ರಾಮನಗರ: ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಬಿಜೆಪಿ ತನ್ನ ಮಾಸ್ಟರ್ ಪ್ಲಾನ್ ನೊಂದಿಗೆ ಅಧಿಕಾರಕ್ಕೇರಿದರೆ, ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗೆಲ್ಲಲಾರದೇ ಮಕಾಡೆ ಮಲಗಿವೆ. ಇದು ಇತ್ತೀಚೆಗೆ ನಡೆದ ಬೈ ಎಲೆಕ್ಷನ್ ನಲ್ಲೂ ಕೂಡ ಸಾಬೀತಾಯಿತು. ಆದರೆ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ. ಹೌದು, ಅದು ಹೇಗೆ ಎಂಬ ಮಾಹಿತಿ ಅವರೇ ವಿವರಿಸಿ ಹೇಳಿದ್ದಾರೆ ನೋಡಿ. 
 
ಜೆಡಿಎಸ್ ಪಕ್ಷ ಸಂಘಟನೆಯು ನಿರಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಹೊಸ ಸ್ಟ್ರಾಟರ್ಜಿ ಗಳು ಮಾಡುತ್ತಿದ್ದೇವೆ. ಯಾರ ಹಂಗಿಲ್ಲದೇ ಸ್ವಾತಂತ್ರ್ಯ ಸರ್ಕಾರ ತರಲು ಮಾಸ್ಟರ್ ಪ್ಲ್ಯಾನ್ ನಡೆಯುತ್ತಿದೆ. ಯಾರು ಎಷ್ಟೇ ಪ್ರಯತ್ನಿಸಿದರೂ, ಪ್ಲಾನ್ ಮಾಡಿದರೂ ಸಹ ಗೆಲ್ಲೋದು ಮಾತ್ರ ಜೆಡಿಎಸ್ ಎಂದು ಹೇಳಿದ್ದಾರೆ. 
 
ಇನ್ನು ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಸಂಪರ್ಕದಲ್ಲಿದ್ದೇವೆ. ಈಗಾಗಲೇ ಅವರ ಜೊತೆಗೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಅದರ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದರು. ಇದೇ ವೇಳೆ ಮಹದಾಯಿ ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಲವು ವರ್ಷಗಳಿಂದ ನಮ್ಮ ಹಕ್ಕಿಗಾಗಿ ಹೋರಾಟ ಮಾಡಿದ್ದೇವೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮುಂದಿನ ಪ್ರಕ್ರಿಯೆ ಗಳನ್ನು ಸರ್ಕಾರ ಮಾಡಬೇಕಿದೆ ಎಂದು ನುಡಿದರು.
 
ಜೊತೆಗೆ ಮೇಕೆದಾಟು ಯೋಜನೆ ಸಹ ಆಗಬೇಕು. ನಾನು ಸಹ ಕೇಂದ್ರದ ನೀರಾವರಿ ಸಚಿವರನ್ನ ಭೇಟಿ ಮಾಡಿದ್ದೇನೆ. ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಕೂಡ ಮಾಡಿದ್ದೇನೆ. ಕೇಂದ್ರ ಸರ್ಕಾರ ಕೂಡ ಸಕರಾತ್ಮಕವಾಗಿ ಸ್ಪಂದಿಸಿದೆ. ಇವತ್ತಲ್ಲ ನಾಳೆ ಮೇಕೆದಾಟು ಯೋಜನೆ ಆಗಲೇ ಬೇಕು ಎಂದು ಹೆಚ್​ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
 
 

మరింత సమాచారం తెలుసుకోండి: