ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 62ನೇ ಮನ್​ ಕೀ ಬಾತ್ ​ನಲ್ಲಿ ದೇಶದ ಜನರೊಂದಿಗೆ ಮಾತನಾಡಿದರು. ಮಂಕಿ ಬಾತ್ ನಲ್ಲಿ ಕಾಮ್ಯಾರನ್ನು ಹಾಡಿ ಹೊಗಳಿದ್ದಾರೆ. ಅಷ್ಟಕ್ಕೂ ಕಾಮ್ಯಾರನ್ನು ಹೊಗಳಿದ್ದಾದರೂ ಯಾಕೆ ಗೊತ್ತಾ! ಮುಂದೆ ಓದಿ.... 
 
ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿ ಕೊಡುವುದು ನಮಗೆಲ್ಲಾ ಗೊತ್ತಿರುವ ವಿಷಯವೇ ಸರಿ. ಆದರೆ ಈ ಬಾರಿಯ ಕಾರ್ಯಕ್ರಮದ ವೇಳೆ ತಾವು ಹುನಾರ್ ಹಾತ್​ (ಇಂಡಿಯಾ ಗೇಟ್​ ಬಳಿ ನಡೆದ ಕರಕುಶಲ ಮೇಳ)ಗೆ ಭೇಟಿ ನೀಡಿದ್ದ ಬಗ್ಗೆ ವಿವರಿಸಿದರು. ಅಲ್ಲದೆ ಈ ಹುನಾರ್​ ಹಾತ್​ ಭಾರತದ ವೈವಿಧ್ಯತೆ ಮತ್ತು ಏಕತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಹೌದು, ಭಾರತದ ಕಲೆ ಮತ್ತು ಕರಕುಶಲ ಪರಂಪರೆಯನ್ನು ಹುನಾರ್​ ಹಾತ್​ ಅನಾವರಣ ಮಾಡುತ್ತದೆ. ಅಲ್ಲದೆ ಮಹಿಳಾ ಸಬಲೀಕರಣಕ್ಕೆ ಸಾಕ್ಷಿ ಎಂದು ಮೋದಿ ಹೇಳಿದರು. ನೀವು ಕೂಡ ಈ ಕರಕುಶಲ ಮೇಳಕ್ಕೆ ಆಗಮಿಸಿ ಎಂದು ದೇಶದ ಜನರಿಗೆ ಹೇಳಿದರು.  ಕಲೆ ಮತ್ತು ಕರ ಕುಶಲತೆಯಲ್ಲಿ ಭಾರತ ಮೊದಲಿನಿಂದಲೂ ಪ್ರಥಮ. 
 
ಈ ಬಾರಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಕೇಂದ್ರ ಕರಕುಶಲ ಮೇಳವನ್ನು ಇಂಡಿಯಾ ಗೇಟ್​ ಬಳಿಯ ರಾಜಪಥದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಮೇಳಕ್ಕೆ ಮೋದಿಯವರು ಆಕಸ್ಮಿಕವಾಗಿ ಭೇಟಿ ನೀಡಿ ಮಾತನಾಡಿದರು. 
 
ದಕ್ಷಿಣ ಅಮೆರಿಕಾದ ಅತ್ಯಂತ ಎತ್ತರ ಪರ್ವತ ಅಕೋನ್ಕಾಗುವಾವನ್ನು ಏರುವ ಮೂಲಕ ದಾಖಲೆ ಸೃಷ್ಟಿಸಿದ ಭಾರತದ 12ವರ್ಷದ ಬಾಲಕಿ ಕಾಮ್ಯಾ ಕಾರ್ತಿಕೇಯನ್​ ಅವರನ್ನು ನರೇಂದ್ರ ಮೋದಿಯವರು ಮನ್​ ಕೀ ಬಾತ್​ನಲ್ಲಿ ಹೊಗಳಿದರು.ನಮ್ಮ ದೇಶದ ಮಹಿಳೆಯರ ಉದ್ಯಮಶೀಲತೆ, ಅವರ ಧೈರ್ಯ, ಸಾಹಸಗಳೆಲ್ಲ ನಮ್ಮಲ್ಲಿ ಹೆಮ್ಮೆ ಮೂಡಿಸುತ್ತವೆ.12ವರ್ಷದ ಬಾಲಕಿ ಕಾಮ್ಯಾಳ ಸಾಹಸವನ್ನು ನಾನು ಇಲ್ಲಿ ಹೇಳಲೇಬೇಕು. ಕಾಮ್ಯಾಳಿಗೆ ಈಗ ‘ಮಿಷನ್​ ಸಾಹಸ್' ಎಂದು ಕರೆಯಲಾಗಿದೆ. ಮಿಷನ್​ ಸಾಹಸ್​ನಡಿ ಆಕೆ ಎಲ್ಲ ಖಂಡಗಳ ಅತ್ಯಂತ ಎತ್ತರದ ಪರ್ವತಗಳನ್ನು ಏರಲು ಯತ್ನಿಸಲಿ. ಉತ್ತರ, ದಕ್ಷಿಣ ತುದಿಗಳನ್ನು ಮೆಟ್ಟಲಿ. ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಕಾಮ್ಯಾ ಈ ದೇಶದ ಯುವಜನತೆಗೆ ಪ್ರೇರಣೆಯಾಗಿದ್ದಾಳೆಂದು ಹಾಡಿ ಹೊಗಳಿದ್ದಾಳೆ.

మరింత సమాచారం తెలుసుకోండి: