ಬೆಂಗಳೂರು: ಪ್ರಸ್ತುತ ಪೌರತ್ವ ತಿದ್ದುಪಡಿ ಕಾಯಿದೆ, ಎನ್ ಆರ್ ಸಿ ವಿರುದ್ಧ ರಾಷ್ಟ್ರಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಗಳು ಉಗ್ರ ರೂಪ ತಾಳಿವೆ. ಇದರ ಭಾಗವಾಗಿಯೇ ರಾಜ್ಯದ ಮಂಗಳೂರು ನಗರದಲ್ಲಿ ಎರಡು ಜೀವಗಳು ಸಹ ಬಲಿಯಾದರು. ಇದೀಗ ರಾಜ್ಯ ಬಿಜೆಪಿ ಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ  ಬಗ್ಗೆ ಸಂಪೂರ್ಣ ಮಾಹಿತಿ ನೀಡಲು 
 ಬಿಜೆಪಿ ಘಟಕ ಆಂದೋಲನ ಹಮ್ಮಿಕೊಂಡಿದೆ.
 
 ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಜನಜಾಗೃತಿ ಮೂಡಿಸಲು ರಾಜ್ಯದ ಎಲ್ಲ  ಅಂದರೆ 58 ಸಾವಿರ ಬೂತ್‌ಗಳಲ್ಲಿ ಮನೆ ಮನೆಗೆ ತೆರಳಿ ತಿಳಿವಳಿಕೆ ಮೂಡಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ರಾಜ್ಯ ಬಿಜೆಪಿ ಕರೆ ನೀಡಿದೆ. ಹೌದು, ಇದು ವರ್ಕೌಟ್ ಆಗುತ್ತಾ ಎಂಬ ಪ್ರಶ್ನೆ ಕಾಡಿದರೂ ಸಹ ಪೌರತ್ವ ತಿದ್ದುಪಡಿ ಜಾಗೃತಿ ಮೂಡಿಸುವ ಯತ್ನ ನಡೆದಿದೆ. ರಾಜ್ಯದ 300 ಮಂಡಲಗಳಲ್ಲಿ ಕರಪತ್ರ ವಿತರಣೆ, ಸಹಿ ಸಂಗ್ರಹ ಅಭಿಯಾನ, ಎತ್ತಿನ ಬಂಡಿ ಮೆರವಣಿಗೆ, ಬೈಕ್ ಮೆರವಣಿಗೆ ಮುಂತಾದ ಚಟುವಟಿಕೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದರು.
 
ಸುದ್ದಿಗೋಷ್ಠಿಯಲ್ಲಿ ರವಿಕುಮಾರ್ ಸಂಪೂರ್ಣ ವಿವರ ನೀಡಿದರು. ಇದೇ ತಿಂಗಳ 11 ಮತ್ತು 12 ರಂದು ಮನೆ ಮನೆ ಸಂಪರ್ಕಕ್ಕೆ ವಿಶೇಷ ಯೋಜನೆ ಹಾಗೂ ವಿಸ್ತಾರಕ ಯೋಜನೆ ರೂಪಿಸಬೇಕೆಂದು ಕರೆ ನೀಡಿರುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನ ಕಾಯಿ ಹೇಳಿದ್ದಾರೆ. ಆದರೆ ಹೇಳಿದಷ್ಟು ಸುಲಭವಾಗಿ ಇದು ಸಕ್ಸಸ್ ಆಗುತ್ತಾ ಇಲ್ಲವಾ ಎಂಬುದೇ ಜನರಿಗೆ ತಿಳಿಯ ದಂತಾಗಿದೆ. 
 
ಪ್ರಸ್ತುತ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತಂದ ಪ್ರಧಾನ ಮಂತ್ರಿಗಳಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು, ಈ ಸಭೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದು, ಕಾರ್ಯಕರ್ತರು ಈ ಕೆಲಸವನ್ನು ಮಾಡ್ತಾರ ಇಲ್ಲವೆ ಎಂಬುದು ಇದೀಗ ಕಾದು ನೋಡಬೇಕಾಗಿದೆ.

మరింత సమాచారం తెలుసుకోండి: