ಬಳ್ಳಾರಿ: ನಗರ ಶಾಸಕರು ಹಾಗೂ ಶ್ರೀರಾಮುಲು ಆಪ್ತರಾಗಿರುವ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಕಾಂಗ್ರೆಸ್‌ ನಾಯಕ ವಿವೇಕ್‌ ಪಿ ನೀಡಿದ ದೂರಿನ ಅನ್ವಯ ಬಳ್ಳಾರಿ ಗಾಂಧಿನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿಯೂ  ಕಾಂಗ್ರೆಸ್ ಪ್ರಮುಖ ನಾಯಕರಿಂದ ದೂರು ದಾಖಲಾಗಿದೆ. 
 
ಬಳ್ಳಾರಿ ಕಾಂಗ್ರೆಸ್‌ ನಾಯಕ ವಿವೇಕ್‌ ಪಿ ನೀಡಿದ ದೂರಿನ ಅನ್ವಯ ಬಳ್ಳಾರಿ ಗಾಂಧಿನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ ಸೋಮಶೇಖರ್‌ ರೆಡ್ಡಿಯವರನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದರೆ, ಕಾರ್ಯಕ್ರಮ ಆಯೋಜಿಸಿದ್ದ 'ದೇಶಭಕ್ತ ನಾಗರಿಕ ವೇದಿಕೆ'ಯನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿಯೂ ಕಾಂಗ್ರೆಸ್ ನಾಯಕರಿಂದ ದೂರು ದಾಖಲಾಗಿದ್ದು, ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ್ದ ರೆಡ್ಡಿ, 'ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಬಂದೂಕಿನಿಂದ ಶೂಟ್ ಮಾಡಿದರೆ ಜನಸಂಖ್ಯೆಯಾದರೂ ಕಡಿಮೆಯಾಗುತಿತ್ತು' ಎಂದಿದ್ದರು. ಅಷ್ಟೇ ಅಲ್ಲದೆ 'ನೀವು ಶೇ. 17ರಷ್ಟು ಮಾತ್ರವಿದ್ದು, ಶೇ. 80ರಷ್ಟು ನಾವು ಇದ್ದೇವೆ. ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬೇಕು ಎಂಬುದನ್ನು ಊಹಿಸಿಕೊಳ್ಳಿ. ಹಿಂದೂಗಳನ್ನು ಕೆಣಕಲು ಬರಬೇಡಿ,' ಎಂಬುದಾಗಿ ಮುಸ್ಲಿಂ ಸಮುದಾಯದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.
 
“ಸೋಮಶೇಖರ್‌ ರೆಡ್ಡಿ, ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜವನ್ನು ಭಿತ್ತಿ, ಜಗಳವನ್ನು ಹಚ್ಚುವಂತ ಹೇಳಿಕೆಗಳನ್ನು ನೀಡಿ ದೇಶ ಮತ್ತು ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡುವಂತ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ,” ಎಂಬುದಾಗಿ ವಿವೇಕ್‌ ದೂರಿನಲ್ಲಿ ತಿಳಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಡಿಜಿಪಿ ಎನ್‌ ನೀಲಮಣಿ ರಾಜು ಅವರಿಗೂ ದೂರು ನೀಡಿದ್ದು ರೆಡ್ಡಿಯನ್ನು ಅರೆಸ್ಟ್ ಮಾಡುತ್ತಾರಾ ಎಂಬ ಪ್ರಶ್ನೆ ಇದೀಗ ರೆಡ್ಡಿ ಅಭಿಮಾನಿಗಳಲ್ಲಿ ಕಾಡತೊಡಗಿದೆ. ಶ್ರೀ ರಾಮುಲು ಡೆಲ್ಲಿಯಲ್ಲಿದ್ದು, ಬಂದಮೇಲೆ ಏನು ಮಾಡುತ್ತಾರೆ ಎಂಬುದು ಸಹ ಭಾರೀ ಕುತೂಹಲ ಮೂಡಿಸಿದೆ.

మరింత సమాచారం తెలుసుకోండి: