ನವದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಂಡಿದ್ದು ಬಿಜೆಪಿ ಸರ್ಕಾರ ಸಕಲ ಸಿದ್ದತೆಗಳು ನಡೆಸಿದ್ದು, ಟ್ರಂಪ್ ಇನ್ನು ಭಾರತಕ್ಕೆ ಬರುವುದಕ್ಕಿಂತ ಮುಂಚೆಯೇ ವಿರೋಧ ಪಕ್ಷ ಕಾಂಗ್ರೆಸ್  ನಿರುದ್ಯೋಗ ಸಮಸ್ಯೆ ಹಾಗೂ ಆರ್ಥಿಕ ನಿಧಾನಗತಿಯ ಅಸ್ತ್ರ ಪ್ರಯೋಗಿಸಿದೆ. ಹೌದು, ಆ ಸ್ಟೋರಿಯ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ. 
 
"ಮೋದೀ ಜಿ ನೀಡಿದ್ದ 2 ಕೋಟಿ ಭರವಸೆಯಲ್ಲಿ 69 ಲಕ್ಷ ಖಾಲಿ ಹುದ್ದೆಗಳನ್ನು ಘೋಷಿಸಲಾಗಿದೆ, ಈಗಲೇ ಅರ್ಜಿ ಸಲ್ಲಿಸಿ,'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
 
ಕಾಂಗ್ರೆಸ್ ಮಾಡಿದ್ದಾದರೂ ಏನು ಗೊತ್ತಾ, ನಿರುದ್ಯೋಗ ಕುರಿತಂತೆ ಕೇಂದ್ರವನ್ನು ಅಣಕವಾಡುವ ಪೋಸ್ಟರ್ ಒಂದನ್ನೂ ಶೇರ್ ಮಾಡಿ ಕೇಂದ್ರವನ್ನು ವ್ಯಂಗ್ಯವಾಡಿದೆ. ಹೌದು, "ಡೊನಾಲ್ಡ್ ಟ್ರಂಪ್ ನಾಗರಿಕ್ ಅಭಿನಂದನ್ ಸಮಿತಿ. ಈಗ ನೇಮಕಾತಿಗೊಳಿಸಲಾಗುತ್ತಿದೆ. ಉದ್ಯೋಗ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರತ್ತ ಕೈಬೀಸುವುದು. ಖಾಲಿ ಹುದ್ದೆಗಳು " 69 ಲಕ್ಷ, ಸಂಭಾವನೆ : ಅಚ್ಚೇ ದಿನ್...'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. 
 
ಕಾಂಗ್ರೆಸ್ ಪಕ್ಷದ ಈ ಟ್ವೀಟ್‍ ಗೆ ಕಿಡಿ ಕಾರಿರುವ ಬಿಜೆಪಿ, ಜಾಗತಿಕವಾಗಿ ದೇಶದ ಸ್ಥಾನಮಾನ ಏರಿಕೆಯಾಗುತ್ತಿರುವುದು ವಿಪಕ್ಷಗಳಿಗೆ ಅಸಂತೋಷ ತಂದಿದೆ. "ಇದು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಹಳೆಯ ಪ್ರಜಾಪ್ರಭುತ್ವಗಳ ಭೇಟಿ. ಇದನ್ನು ಸಂಭ್ರಮಿಸಬೇಕಿದೆ,'' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
 
ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ತನ್ನ ಪತ್ನಿ ಯೊಂದಿಗೆ ಭಾರತಕ್ಕೆ ಫೆಬ್ರುವರಿ 24ರಂದು ಆಗಮಿಸಿದ್ದು, ಮೊದಲಿಗೆ ಗುಜರಾತಿನ ಅಹಮದಾಬಾದ್ ನಲ್ಲಿನ ಒಂದು ಲಕ್ಷ ಆಸನವುಳ್ಳ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಚಾಲನೆ ನೀಡಲಿದ್ದಾರೆ. ತದನಂತರ 7 ಕಿ. ಮೀ ಮೋದಿ ಜೊತೆ ಲೋಡ್ ಶೋ ನಡೆಸಲಿದ್ದಾರೆ. ಮರುದಿನ ಆಗ್ರಾದಲ್ಲಿ ವಿಶ್ವ  ವಿಖ್ಯಾತ ತಾಜ್ ಮಹಲ್ ಭೇಟಿ ನೀಡಿ ಆನಂತರ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಲಿದ್ದಾರೆ.ಇದೀಗ ಕಾಂಗ್ರೆಸ್ ನಿರುದ್ಯೋಗ ಅಸ್ತ್ರ ಉಪಯೋಗಿಸಿದ್ದು  ಫಲಿಸುತ್ತಾ ಇಲ್ಲವಾ ಕಾದು ನೋಡಬೇಕಾಗಿದೆ.

మరింత సమాచారం తెలుసుకోండి: