ನವ ದೆಹಲಿ: ರಾಷ್ಟ್ರ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆದ್ದು ಇದೀಗ ಅರವಿಂದ್​ ಕೇಜ್ರಿವಾಲ್​ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಕಾಣಿಸಿಕೊಂಡ ‘ಬೇಬಿ ಮಫ್ಲರ್​ ಮನ್​’ ಭರಾಟೆ ಬಲು ಜೋರಿತ್ತು. ಹೌದು, ಯಾರು ಈ ಬೇಬಿ ಮಫ್ಲರ್ ಮನ್ ಗೊತ್ತಾ! ಇಲ್ಲಿದೆ ನೋಡಿ ಮಾಹಿತಿ. 
 
ನವದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಅರವಿಂದ್ ಕೇಜ್ರಿವಾಲ್​ ಅವರಂತೆಯೇ ವೇಷ ಧರಿಸಿದ್ದ ಪುಟ್ಟ ಮಗುವಿನ ಫೋಟೋ ಕೂಡ ಸಿಕ್ಕಾಪಟೆ ವೈರಲ್​ ಆಗಿತ್ತು. ಅರವಿಂದ್ ಕೇಜ್ರಿವಾಲ್ ​ರಂತೆ ತಲೆಗೆ ಕಪ್ಪು ಮಫ್ಲರ್ ಕಟ್ಟಿಕೊಂಡು, ಆಪ್​ ಟೊಪ್ಪಿ ಹಾಕಿಕೊಂಡು, ಕೇಜ್ರಿವಾಲ್​ ಧರಿಸುವ ತರಹದ್ದೇ ಕನ್ನಡಕ ಹಾಕಿಕೊಂಡು, ಸಾಲದ್ದಕ್ಕೆ ಮೀಸೆಯನ್ನೂ ಬಳಿದುಕೊಂಡು ದೆಹಲಿಯ ಆಪ್​ ಕಚೇರಿ ಎದುರು ಅಂದು ಸಂಭ್ರಮಾಚರಣೆಯ ಹೊತ್ತಲ್ಲಿ ಪಾಲ್ಗೊಂಡಿದ್ದ ಪುಟ್ಟ ಬಾಲಕ ಇಂಟರ್​ ನೆಟ್​ ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ.
 
ಇದೇ ಮಫ್ಲರ್​ ಬೇಬಿ, ಚೋಟಾ ಕೇಜ್ರಿವಾಲ್​ ಇಂದು ಕೂಡ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ ವಿಶೇಷವೆಂದರೆ ಆತ ಸುಮ್ಮನೆ ಬಂದಿಲ್ಲ. ಹೌದು, ಮುಖ್ಯಮಂತ್ರಿ ಪ್ರಮಾಣವಚನ ಅಂದರೆ ಸುಮ್ಮನೇನ. 
 
ಚುನಾವಣಾ ಫಲಿತಾಂಶದ ದಿನ ಈ ಬಾಲಕನ ವೇಷಕ್ಕೆ ಜನ ಭಲೇ ಎಂದಿದ್ದರು. ಒಂದೇ ದಿನದಲ್ಲಿ ಇವನ ಪ್ರಸಿದ್ಧಿಯನ್ನು ಗುರುತಿಸಿದ ಆಮ್ ಆದ್ಮಿ ಪಕ್ಷ, ಅರವಿಂದ್​ ಕೇಜ್ರಿವಾಲ್​ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಾಲಕನಿಗೆ ಅಧಿಕೃತ ಆಹ್ವಾನ ನೀಡಿತ್ತು. ನಿನ್ನೆ ಕೂಡ ಅರವಿಂದ್ ಕೇಜ್ರಿವಾಲ್​ ಅವರ ವೇಷದಲ್ಲಿಯೇ ಈತ ಬಂದಿದ್ದ. ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ವೇದಿಕೆ ಸುತ್ತಮುತ್ತ ಓಡಾಡಿದ್ದಾನೆ. ಕೆಲವರು ಇವನೊಟ್ಟಿಗೆ ಸೆಲ್ಫೀ, ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಲಿಟ್ಲ್​ ಮಫ್ಲರ್ ​ಮನ್​, ಬೇಬಿ ಅರವಿಂದ್ ಕೇಜ್ರಿವಾಲ್​ ಎಂದು ಆತನನ್ನು ಕರೆಯುತ್ತಿದ್ದಾರೆ.
 
ಆಪ್​ ಸಂಸದ ರಾಘವ್​ ಚಾಧಾ ಕೂಡ ಪುಟ್ಟ ಹುಡುಗನೊಂದಿಗೆ ಫೋಟೋ ತೆಗೆದುಕೊಂಡು ಟ್ವಿಟರ್ ​ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ ಪೋಟೋಸ್

మరింత సమాచారం తెలుసుకోండి: