ರಾಮನಗರ: ಅವನಿಗೆ ತಾಕತ್ ಇದೆಯಾ? ಇದ್ರೆ ಬರೋಕೆ ಹೇಳಿ. ಬರಲಿ ನಾನ್ ನೋಡ್ಕೋತಿನಿ. ಏಸು ಪ್ರತಿಮೆ ಮಾಡಲು ಬಿಡಲ್ಲ ಎನ್ನಲಿಕ್ಕೆ ಅವನಾರು, ಅವನಿಗೆ ತಾಕತ್ ಇದ್ರೆ ಬರೋಕೆ ಹೇಳಿ ಎಂದು ಕಾಂಗ್ರೆಸ್ ನ ಸಂಸದರೊಬ್ಬರು ಕನ್ನಡ ಪ್ರಭಾಕರ್ ಭಟ್ ವಿರುದ್ದ ಗುಡುಗಿದ್ದಾರೆ. ಹೌದು, ಈ ರೀತಿ ನೇರವಾಗಿ ವಾಗ್ದಾಳಿ ನಡೆಸಿರುವ ಆ ಸಂಸದರಾರು ಎಂದು ನಾವು ಹೇಳುತ್ತೇವೆ ಕೇಳಿ. 
 
ಅವನಿಗೆ ತಾಕತ್ ಇದ್ರೆ ಬರೋಕೆ ಹೇಳಿ ಎಂದಿದ್ದು ಬೇರಾರು ಅಲ್ಲ, ಕಾಂಗ್ರೆಸ್ ಸಂಸದ ಡಿಕೆ ಸುರೇಶ್. ಹೌದು, ಏಸು ಪ್ರತಿಮೆ ಮಾಡಲು ಬಿಡಲ್ಲ, ಬಲಿದಾನವಾಗುತ್ತೆ ಎಂಬ ಆರ್‌.ಎಸ್‌.ಎಸ್‌ ನಾಯಕ ಕಲ್ಲಡ್ಕ ಪ್ರಭಾಕರ ಭಟ್‌ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಸಂಸದ ಡಿಕೆ ಸುರೇಶ್‌ ಅವನಿಗೆ ತಾಕತ್ ಇದ್ರೆ ಬರೋಕೆ ಹೇಳ್ರಿ. ಬಲಿದಾನ ಅಂದ್ರೆ ನನ್ನ ಬಲಿದಾನ ಮಾಡ್ತಾನಂತಾ? ಎಲ್ಲಿಗೆ ಬರಬೇಕು ಅಂತಾ ಕೇಳ್ರಿ? ನನ್ನ ಬಲಿದಾನ ಏನು ಮಾಡ್ತಾನೆ, ನಿನ್ನ ಬಲಿದಾನ ಇದ್ರೆ ಮಾಡ್ತೀನಿ ಅಂತ ಹೇಳು ಎಂದು ಗುಡುಗಿದ್ದಾರೆ.
 
ನಮ್ಮ ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಗಿದೆ. ಎಲ್ಲರೂ ಬದುಕಬೇಕು, ಬಾಳಬೇಕು. ಒಬ್ಬರು ಮಾತ್ರ ಬದುಕಬೇಕು, ಇನ್ನೊಬ್ಬರು ಬದುಕಬಾರದು ಅಂತ ಇಲ್ಲ," ಎಂದು ಡಿಕೆ ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಭಾಷಣಕ್ಕೆ ಪ್ರತಿಕ್ರಿಯಿಸಿದ ಅವರು, “ಅವರು ಬಂದ್ರು, ಭಾಷಣ ಮಾಡಿ ಹೋದ್ರು. ಅವರದ್ದು ಒಂದು ರಾಜಕೀಯ ಪಕ್ಷ. ಆ ಪಕ್ಷದ ಹಿನ್ನಲೆ ಗಾಯಕರು ಯಾರೋ ಏನೋ ಹೇಳಿದ್ದನ್ನು ಬಂದು ಬೈದು ಹೋಗಿದ್ದಾರೆ. ಏನು ಮಾಡೋಕೆ ಆಗಲ್ಲ. ಕಾದು ನೋಡೋಣ ಎಲ್ಲೆಲ್ಲಿ ಏನೇನು ಆಗುತ್ತೆ ಅಂತ,” ಎಂದರು.
 
ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಗಿದೆ. ಎಲ್ಲರೂ ಬದುಕಬೇಕು, ಬಾಳಬೇಕು. ಒಬ್ಬರು ಮಾತ್ರ ಬದುಕಬೇಕು, ಇನ್ನೊಬ್ಬರು ಬದುಕಬಾರದು ಅಂತ ಇಲ್ಲ. ಸಂವಿಧಾನವನ್ನು ಉಳಿಸುವ ಕೆಲಸ ಖಂಡಿತಾ ಆಗುತ್ತದೆ. ಸಂವಿಧಾನ ಉಳಿಸುವ ಕೆಲಸ ಅಗತ್ಯವಾಗಿ ನಡೆಯಬೇಕು ಎಂದು ತಿಳಿಸಿದ್ದಾರೆ.

మరింత సమాచారం తెలుసుకోండి: