ಬಳ್ಳಾರಿ(ಹಂಪಿ): ಹಂಪಿ ಉತ್ಸವದ ಮೊದಲ ದಿನ ಬೆಳಗ್ಗೆ ಬಣಬಣ, ಸಂಜೆ ಸಂಭ್ರ​ಮಕ್ಕೆ ಜನವೋ ಜನ. ಲಕ್ಷಾಂತರ ಜನರು ಬಂದು ನೆರೆದರು. ಹಂಪಿ ಉತ್ಸವ ಉದ್ಘಾಟನೆಗೂ ಮುನ್ನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಹಾಸ್ಯಸಂಜೆ ಕಾರ್ಯಕ್ರಮ ನಡೆಸಿದರು. ಅದರ ಜೊತೆಗೆ ವಿವಿಧ ಮನರಂಜನೆಯ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. 
 
ಹೊಸಪೇಟೆಯಿಂದ ಹಂಪಿಗೆ ಬರಲು ಉಚಿತವಾಗಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಜನ ಸೇರಿಸುವಿಕೆಯ ಉದ್ದೇಶಕ್ಕೆ ಫಲ ನೀಡಿತು. ಬೆಳಗ್ಗೆ ವಿರುಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಜರುಗಿದ ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿಯಲ್ಲಿ ಪ್ರೇಕ್ಷಕರ ಕೊರತೆ ಎದ್ದುಕಂಡಿತು. ಪುಸ್ತಕ ಮೇಳ, ಫಲಪುಷ್ಪಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಆಹಾರ ಮೇಳ, ಮರಳು ಶಿಲ್ಪಕಲೆ ಉತ್ಸವ, ಶಿಲ್ಪಕಲೆ ಪ್ರದರ್ಶನ, ಚಿತ್ರಕಲಾ ಪ್ರದರ್ಶನಗಳಲ್ಲಿ ಹೆಚ್ಚಿನ ಜನರು ಕಂಡು ಬರಲಿಲ್ಲ. ಸಂಜೆಯಾಗುತ್ತಿದ್ದಂತೆಯೇ ಎಲ್ಲ ವಸ್ತು ಪ್ರದರ್ಶನಗಳಿಗೆ ಜನಸಾಗರವೇ ಹರಿದು ಬಂತು. 
 
ಹಂಪಿಯ ರಾಜಬೀದಿ, ಮಾತಂಗ ಪರ್ವತ ಮೈದಾನ, ವಿರುಪಾಕ್ಷೇಶ್ವರ ದೇವಸ್ಥಾನ ಮುಂಭಾಗ, ಎದುರು ಬಸವಣ್ಣ ಪ್ರದೇಶ, ಸಾಸಿವೆ ಕಾಳು ಗಣಪ ಮುಂಭಾಗದ ಬಳಿ ಜನ ಸಾಗರ ಹರಿದು ಬಂತು. ಹಂಪಿ ಉತ್ಸವ ಉದ್ಘಾಟನೆಗೂ ಮುನ್ನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಅವರ ಹಾಸ್ಯಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬರಲಿ ಎಂಬ ಕಾರಣಕ್ಕಾಗಿಯೇ ಪ್ರಾಣೇಶ್‌ ಅವರ ಹಾಸ್ಯ ಆಯೋಜಿಸಲಾಗಿದೆ ಎಂಬ ಮಾತು ಕೇಳಿ ಬಂತು.
 
ಹಂಪಿ ಉತ್ಸವ ಹಿನ್ನೆಲೆಯಲ್ಲಿ ಆರಾಧ್ಯದೈವ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಭಕ್ತರ ದಂಡು ಕಂಡುಬಂತು. ಉತ್ಸವಕ್ಕೆ ಬಂದವರು ದೇವರ ದರ್ಶನಕ್ಕೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ವಿರುಪಾಕ್ಷೇಶ್ವರನಿಗೆ ವಿಶೇಷವಾಗಿ ವಿವಿಧ ಪುಷ್ಪ, ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ಕೃಷ್ಣದೇವರಾಯ ನೀಡಿದ್ದ ಚಿನ್ನದ ಕಿರೀಟವನ್ನು ವಿರುಪಾಕ್ಷ ದೇವನಿಗೆ ಇರಿಸಲಾಗಿತ್ತು. ಸ್ಥಳೀಯರು ಸೇರಿದಂತೆ ವಿದೇಶಿಯರು ಸಹ ಹಂಪಿ ಉತ್ಸವದಲ್ಲಿ ಉತ್ಸುಕದಿಂದ ಭಾಗವಹಿಸಿದ್ದರು. ಇವರ ಸಂಗಾತಿ ರೀಬನ್‌ ರೋ ಅವರು ಸಾಥ್‌ ನೀಡಿದರು. ಮೆಹಂದಿ ಸ್ಪರ್ಧೆಯಲ್ಲೂ ವಿದೇಶಿಯರು ಭಾಗವಹಿಸಿದ್ದು ಗಮನ ಸೆಳೆಯಿತು. ಸಂಜೆ 4 ವೇದಿಕೆಗಳಲ್ಲಿ ನಾನು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. 

మరింత సమాచారం తెలుసుకోండి: