ನವದೆಹಲಿ: ಕಳೆದೊಂದು ತಿಂಗಳಿನಿಂದ ಚೀನಾದಿಂದ ಶುರುವಾದ ಕೊರೊನಾ ವೈರಸ್ ದಿನ ಕಳೆದಂತೆ ಬೇರೆ ಬೇರೆ ರಾಷ್ಟ್ರಗಳಿಗೂ ಹಬ್ಬುತ್ತಿದೆ. ಚೀನಾದಲ್ಲಿಯೇ ಸಾವಿರಾರು ಜನ ಸಾಯುತ್ತಿರುವುದು ದುರಂತ. ಇತ್ತೀಚೆಗೆ ಭಾರತದಲ್ಲೂ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ಬಗ್ಗೆ ಮೇಲ್ವಿಚಾರಣೆ ನಡೆಸಿದ್ದಾರೆ. 

 

ಇದೀಗ ಪಶ್ಚಿಮ ಬಂಗಾಳದಲ್ಲಿ ಇಬ್ಬರಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಬ್ಯಾಂಕಾಕ್‌ ನಿಂದ ಕೋಲ್ಕತ್ತದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಏರ್‌ಪೋರ್ಟ್‌ ಗೆ ಬಂದಿಳಿದ ಇಬ್ಬರಲ್ಲಿ ವೈರಸ್ ಸೋಂಕು ದೃಢಪಟ್ಟಿದೆ. ಒಟ್ಟಾರೆ ಇಲ್ಲಿಯವರೆಗೂ ಕೋಲ್ಕತ್ತದಲ್ಲಿ ಮೂವರು ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ. ಈಗಾಗಲೇ ಕೋಲ್ಕತ್ತ ಚೀನಾದ ವಿವಿಧ ನಗರಗಳ ನಡುವಿನ ವಿಮಾನ ಹಾರಾಟವನ್ನು ಇಂಡಿಗೊ ಹಾಗೂ ಚೈನಾ ಈಸ್ಟರ್ನ್‌ ಏರ್‌ ಲೈನ್ಸ್‌ ಸಂಸ್ಥೆಗಳು ರದ್ದುಗೊಳಿಸಿವೆ. ಜನವರಿ 17ರಿಂದ ಹಾಂಗ್‌ ಕಾಂಗ್‌, ಸಿಂಗಪುರದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈ ಮಧ್ಯೆ, ಕೊರೊನಾ ವೈರಸ್‌ ಬಗ್ಗೆ ಮಾಹಿತಿ ನೀಡಿರೋ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ದೇಶದಲ್ಲಿನ ಆರೋಗ್ಯ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿಯೇ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ.

 

ಚೀನಾಗೆ ಭಾರತದ ಸಹಾಯಾಸ್ತ :

 

ಚೀನಾ, ಥಾಯ್ಲೆಂಡ್, ಹಾಂಗ್‌ ಕಾಂಗ್, ಸಿಂಗಾಪುರ, ಜಪಾನ್ ಮತ್ತು ದಕ್ಷಿಣ ಕೋರಿಯಾದಿಂದ ಆಗಮಿಸುವ ಪ್ರಯಾಣಿಕರನ್ನು ದೇಶದ 21 ಏರ್‌ ಪೋರ್ಟ್‌ ಗಳಲ್ಲಿ ತಪಾಸಣೆ ಮಾಡಲಾಗ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಜಪಾನ್‌ ತೀರದಲ್ಲಿ ತಡೆಹಿಡಿರುವ ಡೈಮಂಡ್ ಹಡಗಿನಲ್ಲಿರುವ ಇಬ್ಬರು ಭಾರತೀಯ ಸಿಬ್ಬಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ತೀವ್ರ ನಿಗಾ ಇಟ್ಟಿದೆ. ಅಲ್ಲದೆ, ವಿದೇಶಾಂಗ ಇಲಾಖೆಯ ನೆರವಿನೊಂದಿಗೆ ಮಾನವೀಯ ಆಧಾರದ ಮೇಲೆ ಚೀನಾಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ, ಔಷಧಿ ಮತ್ತು ಸಲಕರಣೆ ಕಳುಹಿಸಲಾಗ್ತಿದೆ ಎಂದು ಹರ್ಷವರ್ದನ್ ಮಾಹಿತಿ ನೀಡಿದ್ದಾರೆ. ಚೀನಾ ಹಿಂದಿನಿಂದ ಭಾರತದ ಮೇಲೆ ಎಷ್ಟೇ ಪ್ರಭಾವ ಬೀರಿದರು ಸಹ ಭಾರತ ಅದನ್ನು ಬಿಟ್ಟು ಇದೀಗ ಚೀನಾಗೆ ಸಹಾಯಹಸ್ತ ಚಾಚಿರುವುದು ಹೆಮ್ಮೆಯ ವಿಷಯವಾಗಿದೆ.

మరింత సమాచారం తెలుసుకోండి: