ಕೋಲ್ಕತ್ತಾ: ನಿಲ್ಲದ ಪೌರತ್ವದ ಬಿಸಿಗೆ ಮಂಗಳೂರಿನಲ್ಲಿ ಇಬ್ಬರು ವ್ಯಕ್ತಿಗಳು ಪ್ರಾಣ ತೆತ್ತಿದ್ದರು. ಇದಕ್ಕಾಗಿ ರಾಜ್ಯದಲ್ಲಿ ವಾದ - ಪ್ರತಿವಾದಗಳು ತಾರಕಕ್ಕೇರಿದ್ದವು.  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಂಗಳೂರು ಗಲಭೆ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್ ಮೃತರವರಿಗೆ ಪರಿಹಾರ ಘೋಷಣೆ ಮಾಡಿದ್ದು, ಇದೀಗ ಭಾರೀ ಸುದ್ದಿಯಾಗಿದ್ದಾರೆ. 
 
ಸಿಎಎ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಕರ್ನಾಟಕ ಸರ್ಕಾರ ಸಿಎಎ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದವರಿಗೆ ನೀಡುತ್ತೇವೆ ಎಂದಿದ್ದ ಪರಿಹಾರ ಹಣವನ್ನು ವಾಪಸ್ ಪಡೆದಿದೆ. ಬಿಜೆಪಿ ಸರ್ಕಾರ ಮೊದಲು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಕರ್ನಾಟಕ ಸಿಎಂ ಅವರು ಕೊಟ್ಟ ಪರಿಹಾರವನ್ನು ವಾಪಾಸ್ ಪಡೆದಿರುವ ಹಲವು ಉದಾಹರಣೆಗಳಿದ್ದು, ಆದರೆ ನಾವು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ಸಿಎಎ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದ ಮಮತಾ ಬ್ಯಾನರ್ಜಿ, ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಪ್ರತಿಭಟನೆಯನ್ನು ಪ್ರಜಾಪ್ರಭುತ್ವ ರೂಪದಲ್ಲಿ ವಿದ್ಯಾರ್ಥಿಗಳು ನಡೆಸಬೇಕು ಎಂದು ಕರೆ ನೀಡಿದರು.
 
ಸಿಎಎ ಇಂದ ರಾಷ್ಟ್ರಕ್ಕೆ ಆಪತ್ತಿದೆ. ಆ ಕಾನೂನು ಭಾರತೀಯರಿಗೆ ಮುಳುವಾಗಲಿದೆ ಎಂದಿದ್ದಾರೆ. ಸಿಎಎ ಕಾಯ್ದೆಯನ್ನು ಪಶ್ವಿಮ ಬಂಗಾಳದಲ್ಲಿ ಜಾರಿ ಮಾಡುವುದಿಲ್ಲ ಎಂದಿದ್ದ ಮಮತಾ ಬ್ಯಾನರ್ಜಿ, ಸಿಎಎ ವಿರುದ್ಧ ಹೋರಾಟ ನಡೆಸಲು ಬೃಹತ್ ಪ್ರತಿಭಟನಾ ಸಮಾವೇಶಗಳಿಗೆ ಕರೆ ನೀಡಿದ್ದರು.ಪ್ರತಿಭಟನಾ ಮೆರವಣಿಗೆಯಲ್ಲಿ ಟಿಎಂಸಿ ಕಾರ್ಯಕರ್ತರು, ಪಕ್ಷ ಹಿರಿಯ ಮುಖಂಡರು ಸೇರಿದಂತೆ ಹಲವರು ಮಮತಾ ಅವರಿಗೆ ಸಾಥ್ ನೀಡಿದ್ದು, ಪಶ್ಚಿಮ ಬಂಗಾಲದಾದ್ಯಂತ ಈಗಾಗಲೇ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. 
 
 
ಮಂಗಳೂರಿನಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಗೋಲಿಬಾರ್ ನಲ್ಲಿ ಮೃತ ಜಲೀಲ್ ಮತ್ತು ನೌಶಿನ್ ಕುಟುಂಬಕ್ಕೆ ಸಿಎಂ ಬಿಎಸ್‍ವೈ ಅವರು ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಆದರೆ ಆ ಬಳಿಕ ಪೊಲೀಸರು ಬಿಡುಗಡೆ ಮಾಡಿದ್ದ ವಿಡಿಯೋಗಳಲ್ಲಿ ಉದ್ದೇಶ ಪೂರ್ವಕವಾಗಿ ಗಲಾಟೆ ಸೃಷ್ಟಿಮಾಡಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಪರಿಹಾರ ಮೊತ್ತವನ್ನು ಸರ್ಕಾರ ವಾಪಸ್ ಪಡೆದಿತ್ತು.

మరింత సమాచారం తెలుసుకోండి: