ನವದೆಹಲಿ: ಬಹು ನಿರೀಕ್ಷಿತ 2020ರ ಕೇಂದ್ರ ಬಜೆಟ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ್ದು, ರೈತರಿಗೆ ಏನು ಮಾಡಿದ್ದಾರೆ, ರಾಷ್ಟ್ರದ ಆರ್ಥಿಕ ಕುಸಿತಕ್ಕೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ. 
 
ಮುಂದಿನ ಹಣಕಾಸು ವರ್ಷಕ್ಕೆ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲ ವಿತರಣೆಯ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತ ಈ ವಿಚಾರ ಹೇಳಿದ್ದು, ನಬಾರ್ಡ್​ನ ರೀಫೈನಾನ್ಸ್​ ಸ್ಕೀಮ್​​ ಕೂಡ ವಿಸ್ತರಣೆಯಾಗಲಿದೆ ಎಂದು ಹೇಳಿದ್ದಾರೆ.
 
ಅಲ್ಲದೆ, ಭಾರತೀಯ ರೈಲ್ವೆ ಪಿಪಿಪಿ(ಪಬ್ಲಿಕ್​-ಪ್ರೈವೇಟ್​ ಪಾರ್ಟ್​ನರ್​ಷಿಪ್​) ಮಾದರಿಯಲ್ಲಿ ಕಿಸಾನ್​ ರೈಲ್ ಅನ್ನು ಆರಂಭಿಸಲಿದೆ. ಇದು ಬೇಗನೆ ಹಾಳಾಗುವ ಕೃಷಿ ಉತ್ಪನ್ನಗಳ ಸಾಗಣೆಗೆ ಇದು ಕೋಲ್ಡ್​ ಸಪ್ಲೈ ಚೇನ್​ ಆಗಿ ಬಳಕೆಯಾಗಲಿದೆ ಎಂದು ಅವರು ವಿವರಿಸಿದರು ಇದರ ಜತೆಗೆ, ಕೃಷಿ ಉಡಾನ್​ ಎಂಬ ಯೋಜನೆಯನ್ನೂ ನಾಗರಿಕ ವಿಮಾನ ಯಾನ ಸಚಿವಾಲಯ ಆರಂಭಿಸಲಿದೆ ಎಂದರು. 
 
ಕ್ಲಸ್ಟರ್​ ಆಧಾರದಲ್ಲಿ ಒಂದು ಜಿಲ್ಲೆಯಲ್ಲಿ ಒಂದು ತೋಟಗಾರಿಕೆ ಬೆಳೆ ಎಂಬ ಮಾದರಿಯ ಯೋಜನೆಯನ್ನು ಸರ್ಕಾರ ಉತ್ತೇಜಿಸಲಿದೆ. ಈ ರೀತಿಯ ಪ್ರಯೋಗದಿಂದ ಆಹಾರ ಧಾನ್ಯಗಳ ಉತ್ಪಾದನೆ 311ಎಂಟಿ ದಾಟಿದೆ ಎಂದು ಅವರು ಹೇಳಿದರು. ಅದೇ ರೀತಿ, ಸಮುದ್ರ ಮೀನುಗಾರಿಕೆ ಸಂರಕ್ಷಣೆ, ಕೃಷಿ ಉತ್ಪನ್ನ ಉಗ್ರಾಣ ಸೌಕರ್ಯ ವೃದ್ಧಿಗೆ ಸ್ವ ಸಹಾಯ ಸಂಘಗಳಿಗೆ ಅನುವು ಮಾಡಿಕೊಡುವ ಕ್ರಮವನ್ನೂ ಸರ್ಕಾರ ಮಾಡಲಿದೆ ಎಂದರು
 
 ಕೃಷಿ ಮಾರುಕಟ್ಟೆಗಳ ಉದಾರೀಕರಣಗೊಳಿಸಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕೃಷಿಕರು ಕೈ ಜೋಡಿಸಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೃಷಿ ಉತ್ತೇಜನ ಮತ್ತು ಕೃಷಿಕರ ಕಲ್ಯಾಣಕ್ಕೆ ಸಂಬಂಧಿಸಿದ 16ಅಂಶಗಳ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ ಎಂದರು. ಕೃಷಿ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆಯ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮೂಲಕ 6.11ಕೋಟಿ ಕೃಷಿಕರನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.
 
 
 

మరింత సమాచారం తెలుసుకోండి: