ಅನಿಷ್ಠ ಪದ್ದತಿ ಹಾಗೂ ಆಚರಣೆಯನ್ನು ನಿಷೇಧಿಸುವ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬಂದಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಹೌದು, ಸಿದ್ದರಾಮಯ್ಯ ಒಪ್ಪಿದ್ದಾರೆ. ನಿಜ ಶಾಕ್ ಆದರೂ ನಂಬಲೇ ಬೇಕಾದ ವಿಷಯವಿದು. ಆದರೆ ಇದೇ ವೇಳೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು ನಮ್ಮ ಸರಕಾರದ ಅವಧಿಯಲ್ಲಿ ಕಾಯ್ದೆ ಜಾರಿಗೆ ವಿರೋಧಿಸಿದವರು ಇಂದು ಜಾರಿಗೆ ತಂದಿರೋದು ವಿಪರ್ಯಾಸ ಎಂದು ಟ್ವೀಟಿಸಿದ್ದಾರೆ. 

 

ಅನಿಷ್ಠ ಪದ್ದತಿ ಆಚರಿಸಿ ದವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶವಿರುವ ‘ಮೌಢ್ಯ ನಿಷೇಧ ಕಾಯ್ದೆ’ಯನ್ನು ರಾಜ್ಯ ಸರಕಾರ ಜಾರಿಗೆ ತಂದಿರುವುದು ಹೊಸತೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಸಿದ್ದರಾಮಯ್ಯ ಅವಧಿಯಲ್ಲಿ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಅಂದಿನ ಸರಕಾರ ಮುಂದಾ ಗಿತ್ತು. ಆದರೆ ಬಿಜೆಪಿ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದೀಗ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತಂದಿದೆ.

 

ಅನಿಷ್ಠ ಪದ್ದತಿ ಹಾಗೂ ಆಚರಣೆಯನ್ನು ನಿಷೇಧಿಸುವ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಬಂದಿರುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. 


ಈ ಕುರಿತಾಗಿ ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಅಂದು ಕಾಯ್ದೆಯ ಕುರಿತಾಗಿ ಅಪ ಪ್ರಚಾರ ಮಾಡಿದವರು ಇಂದು ಜಾರಿಗೆ ತಂದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ನಾವು ಮೌಢ್ಯನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ‌ ನಮ್ಮನ್ನು ನಿಂದಿಸಿ,ಪೀಡಿಸಿ ಅಪ ಪ್ರಚಾರ ಮಾಡಿ, ಅದನ್ನು ತಡೆಯಲು ಪ್ರಯತ್ನಿಸಿದ್ದ ಬಿಜೆಪಿ ಈಗ ತಪ್ಪನ್ನು ತಿದ್ದಿಕೊಂಡು ಕಾಯ್ದೆಯನ್ನು ಜಾರಿಗೆ ತಂದದ್ದಕ್ಕೆ ಅಭಿನಂದನೆಗಳು. ಈಗಿನ 'ನಂಬಿಕೆ' ಒತ್ತಡಕ್ಕೆ ಬಾಗಿ 'ಮೂಢ ನಂಬಿಕೆ' ಆಗದಿರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟಿಸಿದ್ದು ಭಾರೀ ಚರ್ಚೆಯಾಗುತ್ತಿದೆ. 

 

 

ಮೌಡ್ಯ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಎಚ್‌.ಸಿ ಮಹದೇವಪ್ಪ “ನಮ್ಮ ಸರ್ಕಾರದ ಅವಧಿಯಲ್ಲಿ ಈ ಮೌಢ್ಯವಿರೋಧಿ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ಮನುವಾದಿಗಳು ಇದು ಹಿಂದೂ ಧರ್ಮಕ್ಕೆ ವಿರುದ್ಧವೆಂಬಂತೆ ಅಪಪ್ರಚಾರ ನಡೆಸಿದ್ದರು.ಆದರೆ ಇದೀಗ ಬಿಎಸ್‌ವೈ ಸರ್ಕಾರವು ಈ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಿದ್ದು ಸಿದ್ದರಾಮಯ್ಯ ಸರ್ಕಾರದ ಆದರ್ಶಮಯ ಆಲೋಚನೆಯನ್ನು ಪುರಸ್ಕರಿಸಿದೆ”ಎಂದು ಹೇಳಿದ್ದಾರೆ.

మరింత సమాచారం తెలుసుకోండి:

bjp