ನವದೆಹಲಿ: ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್​ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲ್ ​ಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಮಾಡಿದ್ದಾದರೂ ಏನು ಗೊತ್ತಾ!? 
 
ಗುಜರಾತಿನ ಅಹಮದಾಬಾದ್​ ನಿಂದ ಕುಟುಂಬ ಸಮೇತ ತೆರಳಿದ ಟ್ರಂಪ್​ ಸಂಜೆ 4.20ರ ಹೊತ್ತಿಗೆ ಆಗ್ರಾಗೆ ಬಂದಿಳಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್​ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯಾ ನಾಥ್​ ಟ್ರಂಪ್​ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್​ ದಂಪತಿಗೆ ಗೌರವ ಸಲ್ಲಿಸಿದರು. ಬಳಿಕ ಕಾರು ಹತ್ತಿ ಟ್ರಂಪ್​ ದಂಪತಿ ತಾಜ್​ ಮಹಲ್​ ಕಡೆ ಹೊರಟರು. ಹೌದು, ಅದ್ಧೂರಿ ಸಂಪ್ರದಾಯಗಳ ಕಲಾ ವೈಭವವನ್ನು ಕಣ್ತುಂಬಿಕೊಂಡ ನಾವೇ ಧನ್ಯರು ಎಂದರು. 
 
ತಾಜ್​ ಮಹಲ್ ​ಗೆ ಆಗಮಿಸಿದ ಟ್ರಂಪ್​ ದಂಪತಿಗೆ ಅಚ್ಚರಿಯು ಕಾದಿತ್ತು. ವಿವಿಧ ಕಲಾ ತಂಡಗಳು ಟ್ರಂಪ್​ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಭಾರತ ಬಾವುಟ ಹಿಡಿದು ವಿದ್ಯಾರ್ಥಿಗಳು ಟ್ರಂಪ್​ ದಂಪತಿಯನ್ನು ಖಷಿಯಿಂದಲೇ ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಜನ ವಿಶ್ವದ ದೊಡ್ಡಣ್ಣನನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಅಲ್ಲದೆ, ಟ್ರಂಪ್​ ದಂಪತಿ ಸ್ವಾಗತ ಕೋರುವ ಪೋಸ್ಟರ್ ​ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು. ಭವ್ಯ ಸ್ವಾಗತ ನೋಡಿದ ಟ್ರಂಪ್ ದಂಪತಿ ಅವರು ಆಶ್ಚರ್ಯಚಿಕಿತರಾದರು. 
 
ಇದಕ್ಕೂ ಮುನ್ನು ಬೆಳಗ್ಗೆಯಷ್ಟೇ ಅಹಮದಾಬಾದ್ ​ನ ಸರ್ದಾರ್​ ವಲ್ಲಭಭಾಯಿ ಪಟೇಲ್​ ವಿಮಾನ ನಿಲ್ದಾಣಕ್ಕೆ ಪತ್ನಿ ಮೆಲೆನಿಯಾ ಟ್ರಂಪ್​, ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಹಾಗೂ ಅಮೆರಿಕ ನಿಯೋಗದೊಂದಿಗೆ ಅಧ್ಯಕ್ಷ ಟ್ರಂಪ್​ ಬಂದಿಳಿದರು. ಬಳಿಕ ಮೆರವಣಿಗೆಯಲ್ಲಿ ಸ್ಮರಣೀಯ ಸ್ವಾಗತದೊಂದಿಗೆ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಮೊಟೇರಾ ಸ್ಟೇಡಿಯಂಗೆ ತೆರಳಿದರು. ನಂತರ “ನಮಸ್ತೆ ಟ್ರಂಪ್​” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ತಾಜ್​ ಮಹಲ್ ನೋಡುವ ಇಂಗಿತವನ್ನೂ ಟ್ರಂಪ್​ ವ್ಯಕ್ತಪಡಿಸಿದ್ದರು. ಆದ್ದರಿಂದ ತಾಜ್ ಮಹಲ್ ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ.
 
 

మరింత సమాచారం తెలుసుకోండి: