ಬಳ್ಳಾರಿ: ಐತಿಹಾಸಿಕ ವಿಜಯನಗರದ ಪ್ರತೀ ಕಲ್ಲೂ ಸಹ ಇಲ್ಲಿನ ಕಥೆ ಹೇಳುತ್ತದೆ, ಮುತ್ತು ರತ್ನ ಗಳನ್ನು ಸೇರಿನಲ್ಲಿ ಅಳೆದ ನಾಡು ಹಂಪಿ. ಭಾರತದ ಚಿರಿತ್ರೆಯಲ್ಲಿ ವಿಜಯ ನಗರದ ಸಾಮ್ರಾಜ್ಯದ ಕಾಲ ಅತ್ಯಂತ ವೈಭವ ವಾಗಿದೆ. ಇಲ್ಲಿನ ಕಲ್ಲುಗಳು ಗತ ವೈಭವನ್ನು ಸಾರಿ ಸಾರಿ ಹೇಳುತ್ತಿವೆ. ಸ್ವರ್ಗದಂತಹ ನಗರ ಎಂದರೆ ಅದು ವಿಜಯನಗರ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತಿಳಿಸಿದರು. 
 
ಹಂಪಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿ, ಭಾರತೀಯ ಇತಿಹಾಸದಲ್ಲಿ ಹಂಪಿಯ ಇತಿಹಾಸಕ್ಕೆ ವಿಶಿಷ್ಟ ಸ್ಥಾನವಿದೆ. ಸಾಂಸ್ಕ್ರತಿಕ, ಧಾರ್ಮಿಕದಿಂದ ವಿಜಯನಗರ ಹಂಪಿ ಮಹತ್ವ ಪಡೆದಿದೆ. ಸುಮಾರು 550 ವರ್ಷಗಳ ಇತಿಹಾಸವಿದೆ. ಹಂಪಿ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದೆ. ಆಗಿನ ಕಾಲದಲ್ಲಿ ಶ್ರೀಮಂತ ಪ್ರದೇಶವಾಗಿತ್ತು. ಇದನ್ನು ಜೀವಂತವಾಗಿರಿಸಲು ರಾಜ್ಯ ಸರಕಾರ ಮೂರು ದಶಕಗಳಿಂದ ಉತ್ಸವ ಆಚರಿಸುತ್ತಿದೆ ಎಂದರು.
 
ಹಂಪಿ ಅಭಿವೃದ್ಧಿಗಾಗಿ ಸರಕಾರ ಅನೇಕ ಯೋಜನೆ ರೂಪಿಸಿ ಕಾರ್ಯನುಷ್ಠನಗೊಳಿಸಲು ಮುಂದಾಗಿದೆ ಎಂದರು. ಕನ್ನಡ ನಾಡು ಹಿಂದೆಂದು ಕಾಣದ ಪ್ರವಾಹ ಕಂಡಿದೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಇದಕ್ಕೆ ಸ್ಪಂದಿಸಲು ರಾಜ್ಯ ಸರಕಾರ ಮುಂದಾಗಿದೆ. ರೈತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ಯೋಜನೆ ಜಾರಿಗೊಳಿಸಿದೆ. ನನ್ನ ಆದ್ಯತೆ ನೀರಾವರಿ ಯೋಜನೆಯಾಗಿದೆ. ಇನ್ನೂ ಎರಡು ವರ್ಷ ನೀರಿನ ಸಮಸ್ಯೆಯಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.
 
ನನ್ನ ಆದ್ಯತೆ ನೀರಾವರಿಗೆ ಎಂದರು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆನ್ನುವ ಉದ್ದೇಶವಿದೆ. ಇದಕ್ಕೆ ಸಹಕಾರಿಯಾಗುವಂತ ಯೋಜನೆಗಳನ್ನು ಒಳಗೊಂಡು ಮಾರ್ಚ್ 5ರಂದು ಬಜೆಟ್ ನಲ್ಲಿ ಜಾರಿಗೊಳಿಸಲು ಚಿಂತನೆ ನಡೆಸಿದೆ. ನಾಡಿನ ಸಾಂಸ್ಕೃತಿಕ ಪರಂಪರೆ ಉತ್ಸವ ಆಚರಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು. ರಾಜ್ಯ ಪ್ರವಾಸ ಕೇಂದ್ರಗಳಿಗೆ ದೇಶ, ವಿದೇಶ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಡಾ.ಸುಧಾಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸರಕಾರದಿಂದ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಬಿಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದರು. ರಾಷ್ಟ್ರ ಅಂತರಾಷ್ಟ್ರೀಯದಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸಿದ್ದರು. 
 
 

మరింత సమాచారం తెలుసుకోండి: