ಹೊಸಡೆಲ್ಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸುತ್ತಿದ್ದಂತೆ ರಾಜಕೀಯ ಕಸರತ್ತುಗಳು, ಚುನಾವಣೆ ಲೆಕ್ಕಾಚಾರಗಳು ಗರಿಗೆದರಿವೆ. ಇದೀಗ ಬಿಜೆಪಿ 57 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಸ್ಪರ್ಧಿಸ ಲಿರುವ ಬಿಜೆಪಿ ಅಭ್ಯರ್ಥಿ ಯಾರು ಗೊತ್ತಾ? ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್ ಮಾಹಿತಿ. 
 
ಫೆಬ್ರುವರಿ 8ರಂದು ನಡೆಯಲಿರುವ ದಿಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಮೊದಲ ಹಂತವಾಗಿ ಶುಕ್ರವಾರ 57 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ 11 ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದು, ನಾಲ್ವರು ಮಹಿಳೆಯರು ಕಣಕ್ಕಿಳಿಯಲಿದ್ದಾರೆ ಎಂದು ವರದಿ ತಿಳಿಸಿದೆ. ಇದೀಗ ಈ ಪಟ್ಟಿ ಭಾರೀ ಸದ್ದು ಮಾಡುತ್ತಿದೆ. ಹೌದು, ಪಟ್ಟಿಯಲ್ಲಿರುವ ಅಭ್ಯರ್ಥಿ ಗಳು ಚುನಾವಣೆ ಲೆಕ್ಕಾಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಬಿಜೆಪಿ ಮುಖಂಡ ಮನೋಜ್ ತಿವಾರಿ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದ್ದರು.
 
ಚುನಾವಣಾ ಕಣದಲ್ಲಿ ರೋಹಿಣಿ ಕ್ಷೇತ್ರದಿಂದ ವಿಜಯೇಂದ್ರ ಗುಪ್ತಾ, ಮೊಡೆಲ್ ಟೌನ್ ಕ್ಷೇತ್ರದಿಂದ ಕಪಿಲ್ ಮಿಶ್ರಾ, ಗ್ರೇಟರ್ ಕೈಲಾಶ್ ನಿಂದ ಶಿಖಾ ರಾಯ್, ನರೇಲಾದಿಂದ ನೀಲ್ ಕಮಲ್ ಖಾಟ್ರಿ, ಟಿಮಾರ್ಪುರ್ ನಿಂದ ಸುರೇಂದ್ರ ಸಿಂಗ್ ಬಿಟ್ಟು, ತುಘಲಕ್ ಬಾದ್ ನಿಂದ ವಿಕ್ರಮ್ ಬಿಧುರಿ, ಚಾಂದಿನಿ ಚೌಕ್ ನಿಂದ ಸುಮನ್ ಕುಮಾರ್ ಗುಪ್ತಾ, ಜನಕ್ ಪುರಿಯಿಂದ ಆಶೀಶ್ ಸೂದ್, ಪತ್ಪಾರ್ ಗಂಜ್ ನಿಂದ ರವಿ ನೇಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
 
ಪತ್ಪಾರ್ ಗಂಜ್ ಕ್ಷೇತ್ರದಲ್ಲಿ ರವಿ ನೇಗಿ ಅವರು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿ ಅವರ ಎದುರು ಸ್ಪರ್ಧಿಸಲಿದ್ದಾರೆ. ಆದರೆ ಹೊಸ ದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾರು ಅಭ್ಯರ್ಥಿ ಎಂಬುದನ್ನು ಬಿಜೆಪಿ ಇನ್ನೂ ಘೋಷಿಸಿಲ್ಲ. ದಿಲ್ಲಿ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಎಲ್ಲಾ 70 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಕೇಜ್ರಿವಾಲ್ ವಿರುದ್ಧ ಯಾರು ಸ್ಪರ್ಧಿಸ ಲಿದ್ದಾರೆ ಎಂಬುದು ಇದೀಗ ಕುತೂಹಲ ಕೆರಳಿಸಿದೆ.
 

మరింత సమాచారం తెలుసుకోండి: