಯ ಎರಡನೇ ಬಾರಿ ಗದ್ದುಗೆ ಏರುವ ಕನಸು ಭಗ್ನಗೊಂಡಿದೆ. ಈ ಬಾರಿಯೂ ಜಾರ್ಖಂಡ್ ನಲ್ಲಿ ಮತ್ತೆ ಸರ್ಕಾರ ರಚಿಸುವುದಾಗಿ ಬಿಜೆಪಿ ವಿಶ್ವಾಸವ್ಯಕ್ತಪಡಿಸಿತ್ತು. ಅಲ್ಲದೇ ಈ ಫಲಿತಾಂಶ ತನಗೆ ಆಘಾತಕಾರಿ ಎಂದು ನಿರ್ಗಮಿತ ಮುಖ್ಯಮಂತ್ರಿ ರಘಬರ್ ದಾಸ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
 
ಸುದ್ದಿಗಾರರ ಜತೆ ಮಾತನಾಡಿದ ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೋರೆನ್, ಜಾರ್ಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಶೀಘ್ರವೇ ಪ್ರಮಾಣವಚನ ಸ್ವೀಕರಿಸುವುದಾಗಿ ತಿಳಿಸಿದ್ದು, ಜಾರ್ಖಂಡ್ ನಲ್ಲಿ ಹೊಸ ಶಖೆ ಆರಂವಾಗಲಿದೆ. ಅಲ್ಲದೇ ಜನರ ಭರವಸೆ, ನಿರೀಕ್ಷೆ ಈಡೇರಿಸುವುದಾಗಿ ಭರ್ಜರಿ ಭರವಸೆ ನೀಡಿದ್ದಾರೆ. 
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ಮೈತ್ರಿಕೂಟಕ್ಕೆ ಮತದಾರರು ಭರ್ಜರಿ ಬಹುಮತ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ಕುರಿತು ಮೈತ್ರಿಪಕ್ಷಗಳ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
 
ಕಳೆದ ವಿಧಾನಸಭಾ ಚುನಾವಣೆಯಲ್ಲಿ 81 ಸ್ಥಾನಗಳ ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ 37 ಸ್ಥಾನ, ಎಜೆಎಸ್ ಯು 5 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಜೆಎಸ್ ಯು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 25 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಜೆಎಂಎಂ, ಕಾಂಗ್ರೆಸ್ ಮತ್ತು ಆರ್ ಜೆಡಿ 46 ಕ್ಷೇತ್ರಗಳಲ್ಲಿ ವಿಜಯ ಗಳಿಸಿದೆ. ಬಿಜೆಪಿಗೆ ಈ ಬಾರಿ 12 ಸ್ಥಾನ ನಷ್ಟವಾಗಿದ್ದು, ಜೆಎಂಎಂ ಹಾಗೂ ಕಾಂಗ್ರೆಸ್ ಮೈತ್ರಿಗೆ 21 ಸ್ಥಾನಗಳು ಲಾಭವಾಗಿದ್ದು, ಮೈತ್ರಿಯೂ ಇದೀಗ ಸರ್ಕಾರ ರಚಿಸಲಿದೆ. ಹೌದು, ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂಬುದು ಹೇಮಂತ್ ತಿಳಿಸಿದ್ದಾರೆ.

మరింత సమాచారం తెలుసుకోండి: