ಬೆಂಗಳೂರು: ಕನ್ನಡಿಗ ಬ್ಯಾಟಿಂಗ್ ವೀರ ಮಯಾಂಕ್ ಅಗರ್ ​ವಾಲ್ ಕೊನೆಗೂ ತಮ್ಮ ಲಯಕ್ಕೆ ಮರಳಿದ್ದಾರೆ. ಇದರೊಂದಿಗೆ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಈ ವೀರ ಕನ್ನಡಿಗ ರೆಡಿಯಾಗಿದ್ದು ಕ್ಯಾಪ್ಟನ್ ಕೊಹ್ಲಿಯ ತಲೆ ನೋವು ಸ್ವಲ್ಪ ಕಡಿಮೆಯಾಗಿದೆ. 
 
ನಿನ್ನೆ ಹ್ಯಾಮಿಲ್ಟಿನ್ ಅಂಗಳದಲ್ಲಿ ನ್ಯೂಜಿಲೆಂಡ್ ಇಲೆವೆನ್ ಮತ್ತು ಟೀಮ್ ಇಂಡಿಯಾ ನಡುವೆ ನಡೆದ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಪಂದ್ಯ ಡ್ರಾ ನಲ್ಲಿ ಕಂಡಿರಬಹುದು ಆದರೆ, ತಂಡದ ಪರ್ಫಾಮನ್ಸ್ ನಾಯಕ ವಿರಾಟ್ ಕೊಹ್ಲಿಗೆ ಸಂತಸ ತಂದು ಕೊಟ್ಟಿದೆ. ಅದರಲ್ಲೂ ಫಾರ್ಮ್ ಸಮಸ್ಯೆಯಿಂದ ಬಳಲಿದ್ದ ಕನ್ನಡದ ಡ್ಯಾಶಿಂಗ್ ಓಪನರ್ ಮಯಾಂಕ್ ಅಗರ್ ​ವಾಲ್ ರನ್ ಮಳೆ ಸುರಿಸಿ ಭರವಸೆ ಮೂಡಿಸಿದ್ದಾರೆ. ಅಭ್ಯಾಸ ಪಂದ್ಯಕ್ಕೂ ಮೊದಲು ಮಯಾಂಕ್ ಇಂಡಿಯಾ ಎ ತಂಡವನ್ನ ಪ್ರತಿನಿಧಿಸಿ ಒಟ್ಟು 10 ಪಂದ್ಯಗಳನ್ನ ಆಡಿದ್ದಾರೆ. ಈ ಎಲ್ಲ ಪಂದ್ಯಗಳಲ್ಲಿ 40 ರನ್ ​ಗಳ ಗಡಿ ದಾಟಿರಲಿಲ್ಲ. ಇದಾದ ನಂತರ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಫ್ಲಾಪ್ ಪರ್ಫಾಮನ್ಸ್ ಕೊಟ್ಟು ನಿರಾಸೆ ಮೂಡಿಸಿದರು.ಇಲ್ಲಿ ಕೊಂಚ ಬೇಸರವೂ ಆಗಿದ್ದರು. 
 
ಆತಿಥೇಯ ಕೇನ್ ಪಡೆ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಮಯಾಂಕ್ ಅಗರ್​ವಾಲ್ ತಮ್ಮ ಫಾರ್ಮ್ ಪ್ರೂವ್ ಮಾಡಬೇಕಿತ್ತು. ಇದಕ್ಕೆ ನ್ಯೂಜಿಲೆಂಡ್​ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯ ಮಾನದಂಡವಾಗಿತ್ತು. ಮೊದಲ ಇನ್ನಿಂಗ್ಸ್ ​ನಲ್ಲಿ ಕೇವಲ 1 ರನ್ ಗಳಿಸಿದ್ದ ಮಯಾಂಕ್ ಎರಡನೇ ಇನ್ನಿಂಗ್ಸ್​ನಲ್ಲಿ 81 ರನ್ ರನ್ ಕಲೆ ಹಾಕಿ ಪಾರ್ಮ್ ಗೆ ಮರಳಿದರು. 99 ಎಸೆತ ಎದುರಿಸಿದ ಮಯಾಂಕ್ ಅಗರ್​ವಾಲ್ 10 ಬೌಂಡರಿ 3ಸಿಕ್ಸರ್ ಸಿಡಿಸಿ ಅಜೇಯ 81 ರನ್ ಕಲೆ ಹಾಕಿದರು. ವಿಶೇಷ ಎಂದರೆ, ಮಯಾಂಕ್ ಅಗರ್ ​ವಾಲ್ ಹುಟ್ಟು ಹಬ್ಬದಿನದಂದೇ ಫಾರ್ಮ್ ​ಗೆ ಮರಳಿದ್ದಾರೆ. ಪಂದ್ಯ ಮುಗಿದ ತಂಡದ ಆಟಗಾರರು ಮಯಾಂಕ್ ​ಗೆ ಕೇಕ್ ಮೆತ್ತಿ ಸಂಭ್ರಮ ಪಡುವಂತೆ ಮಾಡಿದ್ದಾರೆ. ಮಯಾಂಕ್ ಫಾರ್ಮ್ ಗೆ ಮರಳಿದ್ದು ಕ್ಯಾಪ್ಟನ್ ಕೊಹ್ಲಿ ನಿಟ್ಟುಸಿರು ಬಿಡುವಂತಾಗಿದ್ದು ಇದೀಗ ಟೆಸ್ಟ್ ಸ್ಥಾನ ಖಚಿತವಾಗಿದೆ.

మరింత సమాచారం తెలుసుకోండి: