ಬೆಂಗಳೂರು: ಮಾಜಿ ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ ಪರಮೇಶ್ವರ್​​, ಜೆಡಿಎಸ್ ನ ಮಾಜಿ ಸಚಿವರಾದ ಎಚ್​​.ಡಿ ರೇವಣ್ಣ, ಮಾಜಿ ಸಚಿವ ಡಿ.ಕೆ ಶಿವಕುಮಾರ್​​, ಕೆ.ಜೆ ಜಾರ್ಜ್, ಎಂ. ಬಿ ಪಾಟೀಲ್ ಸೇರಿದಂತೆ ಹಲವರ ಭಧ್ರತೆ ಕಡಿತಕ್ಕೆ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ಇದ್ದಕ್ಕಿದ್ದಂತೆ ಈ ಬೆಳವಣಿಗೆ ಆಗಿದ್ದೇಕೆ? ಇಲ್ಲಿದೆ ನೋಡಿ ಮಾಹಿತಿ. 
 
ಕಳೆದ ವರ್ಷದ ಕಾಂಗ್ರೆಸ್ ​ಜೆಡಿಎಸ್​​ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ 27 ಮಂದಿ ಮಾಜಿ ಸಚಿವರಿಗೆ ನೀಡಲಾಗಿದ್ದ ಅಂಗರಕ್ಷಕ ಭದ್ರತೆ ಹಾಗೂ ನಿವಾಸದ ಗಾರ್ಡ್ ಭದ್ರತೆ ಹಿಂಪಡೆಯುವಂತೆ ಆದೇಶ ಹೊರಡಿಸಲಾಗಿದೆ. ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್​​, ಮಾಜಿ ಸಚಿವರಾದ ಎಚ್​​.ಡಿ ರೇವಣ್ಣ, ಡಿ.ಕೆ ಶಿವಕುಮಾರ್​​, ಕೆ.ಜೆ ಜಾರ್ಜ್, ಎಂ. ಬಿ ಪಾಟೀಲ್ ಸೇರಿದಂತೆ ಹಲವರ ಭಧ್ರತೆ ಕಡಿತಕ್ಕೆ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ತುರ್ತು ಆದೇಶ ಹೊರಡಿಸಿದ್ದಾರೆ.
 
ಇನ್ನು ಮಾಜಿ ಸಚಿವ ಆರ್.ವಿ ದೇಶಪಾಂಡೆ, ಬಂಡೆಪ್ಪ ಕಾಶಪ್ಪನವರ್, ಜಿ.ಟಿ.ದೇವೇಗೌಡ, ಡಿ ಸಿ ತಮ್ಮಣ್ಣ, ಕೃಷ್ಣ ಭೈರೇಗೌಡ, ಎಂ.ಸಿ. ಮನಗೂಳಿ, ಎನ್‌.ಎಚ್. ಶಿವಶಂಕರ ರೆಡ್ಡಿ, ಶ್ರೀನಿವಾಸ, ರಮೇಶ್ ಜಾರಕಿಹೋಳಿ, ಜಿ.ಟಿ ದೇವೆಗೌಡ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ , ಸಿ.ಎಸ್. ಪುಟ್ಟರಾಜು, ಯು.ಟಿ.ಖಾದರ್, ಸಾ.ರಾ. ಮಹೇಶ್ ನೀಡಲಾಗಿದ್ದ ಅಂಗರಕ್ಷಕ ಭದ್ರತೆಯನ್ನು ವಾಪಸ್ಸು ಪಡೆಯಲಾಗಿದೆ. 
 
ಜತೆಗೆ ಉಚ್ಚಾಟಿತ ಬಿ.ಎಸ್​​.ಪಿ ಶಾಸಕ ಎನ್‌.ಮಹೇಶ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ ಪಾಟೀಲ್, ಸಿ.ಪುಟ್ಟರಂಗ ಶೆಟ್ಟಿ, ಆರ್. ಶಂಕರ್, ಜಯಮಾಲಾ, ಬಿ.ಆರ್. ತಿಮ್ಮಾಪೂರ್, ತುಕಾರಾಂ ಇ., ರಹೀಂ ಖಾನ್, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್ ನಾಯಕ್, ಜಮೀರ್ ಅಹ್ಮದ್ ಸೇರಿ 27 ಮಂದಿ ಅಂಗರಕ್ಷಕ ಭದ್ರತೆಯನ್ನು ವಾಪಸ್ಸು ಪಡೆದಿದ್ದಾರೆ.  ಈ ಬೆಳವಣಿಗೆ ಹಿಂದೆ ಇರೋ ಕಾರ್ಯವೇ ಬೇರೆ ಎಂಬ ಮಾಹಿತಿಯು ಸಹ ಹರಿದಾಡುತ್ತಿದ್ದು, ಸದ್ಯ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ತಲೆಕೆಡಿಸಿಕೊಂಡಿದೆ

మరింత సమాచారం తెలుసుకోండి: